ಡಿವೋರ್ಸ್​ ಬಳಿಕ ನಿವೇದಿತಾ ಗೌಡ ಮಾಡ್ತಿರೋ ರೀಲ್ಸ್​ ನೋಡಿ ಕೆಟ್ಟ ಕಮೆಂಟ್​ಗಳು ತುಂಬುತ್ತಿರುವ ನಡುವೆಯೇ, ಅವರ ಅಮ್ಮ ಹೇಳಿದ ಡಬಲ್​ ಮೀನಿಂಗ್​ ಉತ್ತರಕ್ಕೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಅಷ್ಟಕ್ಕೂ ಅಂಥದ್ದೇನಿದೆ ನೋಡಿ! 

ಬಿಗ್​ಬಾಸ್​ ನಿವೇದಿತಾ ಗೌಡ ಬಗ್ಗೆ ಅಂತೂ ಹೇಳುವುದೇ ಬೇಡ. ಬಾರ್ಬಿ ಡಾಲ್​ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ. ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ನಿವೇದಿತಾ ಗೌಡ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡುತ್ತಿರುವ ನಡುವೆಯೇ ಶಾಕ್​ ಕೊಟ್ಟವರು. ಬಳಕುವ ಬಳ್ಳಿಯಂತೆ ಇರುವ ನಿವೇದಿತಾ ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ ಎನ್ನುವಷ್ಟರ ಮಟ್ಟಿಗೆ ದೇಹ ಪ್ರದರ್ಶನ ಮಾಡುತ್ತಿದ್ದಾರೆ. ನಿವೇದಿತಾ ಅಂತೂ ಯಾವ ಕಮೆಂಟ್​ಗೂ ಡೋಂಟ್​ ಕೇರ್​.

ಅದೇ ಇನ್ನೊಂದೆಡೆ, ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ ಎಲ್ಲರ ಗಮನ ಸೆಳೆದಿದ್ದರು. ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು ಅಕ್ಕ ತಂಗಿಯಂತೆ ಕಾಣಿಸುತ್ತಾರೆ. ಮಗಳು ನಿವೇದಿತಾರಂತೆ ತಾಯಿ ಹೇಮಾ ಕೂಡ ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕ್​ ಓವರ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್​ ಮಾಡಿಕೊಂಡು ಅವರು ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ. ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ.

ಇದೀಗ ತಾಯಿ-ಮಗಳು ಸೇರಿ ಮಾಡಿರುವ ಇನ್ನೊಂದು ರೀಲ್ಸ್​ ಸಕತ್​ ಓಡಾಡುತ್ತಿದೆ. ಇದರಲ್ಲಿ ನಿವೇದಿತಾ, ಸೂರ್ಯ ಬೆಳಿಗ್ಗೆ, ಚಂದ್ರ ರಾತ್ರಿ ಬರೋದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತಾಯಿ ಹೇಮಾ, ಒಹ್​ ಸೂರ್ಯ ಬೆಳಿಗ್ಗೆ, ರಾತ್ರಿ ಚಂದ್ರ ಬರ್ತಾನಾ? ಎನ್ನುವ ಮೂಲಕ ಬೇರೆಯವರ ಮನೆಯ ವಿಷ್ಯ ನಮಗ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದು ತಮಾಷೆಯ ರೀಲ್ಸ್​ ಆದರೂ, ಡಬಲ್​ ಮೀನಿಂಗ್​ ಇರುವ ಈ ರೀಲ್ಸ್​ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಗಳಿಗೆ ತಿದ್ದಿ ಬುದ್ಧಿ ಸರಿಯಾಗಿ ಸಂಸಾರ ಮಾಡಿಕೊಡುವುದನ್ನು ಹೇಳುವುದು ಬಿಟ್ಟು, ಮನೆಗೆ ಯಾರು ಬೇಕಾದರೂ ಬರಬಹುದು ಎನ್ನುವಂಥ ಅರ್ಥ ಕೊಡುವ ಡೈಲಾಗ್​ ಹೇಳಿಕೊಡುವುದು ಅಮ್ಮನ ಲಕ್ಷಣನಾ ಎಂದು ಪ್ರಶ್ನಿಸಿದ್ದಾರೆ. ತಾಯಿಯಂತೆಯೇ ಮಗಳು ನೂಲಿನಂತೆಯೇ ಸೀರೆ ಎನ್ನುವ ಮಾತಿದೆ. ಇಲ್ಲಿ ಕೂಡ ಅದೇ ರೀತಿ ಕಾಣಿಸುತ್ತದೆ. ಡಿವೋರ್ಸ್​ ಬಳಿಕ ಅಶ್ಲೀಲವಾಗಿ ವರ್ತಿಸುತ್ತಿರುವ ಮಗಳಿಗೆ ಬುದ್ಧಿ ಹೇಳುವ ಗೋಜಿಗೆ ಹೋಗದೇ ಮೊಮ್ಮಕ್ಕಳನ್ನು ಕಾಣುವ ವಯಸ್ಸಿನಲ್ಲಿ ತಾವೂ ಚಿಕ್ಕ ಮಕ್ಕಳಂತೆ ಇಂಥ ಡೈಲಾಗ್​ ಹೇಳ್ತಿರೋದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು, ಹೇಮಾ ಅವರ ಕುರಿತು ಹೇಳುವುದಾರೆ, ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ. ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು 2020ರಲ್ಲಿ 26ರಂದು. ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.