ಧುರಂಧರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ಇದಾಗಿದೆ. ಅದ್ಭುತ ತಾರಾಗಣ, ಬಲವಾದ ಕಥೆಯಿಂದಾಗಿ ಥಿಯೇಟರ್‌ನಲ್ಲಿ ಸಿನಿಮಾ ಅಷ್ಟೂ ಹೊತ್ತು ವೀಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತಿದೆ.
6 ದೇಶಗಳಲ್ಲಿ ಸಿನಿಮಾ ಬ್ಯಾನ್!
ಬಾಲಿವುಡ್ಸ್ಟಾರ್ ರಣವೀರ್ ಸಿಂಗ್ (Ranveer Singh) ನಟಿಸಿರೋ 'ಧುರಂಧರ್' ಸಿನಿಮಾ (Dhurandhar Movie) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಈ ಸಿನಿಮಾ ಬಗ್ಗೆ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಭಾರತ-ಪಾಕ್ ಬೇಹುಗಾರಿಕೆ ಸ್ಟೋರಿಯ ಈ ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಅಂಶಗಳಿದೆ ಎಂದು ಒಟ್ಟು 6 ದೇಶಗಳು ಧುರಂಧರ್ ಮೇಲೆ ನಿಷೇಧ ಹೇರಿವೆ. ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಧುರಂಧರ್ ಸಿನಿಮಾವನ್ನ ಬ್ಯಾನ್ ಮಾಡಿವೆ. ಆದ್ರೂ ಈ ಚಿತ್ರ ಜಾಗತಿಕವಾಗಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಧುರಂಧರ್’ ಸಿನಿಮಾ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಅವರ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ಇದಾಗಿದೆ. ಜಬರ್ದಸ್ತ್ ಆಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಅವರ ವಿಭಿನ್ನ ಲುಕ್, ಸ್ಟೈಲ್ ಎಲ್ಲರ ಗಮನ ಸೆಳೆದಿದೆ. 'ಧುರಂಧರ್' ಸಿನಿಮಾದಲ್ಲಿ ಅದ್ಭುತ ತಾರಾಗಣ, ಬಲವಾದ ಕಥೆಯಿಂದಾಗಿ ಥಿಯೇಟರ್‌ನಲ್ಲಿ ಸಿನಿಮಾ ಅಷ್ಟೂ ಹೊತ್ತು ವೀಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವುದು. ಈ ಸಿನಿಮಾ ಬಹಳಷ್ಟು ಮೆಚ್ಚುಗೆ ಪಡೆಯುತ್ತಿದೆ.
ಡಿಜಿಟಲ್ ಹಕ್ಕು ಪ್ರಸಾರ ಯಾವತ್ತು?
ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆಗಳನ್ನು ಮಾಡುತ್ತಿರುವ ಈ ಸಿನಿಮಾವನ್ನು ಗಲ್ಫ್‌ನ 6 ದೇಶಗಳಲ್ಲಿ ನಿಷೇಧ ಹೇರಲಾಗಿದೆ. ಈ ಸಿನಿಮಾದ ಸೀಕ್ವೆಲ್ ಕೂಡ ರೆಡಿ ಇದೆ. ಅಂದಹಾಗೆ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು 130 ಕೋಟಿ ರೂಪಾಯಿಗೆ ನೆಟ್‌ಫ್ಲಿಕ್ಸ್ ಖರೀದಿಸಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈ ಸಿನಿಮಾವು 30 ಜನವರಿ 2026 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಬಹುದು ಎಂದು ಹೇಳಲಾಗುತ್ತಿದೆ.
ಜ್ಯೋತಿ ದೇಶಪಾಂಡೆ, ಆದಿತ್ಯ ಧರ್, ಲೋಕೇಶ್ ಧರ್ ಅವರು ಜಿಯೋ ಸ್ಟುಡಿಯೋಸ್, ಬಿ62 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಣವೀರ್ ಸಿಂಗ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಸೌಮ್ಯಾ ಟಂಡನ್, ನವೀನ್ ಕೌಶಿಕ್, ಮಾನವ್ ಗೋಹಿಲ್ ಮುಂತಾದವರು ನಟಿಸಿದ್ದಾರೆ.
ಈ ಸಿನಿಮಾ ಕಥೆ ಏನು?
ಈ ಸಿನಿಮಾವು ನೈಜ ಘಟನೆಗಳು, ಭೌಗೋಳಿಕ-ರಾಜಕೀಯ ಸಂಘರ್ಷಗಳು, 'ರಾ'ದ ರಹಸ್ಯ ಕಾರ್ಯಾಚರಣೆ, ವಿಶೇಷವಾಗಿ ಆಪರೇಷನ್ ಲೈರಿಯಿಂದ ಪ್ರೇರಿತವಾಗಿದೆ. ಈ ಸಿನಿಮಾವು ಡಿಸೆಂಬರ್ 5 ರಂದು ರಿಲೀಸ್ ಆಗಿದ್ದು, 125 ಕೋಟಿ ರೂಪಾಯಿ ಇದರ ಬಜೆಟ್ ಎನ್ನಲಾಗಿದೆ. ಆದರೆ, ಈ ಸಿನಿಮಾ ಈಗಾಗಲೇ ಕೇವಲ ಒಂದೇ ವಾರದಲ್ಲಿ ರೂ. 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸುವತ್ತ ಧಾಪುಗಾಲು ಹಾಕುತ್ತಿದೆ.
ಪಾಕಿಸ್ತಾನಿ ಮೀಡಿಯಾದ ಆಕ್ರೋಶ
ಪಾಕಿಸ್ತಾನ ಹಾಗೂ ಪಾಕಿಸ್ತಾನಿ ಮೀಡಿಯಾ ಈ ಸಿನಿಮಾ ಬಗ್ಗೆ ಭಾರತವನ್ನು ದೂಷಿಸುತ್ತಿದೆ. ಇದೀಗ ಅಲ್ಲಿನ ಪತ್ರಕರ್ತರಿಗೆ ಬಾಲಿವುಡ್ ಸಿನಿಮಾಗಳ ಮೇಲೆ ದೊಡ್ಡ ಆಕ್ಷೇಪ ಶುರುವಾಗಿದೆ. 'ಪಾಕಿಸ್ತಾನದ ಜನರು ಬಾಲಿವುಡ್ ಸಿನಿಮಾಗಳಿಂದಲೇ ಮನರಂಜನೆ ಪಡೆಯುತ್ತಾರೆ. ಪಾಕಿಸ್ತಾನದಲ್ಲಿ ಹಿಂದಿ ಸಿನಿಮಾಗಳನ್ನು ಕಾಪಿ ಮಾಡಿ ಆನ್‌ಲೈನ್‌ನಲ್ಲಿ ಲೀಕ್ ಮಾಡಲಾಗುತ್ತದೆ, ಇದರಿಂದಾಗಿ ಸಿನಿಮಾ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗುತ್ತದೆ..' ಎನ್ನುತ್ತಿದ್ದಾರೆ ಪಾಕಿಸ್ತಾನೀ ಪತ್ರಕರ್ತರು.
ಪಾಕಿಸ್ತಾನದ ಒಂದು ಚಾನೆಲ್‌ನಲ್ಲಿ ಈ ಬಗ್ಗೆ 'ಬಾಲಿವುಡ್ ಬಳಿ ಕಂಟೆಂಟ್ ಇಲ್ಲ. ಮೊದಲು ಸೌತ್ ಸಿನಿಮಾಗಳ ರಿಮೇಕ್ ಮಾಡುತ್ತಿದ್ದರು. ಬಳಿಕ ಪಾಕಿಸ್ತಾನಿ ಸಿನಿಮಾಗಳಿಂದ ಕಂಟೆಂಡ್ ಕದ್ದು ಸಿನಿಮಾ ಮಾಡುತ್ತಿದ್ದರು. ಈಗ ಕಳ್ಳತನ ಅಲ್ಲಿ ಮಿತಿಮೀರಿದೆ. ನಮ್ಮ ದೇಶದಲ್ಲಿ ನಡೆದ ಸಣ್ಣಪುಟ್ಟ ಗ್ಯಾಂಗ್‌ವಾರ್‌ಗಳ ಮೇಲೆ ಸಿನಿಮಾ ಮಾಡಿ ನನಗೆ ಅಪಮಾನ ಮಾಡುತ್ತಿದ್ದಾರೆ. ಭಾರತದ ಸಿನಿಮಾ ನಿರ್ಮಾಪಕರಿಗೆ ತಮ್ಮ ದೇಶದಲ್ಲಿ ನಡೆಯುವ ಹಿಂಸೆ ಕಾಣುವುದಿಲ್ಲವೇ? ಗುಜರಾತ್ ಗಲಭೆಗಳ ಮೇಲೆ ಯಾಕೆ ಸಿನಿಮಾ ಮಾಡುವುದಿಲ್ಲ? ಅಲ್ಲಿನ ಮುಸ್ಲಿಮರ ಮೇಲಿನ ದೌರ್ಜನ್ಯದ ಬಗ್ಗೆ ಯಾಕೆ ಸಿನಿಮಾ ಮಾಡುವುದಿಲ್ಲ? ಯಾಕೆ ಭಾರತದ ಪ್ರಧಾನಿ ಮೋದಿ ಕೂಡ ಈ ಬಗ್ಗೆ ಮಾತನಾಡುವುದಿಲ್ಲ' ಎಂದಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.


