ನಟಿ ಶ್ರುತಿ ಸೇರಿದಂತೆ ಮತ್ತೂ ಕೆಲವರು ಆಸ್ಪತ್ರೆಗೆ ಭೇಟಿ ನೋಡಿ ನಟ ಉಮೇಶ್ ಅವರ ಅನಾರೋಗ್ಯದ ಬಗ್ಗೆ ವಿಚಾರಿಸಕೊಂಡಿದ್ದಾರೆ. ಅವರನ್ನೂ ಭೇಟಿಯಾದಾಗ ನಟ ಉಮೇಶ್ ಅವರು ಶ್ರುತಿ ಸೇರಿದಂತೆ ಅವರ ಆಪ್ತರೊಂದಿಗೆ ಹಲವು ನಿಮಿಷಗಳ ಕಾಲ ಮಾತನ್ನಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಜೀವನೋತ್ಸಾಹ ಕಳೆದುಕೊಳ್ಳದ ನಟ ಉಮೇಶ್
ಕನ್ನಡದ ಹಿರಿಯ ನಟ ಉಮೇಶ್ (Actor Umesh) ಅವರು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಗೊತ್ತೇ ಇದೆ. ಅವರನ್ನು ನೋಡಲು ಅಲ್ಲಿಗೆ ಅವರ ತಲೆಮಾರಿನ ಹಾಗೂ ಹಿರಿಯ-ಕಿರಿಯ ಕಲಾವಿದರ ಭೇಟಿ ನೀಡುತ್ತಿದ್ದಾರೆ. ಅವರೊಂದಿಗೆ ನಟ ಉಮೇಶ್ ಅವರು ಸ್ವಲ್ಪವೂ ಜೀವನೋತ್ಸಾಹ ಕಳೆದುಕೊಳ್ಳದೇ ನಗುತ್ತಿದ್ದಾರೆ, ನಗಿಸುತ್ತಿದ್ದಾರೆ. ನಟ ಉಮೇಶ್ ಅವರು ಆಸ್ಪತ್ರೆಯ್ಲಲಿ ಕೂಡ ತಮ್ಮವರನ್ನು, ತಮ್ಮ ಸಹಕಲಾವಿದರನ್ನು ಹಾಗೂ ಆತ್ಮೀಯರನ್ನು ನೆನಪಿಸಿಕೊಂಡು ಮಾತನಾಡುತ್ತಲೇ ಇದ್ದಾರೆ ಎಂದು ಅಸ್ಪತ್ರೆಯ ಸಿಬ್ಬಂದಿ ಹೇಳುತ್ತಿದ್ದಾರೆ.
ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಯಲ್ಲಿ ಮಲಗಿರುವ ನಟ ಉಮೇಶ್ ಅವರನ್ನು ವಿಚಾರಿಸಿಕೊಳ್ಳಲು ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಅಲ್ಲಿಗೆ ಹೋಗಿದ್ದಾರೆ. ಆಗ ನಟ ಉಮೇಶ್ ಅವರು ಹಸನ್ಮುಖರಾಗಿದ್ದು ಗಿರಿಜಮ್ಮ ಅವರೊಂದಿಗೆ ನಕ್ಕುನಗಿಸುತ್ತ ಮಾತನ್ನಾಡಿದ್ದಾರೆ. ಗಿರಿಜಮ್ಮ ಶುರುಮಾಡಿದ್ ಹಾಡಿನ ಸಾಲನ್ನು ಉಮೇಶಣ್ಣ ಅವರು ಮುಂದುವರೆಸುತ್ತ 'ಯಾರ ಶಾಪವಿದೋ, ಇದಕೇನು ಕಾರಣವೋ..' ಎಂದು ಇಬ್ಬರೂ ಹಾಡಿ ನಕ್ಕಿದ್ದಾರೆ, ಆ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.
https://www.facebook.com/reel/3088097311364890
ಗಿರಿಜಮ್ಮನ ಜೊತೆ ಉಮೇಶ್ ಹಾಡುಪಾಡು
ಬಳಿಕ, ಅವರಿಬ್ಬರು ಸ್ವಲ್ಪ ಹೊತ್ತು ಮಾತನ್ನಾಡಿದ್ದಾರೆ. ಆಗ ಗಿರಿಜಮ್ಮನವರು ‘ದೃಷ್ಟಿಯಾಗ್ಬಿಡುತ್ತೆ ನಿಮ್ಗೆ ದೃಷ್ಟಿ..’ ಎಂದು ಹೇಳುತ್ತ ಉಮೇಶ್ ಅವರಿಗೆ ಲಟಿಕೆ ತೆಗೆಯುವ ಮೂಲಕ ದೃಷ್ಟಿ ತೆಗೆದಿದ್ದಾರೆ. ನಂತರ, ಗಿರಿಜಮ್ಮನವರು 'ಅವ್ರಿಗೆ ಯಾವನೋವೂ ಗೊತ್ತಾಗ್ದೇ ಇರಲಪ್ಪ ಭಗವಂತ' ಅಂತ ಬೇಡ್ಕೋತೀನಿ' ಅಂದಿದ್ದಾರೆ. ಅದಕ್ಕೆ ಉಮೇಶ್ ಅವರು 'ಸಾವು, ನೋವು ಎಲ್ಲಾ ಮನುಷ್ಯನಿಗೆ ಸಾಮಾನ್ಯ ತಾನೇ? ಅದು ಯಾರಿಗೂ ತಪ್ಪಿದ್ದಲ್ಲ.. ದೇವರು ನಮ್ಮ ಕಣ್ಣಿಗೆ ಕಾಣಲ್ಲ, ಅವ್ರಿಗೂ ಇದೆಲ್ಲಾ ಇರುತ್ತೋ ಇಲ್ವೋ ಯಾರಿಗೆ ಗೊತ್ತು ' ಎಂದಿದ್ದಾರೆ. ಹೀಗೆ ಸ್ವಲ್ಪ ಹೊತ್ತು ಆ ಎರಡು ಹಿರಿಯ ಜೀವಗಳ ಮಾತುಕತೆ ನಡೆದಿದೆ.
ನಟಿ ಶ್ರುತಿ ಭೇಟಿ
ಇನ್ನು, ನಟಿ ಶ್ರುತಿ ಸೇರಿದಂತೆ ಮತ್ತೂ ಕೆಲವರು ಆಸ್ಪತ್ರೆಗೆ ಭೇಟಿ ನೋಡಿ ನಟ ಉಮೇಶ್ ಅವರ ಅನಾರೋಗ್ಯದ ಬಗ್ಗೆ ವಿಚಾರಿಸಕೊಂಡಿದ್ದಾರೆ. ಭೇಟಿಯಾದಾಗ ನಟ ಉಮೇಶ್ ಅವರು ಶ್ರುತಿ ಸೇರಿದಂತೆ ಅವರ ಆಪ್ತರೊಂದಿಗೆ ಹಲವು ನಿಮಿಷಗಳ ಕಾಲ ಮಾತನ್ನಾಡಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದೇ ವೇಳೆ ನಟ ಉಮೇಶ್ ಅವರಿಗೆ 78 ವರ್ಷಗಳು ಆಗಿದ್ದರೂ ಜೀವನೋತ್ಸಾಹ ಕುಂದಿಲ್ಲ ಎಂಬ ಸಂಗತಿ ಎಲ್ಲರ ಗಮನಕ್ಕೂ ಬಂದಿದೆ. ಹಿರಿಯ ನಟನಿಗೆ ತಮ್ಮವರು, ಆಪ್ತರು ಹಾಗೂ ಸಹಕಲಾವಿದರ ಈ ಭೇಟಿಯಿಂದ ಸಾಕಷ್ಟು ಖುಷಿ ಆಗಿದೆ ಎಂಬುದನ್ನು ವಿಡಿಯೋದಲ್ಲಿ ಗಮನಿಸಬಹುದು. ನಟ ಉಮೇಶ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬುದು ಮನರಂಜನಾಪ್ರಿಯರೆಲ್ಲರ ಹಾರೈಕೆಯಾಗಿದೆ.
https://www.facebook.com/reel/3088097311364890


