ಇನ್‌ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿಯವರು ಒಂದು ಸಮುದಾಯದ ವಿರುದ್ಧ, ಹಾಗೂ ಇತ್ತೀಚಿನ ಆಪರೇಷನ್ ಸಿಂಧೂರ್ ವಿರುದ್ಧ ಮಾತನ್ನಾಡದಿರುವ ಕೆಲವು ಬಾಲಿವುಡ್ ಸೆಲೆಬ್ರಿಟಗಳ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದರು. ಬಳಿಕ, ಅದನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು.
ನವದೆಹಲಿ: ಬಾಲಿವುಡ್ ನಟಿ ಹಾಗೂ ಇತ್ತೀಚೆಗೆ ರಾಜಕೀಯ ಪ್ರವೇಶಿಸಿರುವ ಕಂಗನಾ ರಣಾವತ್ (Kangana Ranaut) ಅವರು, ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಹಾಗು ಇತ್ತೀಚಿನ 'ಆಪರೇಷನ್ ಸಿಂದೂರ್' ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ಸಮಬಂಧ ಬಂಧನಕ್ಕೊಳಗಾಗಿದ್ದಾರೆ. ಇದೀಗ ಕಂಗನಾ ರಣಾವತ್ ಶರ್ಮಿಷ್ಠಾ ಪನೋಲಿ ಅವರ ತಕ್ಷಣದ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಕಂಗನಾ ಈ ನಡವಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇನ್ಫ್ಲುಯೆನ್ಸರ್‌ಗಳ ಸಾರ್ವಜನಿಕ ನಡವಳಿಕೆ ಮತ್ತು ಕಾನೂನು ಪಾಲನೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೊತೆಗೆ, ಶರ್ಮಿಷ್ಠಾ ಪನೋಲಿಯ ಹೇಳಿಕೆ, ಕೇಳಿರುವ ಕ್ಷಮೆ ಹಾಗೂ ಬಂಧನ ಈ ಎಲ್ಲ ವಿಷಯಗಳೂ ಚರ್ಚೆಯ ಮುನ್ನಲೆಗೆ ಬಂದಿವೆ.
ಇನ್‌ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿಯವರು ಒಂದು ಸಮುದಾಯದ ವಿರುದ್ಧ, ಹಾಗೂ ಇತ್ತೀಚಿನ ಆಪರೇಷನ್ ಸಿಂಧೂರ್ ವಿರುದ್ಧ ಮಾತನ್ನಾಡದಿರುವ ಕೆಲವು ಬಾಲಿವುಡ್ ಸೆಲೆಬ್ರಿಟಗಳ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದರು. ಬಳಿಕ, ಆ ಪೋಸ್ಟ್‌ಗೆ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಅದನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು. ಆದರೆ, ವಿವಾದ ಗಂಭೀರವಾಗುತ್ತಿದ್ದಂತೆ, ಕೊಲ್ಕತಾ ಪೊಲೀಸರು ಇನ್‌ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿಯನ್ನು ಬಂಧಿಸಿದ್ದಾರೆ.
ಆದರೆ, ಯಾವುದೇ ಮುನ್ಸೂಚನೆ ಇಲ್ಲದ ಆಕೆಯ ಬಂಧನ ಆಗಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಜೊತೆಗೆ ಆಕೆ ಕ್ಷಮೆ ಕೇಳಿದ್ದರೂ ಆಕೆಯ ಬಂಧನ ಅಗಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಇದೀಗ, ನಟಿ ಹಾಗೂ ಹಾಲಿ ಮಂಡಿ ಸಂಸದೆ ಕಂಗನಾ ರಣಾವತ್ ಅವರು ಶರ್ಮಿಷ್ಠಾ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಆಗ್ರಹಿಸಿದ್ದಾರೆ. ಸದ್ಯ ಬಂಧನದಲ್ಲಿರುವ ಶರ್ಮಿಷ್ಠಾ ಪನೋಲಿಯ ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.
ಈ ಬಗ್ಗೆ ಪೋಸ್ಟ್ ಹಾಕಿರುವ ಕಂಗನಾ ರಣಾವತ್ 'ಹೌದು, ಆಕೆ ಕೆಲವು ಆಕ್ಷೇಪಾರ್ಹ ಪದಗಳನ್ನು ಪೋಸ್ಟ್‌ನಲ್ಲಿ ಬಳಸಿದ್ದಾರೆ. ಈಗಿನ ಯಂಗ್ ಜನರೇಶನ್ ಆ ತರಹದ ಪದಗಳನ್ನು ಬಳಕೆ ಮಾಡುವುದು ಸಹಜ. ತಕ್ಷಣ ಅದನ್ನರಿತು ಆಕೆ ಆ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆಯನ್ನೂ ಕೇಳಿದ್ದಾಳೆ. ಈಗ ಅದನ್ನು ಮತ್ತೆ ಎಳೆದು ಆಕೆಯನ್ನು ಹೆಚ್ಚು ಹಿಂಸಿಸುವ ಅಗತ್ಯವಿಲ್ಲ. ತಕ್ಷಣ ಆಕೆಯನ್ನು ಹೆಚ್ಚಿನ ಯಾವುದೇ ಶಿಕ್ಷೆಗೆ ಗುರಿ ಪಡಿಸದೇ ಬಿಡುಗಡೆ ಮಾಡಬೇಕು ಎಂದು ಸಂಸದೆ ಕಂಗನಾ ರಣಾವತ್ ಆಗ್ರಹಿಸಿದ್ದಾರೆ.
ಅಂದಹಾಗೆ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ ನಟನೆಯ ‘ಎಮರ್ಜನ್ಸಿ’ ಚಿತ್ರವು ಇತ್ತೀಚಿಗಷ್ಟೇ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ನಟಿ ಕಂಗನಾ ರಣಾವತ್ ರಾಜಕೀಯವಾಗಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಇತ್ತೀಚಿಗಂತೂ ತಮ್ಮ ಬಿಲೀ ಕೂದಲಿಗೆ ಡೈ ಕೂಡ ಹಾಕದೇ ತಾವಿನ್ನು ರಾಜಕೀಯಲ್ಲೆ ಮೀಸಲು ಎಂಬಂತಹ ಸಂದೇಶವನ್ನೂ ಸಹ ನೀಡಿದ್ದಾರೆ.


