'ಕನ್ನಡ ಚಿತ್ರರಂಗಕ್ಕೆ ನಾಯಕರ ಕೊರತೆ ಇದೆ' ಎಂಬ ಬಗ್ಗೆ ಉಪ್ಪಿ ಮಾತನ್ನಾಡಿ 'ಈ ಬಗ್ಗೆ ಪರ್ಸನಲ್ ಅಭಿಪ್ರಾಯ ಹೇಳೋಕೆ ಹೋದ್ರೆ ಸೀರಿಯಸ್ ಆಗಿ ವಿಷಯಗಳು ಹೋಗಲ್ಲ.. ನಾವು ಎಲ್ರು ಸೇರಿ ಈ ಬಗ್ಗೆ ಚರ್ಚೆ ಮಾಡಬೇಕು' ಎಂದಿದ್ದಾರೆ. ನಟ ಉಪೇಂದ್ರ ಅವರು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.
ಕನ್ನಡದ ರಿಯಲ್ ಸ್ಟಾರ್ ನಟ ಉಪೇಂದ್ರ ಹುಟ್ಟುಹಬ್ಬ!
ಕನ್ನಡದ ರಿಯಲ್ ಸ್ಟಾರ್ ನಟ ಉಪೇಂದ್ರ (Real Star Upendra) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57 ನೇ ವರ್ಷದ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡ್ತಿದ್ದಾರೆ ನಟ ಉಪೇಂದ್ರ. ಕತ್ರಿಗುಪ್ಪೆ ನಿವಾಸದಲ್ಲಿ ಫ್ಯಾನ್ಸ್ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ ನಟ ಉಪೇಂದ್ರ. ಈ ಸಂದರ್ಭದಲ್ಲಿ ನಟ ಉಪೇಂದ್ರ ಅವರು ಕೆಲವಾರು ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ.
'ಅಭಿಮಾನಿಗಳು ನಮಗೆ ಗೊತ್ತಿಲ್ಲದೆ ಪವರ್, ಅಂದ್ರೆ ಎನರ್ಜಿ ಕೊಡ್ತಾರೆ' ಎಂದಿದ್ದಾರೆ ನಟ ಉಪೇಂದ್ರ. ಜೊತೆಗೆ, ಅಲ್ಲೆ ಇದ್ದ '45' ಚಿತ್ರದ ಬೈಕ್ ತೋರಿಸಿ 'ಇದು ಅರ್ಜುನ್ ಜನ್ಯ ಐಡಿಯಾ, ಆ ಬೈಕ್ ಸಿನಿಮಾದಲ್ಲಿ ಬಳಸಿದೀವಿ, ನನ್ನ ಹೇರ್ ಸ್ಟೈಲ್ ಚೇಂಜ್ ಆಗುತ್ತೆ ಅದ್ರಲ್ಲಿ, ಆದ್ರೆ ಮೈಂಡ್ ಚೇಂಜ್ ಆಗಲ್ಲ..' ಅಂತ ಹೇಳಿ ಅಲ್ಲಿದ್ದ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ ರಿಯಲ್ ಸ್ಟಾರ್.
'ಈಗ ಸಿನಿಮಾಗಳನ್ನು ಈಸಿಯಾಗಿ ಮಾಡಬಹುದು, ಯೂಟ್ಯೂಬ್ನಲ್ಲೆ ಸಿನಿಮಾ ರಿಲೀಸ್ ಮಾಡಬಹುದು. ನಮ್ಮ ಸಿನಿಮಾವನ್ನು ಮೂರು ಸ್ಟೈಲ್ ಅಲ್ಲಿ ಸಿನಿಮಾ ಪ್ರೆಸೆಂಟ್ ಮಾಡಿದ್ದಾರೆ...' ಎಂದಿದ್ದಾರೆ ನಟ ಉಪ್ಪಿ. ಹಾಗೂ, ಇದೇ ವೇಳೆ ಪತ್ನಿ ಪ್ರಿಯಾಂಕಾ ಫೋನ್ ಹ್ಯಾಕ್ ಆಗಿರೋ ಬಗ್ಗೆ ಸಹ ಮಾತಾಡಿ ಎಲ್ಲ ವಿವರನೆ ಹಂಚಿಕೊಂಡಿದ್ದಾರೆ. ಈ ಸಂಗತಿಗಳು ಈಗಾಗಲೇ ಮಾಧ್ಯಮಗಳ ಮೂಲಕ ಇಡೀ ಕರ್ನಾಟಕಕ್ಕೆ ತಲುಪಿದೆ.
ಕೆಲಸ ಮಾಡ್ದೆ ಕನಸು ಕಂಡಿರ್ಲಿಲ್ಲ!
ಇನ್ನು ಸಿನಿಮಾ ವಿಷಯಕ್ಕೆ ಬಂದರೆ, ನಟ ಉಪೇಂದ್ರ ಅವರು 'Next ಲೆವೆಲ್, ಭಾರ್ಗವ ಹಾಗೂ 45 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಂಗತಿಯನ್ನು ಹೇಳಿದ ನಟ ಉಪೇಂದ್ರ ಅವರು 'ಇದು ಮೊದಲ ಮನೆ ನಮ್ದು.. ಕೆಲಸ ಮಾಡ್ದೆ ಕನಸು ಕಂಡಿರ್ಲಿಲ್ಲ, ಕೆಲಸದ ಮೂಲಕ ನಾವು ಕಟ್ಟಿಕೊಂಡ ಮನೆ ಇದು. ಇಲ್ಲಿ ಎಮೋಷನ್ ಇದೆ ಫ್ಯಾನ್ಸ್ ಇಲ್ಲೇ ಸೆಲೆಬ್ರೇಶನ್ ಬೇಕು ಅಂತಾರೆ. ಅದಕ್ಕೇ ಇಲ್ಲೇ ನನ್ನ ಹುಟ್ಟುಹಬ್ಬ ಆಚರಣೆ ಮಾಡೋದು' ಎಂದಿದ್ದಾರೆ.
ಇದೇ ವೇಳೆ ನಟ ಉಪೇಂದ್ರ ಅವರು ಪ್ರಜಾಕೀಯದ ಬಗ್ಗೆ ಮಾತಾಡಿದ್ದಾರೆ. 'ನಾಲ್ಕೈದು ವರ್ಷಗಳಿಂದ ಹೇಳ್ತಿದೀನಿ.. ಇನ್ಮುಂದೆ
ನಾಯಕನ ಕಾನ್ಸೆಪ್ಟ್ ಹೋಗುತ್ತೆ..' ಎಂದಿದ್ದಾರೆ.
ಇನ್ನು ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನ್ನಾಡುತ್ತ 'ನನ್ನ ಅದೃಷ್ಟ, ವಿಷ್ಣುವರ್ಧನ್ ಜನ್ಮದಿನದಂದೇ ನಂದೂ ಹಂಚಿಕೊಂಡು ಹುಟ್ಟಿದೀನಿ..' ಎಂದು ಹೇಳಿದ್ದಾರೆ.
ಇನ್ನು ವಿಷ್ಣು ಸ್ಮಾರಕ ಧ್ವಂಸ ಆದಾಗ 'ಸ್ಮಾರಕಕ್ಕಳಿವುಂಟಯ ಜಂಗಮಕ್ಕಲ್ಲ' ಎಂಬ ಮಾತಿಗೆ ತೀವ್ರ ವಿರೋಧ ಬಂದ ಹಿನ್ನಲೆ ರಿಯಾಕ್ಷನ್ ಕೊಟ್ಟಿದ್ದಾರೆ ನಟ ಉಪೇಂದ್ರ! 'ನನ್ನ ಮಾತು ಬೇರೆ ಅರ್ಥ ಕಲ್ಪಿಸಿಕೊಂಡಿದೆ. ನಾನು ಸ್ಮಾರಕ ಬೇಡ ಅಂದಿಲ್ಲ , ಸ್ಮಾರಕ ಬೇಕು.. ಫ್ಯಾಮಿಲಿ ಮೈಸೂರಿನಲ್ಲಿ ಭಯಸಿತ್ತು ಆಗಿದೆ. ವಿಷ್ಣುವರ್ಧನ್ ಅವರನ್ನು ಕ್ರಿಯೇಟ್ ಮಾಡಿದ್ದು ಫ್ಯಾನ್ಸ್.. ಫ್ಯಾನ್ಸ್ ಆಸೆ ಈಡೇರಲಿ..' ಎಂದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ನಾಯಕರ ಕೊರತೆ ಇದೆ?
ಬಳಿಕ, 'ಕನ್ನಡ ಚಿತ್ರರಂಗಕ್ಕೆ ನಾಯಕರ ಕೊರತೆ ಇದೆ' ಎಂಬ ಬಗ್ಗೆ ಉಪ್ಪಿ ಮಾತನ್ನಾಡಿ 'ಈ ಬಗ್ಗೆ ಪರ್ಸನಲ್ ಅಭಿಪ್ರಾಯ ಹೇಳೋಕೆ ಹೋದ್ರೆ ಸೀರಿಯಸ್ ಆಗಿ ವಿಷಯಗಳು ಹೋಗಲ್ಲ.. ನಾವು ಎಲ್ರು ಸೇರಿ ಈ ಬಗ್ಗೆ ಚರ್ಚೆ ಮಾಡಬೇಕು' ಎಂದಿದ್ದಾರೆ. ಒಟ್ಟಿನಲ್ಲಿ ನಟ ಉಪೇಂದ್ರ ಅವರು ತಮ್ಮ 57ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಆಚರಣೆ ಮಾಡಿಕೊಂಡಿದ್ದಾರೆ.


