ಕಾಳಿದಾಸ ಎಂಬ ಪಾತ್ರದ ಮೂಲಕವೇ ಈ ಸಿನಿಮಾದ ಕತೆ ನಡೆಯುತ್ತಿರುತ್ತದೆ. ಅವನ ಜಗತ್ತಲ್ಲಿ ಯಾರಾರಿದ್ದಾರೆ ಎಂಬುದನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ನೋಡುಗರೂ ಕನೆಕ್ಟ್‌ ಆಗುತ್ತಾರೆ ಎಂದರು ಧ್ರುವ ಸರ್ಜಾ.

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ ಪ್ಯಾನ್‌ ಇಂಡಿಯಾ ಇಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಪರಭಾಷೆಗಳಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇಂದು ಬೆಳಗ್ಗೆ 6 ಗಂಟೆಗೇ ಫ್ಯಾನ್ಸ್‌ ಶೋ ಆರಂಭವಾಗಿದ್ದು, 4 ದಿನಗಳ ಮೊದಲೇ ಫ್ಯಾನ್ಸ್‌ ಶೋಗೆ ಟಿಕೆಟ್‌ ಬುಕಿಂಗ್‌ ಆರಂಭವಾಗಿತ್ತು.

ಈ ಸಿನಿಮಾ ಕುರಿತು ಧ್ರುವ ಸರ್ಜಾ, ‘ಕಾಳಿದಾಸ ಎಂಬ ಪಾತ್ರದ ಮೂಲಕವೇ ಈ ಸಿನಿಮಾದ ಕತೆ ನಡೆಯುತ್ತಿರುತ್ತದೆ. ಅವನ ಜಗತ್ತಲ್ಲಿ ಯಾರಾರಿದ್ದಾರೆ ಎಂಬುದನ್ನು ತಿಳಿಯುತ್ತಾ ಹೋಗುತ್ತಿದ್ದಂತೆ ನೋಡುಗರೂ ಕನೆಕ್ಟ್‌ ಆಗುತ್ತಾರೆ. ಈ ಸಿನಿಮಾವನ್ನು ಬಹಳ ಶ್ರಮಪಟ್ಟು ಚಿತ್ರೀಕರಣ ಮಾಡಿದ್ದೇವೆ. ಪ್ರೇಕ್ಷಕರು 2 ಗಂಟೆ 20 ನಿಮಿಷ ಕೊಟ್ಟು ಈ ಸಿನಿಮಾ ನೋಡಬೇಕು ಎಂದು ವಿನಂತಿಸುತ್ತೇನೆ. ನನ್ನ ಈ ಹಿಂದಿನ ಸಿನಿಮಾಗಳಿಗಿಂತ ಬೇರೆ ರೀತಿಯ ಪಾತ್ರವನ್ನು ನೋಡಬಹುದು’ ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಸುದೀಪ್‌ ಅವರು ಕಾಲಭೈರವ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಅ‍ವರ ಕುರಿತು ಮಾತನಾಡಿರುವ ಧ್ರುವ, ‘ಸುದೀಪ್‌ ಅವರಿಗೆ ಬಹಳ ದೊಡ್ಡ ಯಶಸ್ಸು ಕಂಡಿದ್ದಾರೆ. ಅಷ್ಟಿದ್ದರೂ ಅವರಿಗೆ ಅಹಂಕಾರ ಇಲ್ಲ. ಆ ಪಾಠವನ್ನು ಅವರಿಂದ ನಾನು ಈ ಸಿನಿಮಾದಲ್ಲಿ ಕಲಿತಿದ್ದೇನೆ’ ಎಂದು ಹೇಳಿದರು. ರೀಷ್ಮಾ ನಾಣಯ್ಯ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರವಿಚಂದ್ರನ್‌, ರಮೇಶ್‌ ಅರವಿಂದ್‌, ಸಂಜಯ್‌ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

ನನ್ನದು ಅತಿಥಿ ಪಾತ್ರ

ದತ್ತಣ್ಣ ಮಾತನಾಡಿ, ‘ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ ನಾವು ಅಂಥಾ ಒಳ್ಳೆಯ ಸಿನಿಮಾಗಳನ್ನು ಕೊಡುವುದು ನಮ್ಮ ಜವಾಬ್ದಾರಿ. ಪ್ರೇಮ್‌ ಅದನ್ನು ಸರಿಯಾಗಿ ನಿಭಾಯಿಸಿದ್ದಾರೆ ಅಂದುಕೊಳ್ಳುತ್ತೇನೆ’ ಎಂದರು. ‘ಕೆಡಿ ಸಿನಿಮಾದಲ್ಲಿ ನನ್ನದು ಅತಿಥಿ ಪಾತ್ರ. ಧ್ರುವ ಹೀರೋ. ಅವರು 130 ದಿನ ನಟಿಸಿದ್ದಾರೆ. ನಾನು 3 ದಿನ ಮಾತ್ರ ನಟಿಸಿದ್ದೇನೆ. ಪ್ರೇಮ್ ನನ್ನ ಕುಟುಂಬದ ಭಾಗ, ಧ್ರುವ ನನ್ನ ಸಹೋದರ. ಅವರಿಬ್ಬರಿಗಾಗಿ ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದು ‘ಕೆಡಿ’ ಚಿತ್ರದ ಕಾಲಭೈರವ ಪಾತ್ರಧಾರಿ ಸುದೀಪ್‌ ಹೇಳಿದ್ದಾರೆ.