ಕರ್ಣ ಸೀರಿಯಲ್​ ವಿವಾದ ಕೋರ್ಟ್​ ಅಂಗಳದಿಂದ ಓಟಿಟಿಗೆ ಕಾಲಿಟ್ಟಿದ್ದು, ಟಿವಿ ಪರದೆಯ ಮೇಲೂ ನಾಳೆಯಿಂದ ಪ್ರಸಾರ ಆಗಲಿದೆ. ಇದರ ನಡುವೆಯೇ, ಕರಣ್​ ಮತ್ತು ನಿಧಿಯ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. 

ಕಳೆದ ತಿಂಗಳೇ ಜೀ ಟಿವಿಯಲ್ಲಿ ತೆರೆ ಕಾಣಬೇಕಿದ್ದ ಕರ್ಣ ಸೀರಿಯಲ್​ ಕೋರ್ಟ್​ ಕೇಸ್​ನಿಂದಾಗಿ ಇನ್ನೂ ಶುರುವಾಗಿಲ್ಲ ಎನ್ನುವುದು ಸೀರಿಯಲ್​ ಪ್ರಿಯರಿಗೆ ತಿಳಿದಿರುವ ವಿಷಯವೇ. ಈ ಸೀರಿಯಲ್​ ಪ್ರೊಮೋ ಸಾಕಷ್ಟು ಹವಾ ಸೃಷ್ಟಿಸಿತ್ತು. ಜೂನ್​ 16ರಿಂದ ಇದು ಆರಂಭವಾಗುವುದಾಗಿ ವಾಹಿನಿ ಹೇಳಿತ್ತು. ಇದಕ್ಕಾಗಿಯೇ ಹಾಲಿ ಇರುವ ಕೆಲವು ಸೀರಿಯಲ್​ಗಳ ಸಮಯವನ್ನೂ ಬದಲು ಮಾಡಲಾಗಿತ್ತು. ವಿಭಿನ್ನ ಕಥೆಯನ್ನು ಹೊತ್ತ ಕರ್ಣ ಸೀರಿಯಲ್​ಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಏಕಾಏಕಿ, ಸೀರಿಯಲ್​ ಮುಂದೂಡುವುದಾಗಿ ವಾಹಿನಿ ಹೇಳಿಕೊಂಡು ವೀಕ್ಷಕರಿಗೆ ಶಾಕ್​ ಕೊಟ್ಟಿತ್ತು. ಈ ಸೀರಿಯಲ್​ನಲ್ಲಿ ನಟಿಸ್ತಿರೋ ಭವ್ಯಾ ಗೌಡ ಅವರು ಇನ್ನೊಂದು ಚಾನೆಲ್​ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಪ್ರಕಾರ ಅವರು ಕೆಲ ತಿಂಗಳ ಮಟ್ಟಿಗೆ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತೆ ಇರಲಿಲ್ಲ. ಆದರೆ, ಅದನ್ನು ಭವ್ಯಾ ಅವರು ಮೀರಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಆ ಚಾನೆಲ್​ ಕೋರ್ಟ್​ಗೆ ದೂರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ಸೀರಿಯಲ್​ಗೆ ತಡೆ ಬಂದಿದೆ. ಇದರಿಂದಾಗಿ ಕೋರ್ಟ್​ನಲ್ಲಿ ಈ ಕೇಸ್​ ಮುಗಿಯುವವರೆಗೂ ಸೀರಿಯಲ್​ ಪ್ರಸಾರ ಆಗುವುದಿಲ್ಲ ಎನ್ನಲಾಗಿತ್ತು.

ಆದರೆ ಸೀರಿಯಲ್​ ಅನ್ನು ಮರೆಯಬಾರದು ಎನ್ನುವ ಕಾರಣಕ್ಕೆ ಇದರ ಬಗೆಬಗೆ ಪ್ರೊಮೋಗಳನ್ನು ವಾಹಿನಿ ಅಪ್​ಲೋಡ್ ಮಾಡುತ್ತಲೇ ಇರುತ್ತದೆ. ಆದರೆ ಕುತೂಹಲದ ವಿಷಯ ಏನೆಂದರೆ ಈ ಸೀರಿಯಲ್​ ಟಿವಿಗೂ ಮೊದಲೇ ಓಟಿಟಿಯಲ್ಲಿ ತೆರೆ ಕಂಡಿದೆ. ಇದಾದ ಬಳಿಕ ನಾಳೆಯಿಂದ ಅರ್ಥಾತ್​ ಜುಲೈ 3ರಿಂದ ರಾತ್ರಿ 8 ಗಂಟೆಗೆ ಪ್ರತಿದಿನ ಪ್ರಸಾರ ಆಗಲಿದೆ. ಇದರ ನಡುವೆಯೇ, ಇದೀಗ ಸೀರಿಯಲ್​ ನಾಯಕ ಮತ್ತು ನಾಯಕಿಯ ರೊಮಾಂಟಿಕ್​ ಹಾಡನ್ನು ಶೇರ್​ ಮಾಡಲಾಗಿದೆ.ಶುರುವಾಗಿದೆ ಏಕೋ‌ ರೂಪಾಂತರ, ಸಣ್ಣ ಸಲ್ಲಾಪಕೂ ಇಲ್ಲಿ ಕಾತರ ಹಾಡಿಗೆ ಈ ಜೋಡಿ ಆ್ಯಕ್ಟ್​ ಮಾಡಿದ್ದು, ಜೋಡಿಯನ್ನು ನೋಡಿ ನೆಟ್ಟಿಗರು ಫುಲ್​ ಖುಷ್​ ಆಗಿದ್ದಾರೆ. ಅತಿ ಶೀಘ್ರದಲ್ಲಿ ಸೀರಿಯಲ್​ ಶುರು ಮಾಡಿ ಎಂದು ಗೋಗರೆಯುತ್ತಿದ್ದಾರೆ.

ಅಂದಹಾಗೆ ಈ ಸೀರಿಯಲ್​ನಲ್ಲಿ ಭವ್ಯಾ ಅವರ ಹೆಸರು ನಿಧಿ. ಸೀರಿಯಲ್​ನಲ್ಲಿ ಇದರಲ್ಲಿ ನಿಧಿ ತುಂಬಾ ಎಕ್ಸ್​ಪ್ರೆಸಿವ್​. ಏನೇ ಸಣ್ಣಪುಟ್ಟ ವಿಚಾರಕ್ಕೂ ಖುಷಿ ಪಡ್ತಾಳೆ. ಇದರ ಬಗ್ಗೆ ಭವ್ಯಾ ಮಾತನಾಡಿದ್ದರು. ಈ ಥರ ಪಾತ್ರ ಮಾಡಲು ನಾನು ತುಂಬಾ ಕಲಿಯಬೇಕು, ಕಲೀತಾ ಇದ್ದೇನೆ. ಇದು ನನ್ನ ಲರ್ನಿಂಗ್​ ಸ್ಟೇಜ್​. ನರ್ಸರಿಯಿಂದ ಮೇಲಕ್ಕೆ ಹೋಗುತ್ತಿದ್ದಾಳೆ ನಿಧಿ ಎಂದಿದ್ದರು. ಈ ಸೀರಿಯಲ್​ ಪ್ರೊಮೋ ಆರಂಭದಲ್ಲಿ ಬಿಟ್ಟಾಗ ಕರ್ಣನ ಪಾತ್ರ ಮಾತ್ರ ಕಾಣಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಪ್ರೊಮೋದಲ್ಲಿ ಇದೇ ಬೆಸ್ಟ್​ ಎನ್ನಿಸಿಕೊಂಡು ಮನೆಯಲ್ಲಿ ಮಾತನಾಡುತ್ತಾ ಇದ್ವಿ. ಆದರೆ ಅದೇ ಸಮಯದಲ್ಲಿ ನನಗೇ ಕಾಲ್​ ಬಂತು. ನಾಯಕಿ ಪಾತ್ರಕ್ಕೆ ನೀವು ಬರಬೇಕು ಎಂದಾಗ ತುಂಬಾ ಆಶ್ಚರ್ಯ ಆಯಿತು. ಇಷ್ಟು ಒಳ್ಳೆಯ ಪ್ರಾಜೆಕ್ಟ್​ ಬಿಡಬೇಡ, ಅವಕಾಶ ಸಿಕ್ಕಿದೆ ಹೋಗು ಎಂದು ಅಮ್ಮನೂ ಹೇಳಿದ್ರು. ಅದಕ್ಕಾಗಿ ನಾನೂ ಒಪ್ಪಿಕೊಂಡೆ ಎಂದು ಹೇಳಿದ್ದರು.

ಈ ಸೀರಿಯಲ್​ನಲ್ಲಿ ಭವ್ಯಾ ಅವರು ನಿಧಿ ಎನ್ನುವ ಡಾಕ್ಟರ್​ ಪಾತ್ರ ಮಾಡಿದ್ದಾರೆ. ಇದು ತುಂಬಾ ಚಾಲೆಂಜಿಂಗ್​ ಪಾತ್ರ. ಇದಕ್ಕಾಗಿ ನಾನು ಸಾಕಷ್ಟು ವರ್ಕ್​ಮಾಡಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಈ ಸೀರಿಯಲ್​ನಲ್ಲಿ ತುಂಬಾ ಖ್ಯಾತ ನಟರು ಇದ್ದಾಗ, ನನ್ನನ್ನು ಸೆಲೆಕ್ಟ್​ ಮಾಡಿದ್ದು ತುಂಬಾ ಖುಷಿಕೊಟ್ಟಿದೆ. ಇದನ್ನು ನಾನು ಅಂದುಕೊಂಡೇ ಇರಲಿಲ್ಲ. ಇಂಡಸ್ಟ್ರಿಗೆ ಕಾಲಿಟ್ಟು ಕೆಲವೇ ವರ್ಷ ಆಗಿದ್ದರೂ ನಾಯಕಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ತಿರೋದಕ್ಕೆ ತುಂಬಾ ಖುಷಿ ಇದೆ ಎಂದಿದ್ದರು. ಆದರೆ, ಇದರ ನಡುವೆಯೇ ಕಾನೂನು ಸಂಕಷ್ಟ ಎದುರಾಗಿತ್ತು. ಸದ್ಯ ನಾಳೆಯಿಂದ ಪ್ರತಿರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. 

View post on Instagram