ನಟ ಪ್ರಕಾಶ್ ರಾಜ್ ಸೋಷಿಯಲ್ ಮೀಡಿಯಾ ಸೆನ್ಸೇಷನ್. ಅವರು ಅದೇನು ಪೋಸ್ಟ್ ಮಾಡಿದರೂ ಅದೇನೇ ಹೇಳಿಕೆ ನೀಡಿದರೂ ಅವರು ಟ್ರೋಲ್ ಆಗೋದು ಕನ್ಫರ್ಮ್ ಎಂಬಂತಾಗಿದೆ. ಸಾಮಾನ್ಯವಾಗಿ ನಟ ಪ್ರಕಾಶ್ ರಾಜ್ ಅವರ ಬಗ್ಗೆ ಸಾರ್ವಜನಿಕರಿಗೆ ಇರುವ ಅಭಿಪ್ರಾಯ ಎಂದರೆ, ‘ಅವರೊಬ್ಬ ಹಿಂದೂ ಹಾಗೂ ಸನಾತನ ಧರ್ಮದ ವಿರೋಧಿ’ ಎಂಬುದು…

ಪ್ರಕಾಶ್ ರಾಜ್ ಪೋಸ್ಟ್!

ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಈಗ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದೆ. ಜಗತ್ತಿನಾದ್ಯಂತ 30 ದೇಶಗಳಲ್ಲಿ ದಿನವೊಂದಕ್ಕೆ 7000 ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲೇ ದಿನವೊಂದಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ ಕಾಂತಾರ ಚಾಪ್ಟರ್ 1. ಸದ್ಯ ಜಗತ್ತಿನೆಲ್ಲೆಡೆ ಕಾಂತಾರ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದ್ದು, ಬಹಳಷ್ಟು ಜನ ವಿಐಪಿಗಳೂ ಕೂಡ ಕಾಂತಾರ ಸಿನಿಮಾ ನೋಡಿ ಮೆಚ್ಚಿ ಕನ್ನಡದ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ, ಮಾಧ್ಯಮಗಳ ಮೂಲ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅವರಲ್ಲಿ ನಟ ಪ್ರಕಾಶ್ ರಾಜ್ (Prakash Raj) ಅವರು ಕೂಡ ಒಬ್ಬರು!

ನಟ ಪ್ರಕಾಶ್ ರಾಜ್ ಅವರು ಸದ್ಯ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕನ್ನಡದ 'ಕಾಂತಾರ ಚಾಪ್ಟರ್ 1' ನೋಡಿ ಖುಷಿ ಪಟ್ಟಿದ್ದಾರೆ. ಕಾಂತಾರ-1 ಸಿನಿಮಾ ನೋಡಿ ಮೆಚ್ಚಿರುವ ನಟ ಪ್ರಕಾಶ್ ರೈ ಅವರು ಈ ಬಗ್ಗೆ ಟ್ವೀಟ್ ಮಾಡಿ, ಕಾಂತಾರ ಚಾಪ್ಟರ್ 1 ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಟ ಪ್ರಕಾಶ್ ರಾಜ್ ಅವರು ಕಾಂತಾರ ಮೆಚ್ಚಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಕಾಲೆಳೆದು ಕಾಮೆಂಟ್ ಮಾಡುತ್ತಿದ್ದಾರೆ.

ನಟ ಪ್ರಕಾಶ್ ರಾಜ್‌ ಅವರು ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯಗಳು ಹಾಗೂ ಸನಾತನ ಧರ್ಮದ ವಿರೋಧಿ. ಅಂಥವರೂ ಸಹ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ ಎಂದರೆ, ಅವರು ನಿಜವಾಗಿಯೂ ಗ್ರೇಟ್ ಆಗಿದ್ದಾರೆ ಎಂದು ಹಲವರು ಪ್ರಕಾಶ್‌ ರಾಜ್ ಅವರ ಈ ಹೇಳಿಕೆಯನ್ನು ಮೆಚ್ಚಿಯೂ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಆದರೆ, ಹಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ 'ಅವರೀಗ ಬದಲಾಗುತ್ತಿದ್ದಾರೆ, ಅವರಿಗೆ ಈಗ ಕಾಂಗ್ರೆಸ್ ಸರ್ಕಾರದಿಂದ ಏನೂ ಸಿಗುತ್ತಿಲ್ಲ' ಎಂದಿದ್ದಾರೆ. ಇನ್ನೂ ಕೆಲವರು 'ಪ್ರಕಾಶ್ ರಾಜ್ ಬದಲಾಗಿದ್ದಾರೆ, ತಮ್ಮ ಹುಟ್ಟುಧರ್ಮದ ಬಗ್ಗೆ ಈಗ ಅಭಿಮಾನ ಮೂಡತೊಡಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಸೆನ್ಸೇಷನ್!

ಒಟ್ಟಿನಲ್ಲಿ, ನಟ ಪ್ರಕಾಶ್ ರಾಜ್ ಅವರು ಒಂಥರಾ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಎನ್ನಬಹುದು. ಅವರು ಅದೇನು ಪೋಸ್ಟ್ ಮಾಡಿದರೂ ಅದೇನೇ ಹೇಳಿಕೆ ನೀಡಿದರೂ ಅವರು ಟ್ರೋಲ್ ಆಗೋದು ಕನ್ಫರ್ಮ್ ಎಂಬಂತಾಗಿದೆ. ಸಾಮಾನ್ಯವಾಗಿ ನಟ ಪ್ರಕಾಶ್ ರಾಜ್ ಅವರ ಬಗ್ಗೆ ಸಾರ್ವಜನಿಕರಿಗೆ ಇರುವ ಅಭಿಪ್ರಾಯ ಎಂದರೆ, ಅವರೊಬ್ಬ ಹಿಂದೂ ಹಾಗೂ ಸನಾತನ ಧರ್ಮದ ವಿರೋಧಿ. ಅವರು ಹೆಚ್ಚಾಗಿ ಅದೇ ರೀತಿ ಈ ಮೊದಲು ನಡೆದುಕೊಂಡಿದ್ದಾರೆ ಕೂಡ. ಆದರೆ ಈ ಬಾರಿ ಅವರು ತದ್ವಿರುದ್ಧ ಎಂಬಂತೆ ನಡೆದುಕೊಂಡು, ತುಳು ಸಂಪ್ರದಾಯದ, ಹಿಂದೂ ಆಚರಣೆಯ ವಸ್ತುವಿರುವ ಸಿನಿಮಾವೊಂದನ್ನು ಹೊಗಳಿದ್ದು ಹಲವರಿಗೆ ಅಚ್ಚರಿ ತಂದಿದೆ.

ಪ್ರಕಾಶ್ ರಾಜ್ ಕೂಡ ಮೂಲತಃ ತುಳು ನಾಡಿನವರು!

ಆದರೆ, ಈ ವಿಷಯಕ್ಕೂ ಕೆಲವರು ಇದ್ಯಾಕೆ ಹೀಗೆ ಮಾಡಿದ್ದಾರೆ ಎಂಬುದಕ್ಕೆ ಸಮಜಾಯಿಸಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ' ನಟ ಪ್ರಕಾಶ್ ರಾಜ್ ಕೂಡ ಮೂಲತಃ ತುಳು ನಾಡಿನವರು. ಅವರ ಮೂಲಕ ಹೆಸರು ಪ್ರಕಾಶ್ ರೈ, ಅವರೊಬ್ಬರು ತುಳುನಾಡಿನ ಬಂಟ ಸಮುದಾಯದವರು. ಹೀಗಾಗಿ ಅವರಿಗೆ ಕಾಂತಾರ ಸಿನಿಮಾ ಕನೆಕ್ಟ್ ಆಗಿದೆ. ಅಷ್ಟೇ ಅಲ್ಲ ಅವರೂ ಅದೇ ಊರಿನವರು, ಹೀಗಾಗಿ ಅವರು ಸನಾತನ ಧರ್ಮ ಅನ್ನೋದಕ್ಕಿಂತ ತಮ್ಮ ಊರಿನವರ ಸಿನಿಮಾ ಎಂದು ಮೆಚ್ಚಿ ಟ್ವೀಟ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೇ ಇರಲಿ, ಪ್ರಕಾಶ್ ರಾಜ್ ಅವರು ಈ ಸಿನಿಮಾವನ್ನೂ ಮೆಚ್ಚಿ, ಆ ಬಗ್ಗೆ ಟ್ವೀಟ್ ಮಾಡಿದ್ದನ್ನು ಹೊಗಳಲೇಬೇಕು.

Scroll to load tweet…