ಕನ್ಯತ್ವದ ಬಗ್ಗೆ ಪುರುಷರಿಗೆ ಟಿಪ್ಸ್​ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಟಿ ಹೇಳಿದ್ದೇನು? 

'ನೀವು ಮದುವೆಯಾಗುವ ಹುಡುಗಿಯರು ಕನ್ಯೆಯರೇ ಎಂದು ನೋಡಲು ಹೋಗಬೇಡಿ. ಮದುವೆಯಾಗಲು ಕನ್ಯೆಯೇ ಬೇಕು ಎನ್ನುವ ಬಗ್ಗೆ ಹೇಳುವುದು ಸರಿಯಲ್ಲ. 'ಕನ್ಯತ್ವ' ಒಂದು ರಾತ್ರಿಯ ಆಸ್ತಿ. ಆದ್ದರಿಂದ ತಮಗೆ ಕನ್ಯೆಯೇ ಬೇಕು ಎನ್ನುವುದು ಸರಿಯಲ್ಲ. ಅದರ ಬದಲು ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ' ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿರುವುದಾಗಿ ವಿಡಿಯೋ ಕೂಡ ವೈರಲ್​ ಆಗಿತ್ತು. 'ಸಂಬಂಧ ಎನ್ನುವುದೇ ಸಂಪೂರ್ಣ ನಾಶವಾಗುತ್ತಿರುವ, ಅದರಲ್ಲಿಯೂ ಹದಿಹರೆಯದವರಲ್ಲಿ ಡೇಟಿಂಗ್​, ಅಕ್ರಮ ಸಂಬಂಧ ಎನ್ನುವುದು ಎಲ್ಲವೂ ಮಾಮೂಲಾಗಿದ್ದು, ಮದುವೆಗೂ ಮುನ್ನವೇ ಎಲ್ಲವನ್ನೂ ಮುಗಿಸುತ್ತಿರುವ ಈ ಕಾಲಘಟ್ಟದಲ್ಲಿ ಖ್ಯಾತ ನಟಿಯೊಬ್ಬಳು ಈ ರೀತಿ ಮಾತನಾಡಿರುವುದನ್ನು ಹಲವರು ಸಹಿಸಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಹಲವರು ಹರಿಹಾಯುತ್ತಿದ್ದರು.

ಇದೀಗ ಇದು ನಟಿ ಪ್ರಿಯಾಂಕಾ ಅವರ ಕಿವಿಗೂ ಬಿದ್ದು ಶಾಕ್​ ಆಗಿದ್ದಾರೆ ನಟಿ. ಏಕೆಂದರೆ ಈ ಮಾತನ್ನು ಅವರು ಹೇಳಿಯೇ ಇಲ್ಲವಂತೆ. ಈ ಬಗ್ಗೆ ಇದೀಗ ಸ್ಪಷ್ಟನೆ ಕೊಟ್ಟಿರೋ ನಟಿ, ಇದು ನನ್ನ ದನಿಯಲ್ಲ, ಇಂದು ಸೋಷಿಯಲ್​ ಮೀಡಿಯಾದಲ್ಲಿ ಬಾಯಿಗೆ ಬಂದದ್ದನ್ನೆಲ್ಲಾ ಹಾಕುತ್ತಾರೆ. ಅದಕ್ಕೆ ಯಾವುದೇ ಸೋರ್ಸ್​ ಇರುವುದಿಲ್ಲ. ಅದನ್ನು ನಂಬಬಾರದು. ಇಂಥ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ವಿನಾಕಾರಣ ನನ್ನ ಹೆಸರನ್ನು ಎಳೆದುತರಲಾಗಿದೆ ಎಂದಿದ್ದಾರೆ ಪ್ರಿಯಾಂಕಾ. ಅಷ್ಟಕ್ಕೂ, ಅನೇಕ ಬಾಲಿವುಡ್ ನಟಿಯರು ತಮ್ಮ ದಿಟ್ಟ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಮೂಲಕವೇ ಕಾಂಟ್ರವರ್ಸಿಯನ್ನೂ ಸೃಷ್ಟಿಸಿಕೊಳ್ಳುವುದು ಇದೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾಗೆ ಇದರಲ್ಲಿ ಯಾವುದೇ ರೀತಿಯ ಆಸಕ್ತಿ ಇಲ್ಲ. ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದರಿಂದ ಪ್ರಿಯಾಂಕಾ ಸ್ವಲ್ಪ ದೂರವೇ. ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಹೊಸ ಸ್ಥಾನವನ್ನು ಸೃಷ್ಟಿಸಿಕೊಂಡವರು. ಆದರೂ ಅವರು ಹೇಳಿದ್ದಾರೆ ಎನ್ನುವ ಮಾತಿನಿಂದ ನಟಿ ಭಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಮಾತನ್ನು ನಟಿಯೇ ಹೇಳಿದ್ದೆಂದು ತಿಳಿದು ನೆಟ್ಟಿಗರು ಸಾಕಷ್ಟು ಟ್ರೋಲ್​ ಮಾಡಿದ್ದರು. ತಮಗಿಂತ ತುಂಬಾ ಚಿಕ್ಕವರಾಗಿರುವ ನಿಕ್​ ಅವರನ್ನು ಮದುವೆಯಾಗಿರುವ ಪ್ರಿಯಾಂಕಾರನ್ನು ಟ್ರೋಲ್​ ಮಾಡುತ್ತಿರುವ ನೆಟ್ಟಿಗರು, ನೀವ್ಯಾಕೆ ಹಣ ನೋಡಿ ಮದ್ವೆಯಾದ್ರಿ. ಇಂದು ಹಣ ಒಂದಿದ್ದರೆ ಎಂಥವರನ್ನೂ ಮದುವೆಯಾಗುತ್ತಿದ್ದಾರೆ ಹುಡುಗಿಯರು. ನಿಮ್ಮಂಥವರಿಗೆ ಹಣವೇ ಎಲ್ಲವೂ ಆಗಿದೆ. ಹಣ ಯಾಕೆ ಪುರುಷನ ಗುಣ ನೋಡಿ ಮದ್ವೆಯಾಗಬಹುದಲ್ವಾ? ನೀವೆಲ್ಲಾ ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿರುವ ಕಾರಣವನ್ನೇ ಮುಂದಿಟ್ಟುಕೊಂಡು ಬೇರೆಯವರಿಗೂ ಇಂಥ ಕೆಟ್ಟ ಸಲಹೆ ಕೊಡಲು ಬರಬೇಡಿ.

ಮೊದಲು ಹಣದ ದುರಾಸೆ ಬಿಟ್ಟು ಆಮೇಲೆ ಉಳಿದವರಿಗೆ ಬುದ್ಧಿಮಾತು ಹೇಳಿ ಎಂದು ಹೇಳಿದ್ದರು. ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ ಎಂದಿರುವ ನಟಿಯ ಮಾತನ್ನೇ ಮುಂದಿಟ್ಟುಕೊಂಡು ಮತ್ತೆ ಕೆಲವರು, ಮದುವೆಗೂ ಮುನ್ನವೇ ಯಾರದ್ದೋ ಜೊತೆ ದೈಹಿಕ ಸಂಬಂಧ ಬೆಳೆಸುವವಳು ನಿಮ್ಮ ದೃಷ್ಟಿಯಲ್ಲಿ ಉತ್ತಮ ನಡವಳಿಕೆ ಹೊಂದಿದವಳೇ ಎಂದು ಪ್ರಶ್ನಿಸಿದ್ದರು.