2011ರಲ್ಲಿ ನಟ ರಜನಿಕಾಂತ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಆಗ ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿ ಅಲ್ಲಿ ಹಲವರನ್ನು ಭೇಟಿ ಮಾಡಿದ್ದರು, ಅಲ್ಲಿನ ಒಬ್ಬರು ಬಾಬಾರಿಂದ ದೀಕ್ಷೆಯನ್ನೂ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲ..
ನಟ ರಜನಿಕಾಂತ್ (Rajinikanth) ಅವರು ಭಾರದತ ಸೂಪರ್ ಸ್ಟಾರ್ ಮಾತ್ರವಲ್ಲ, ಜಗತ್ತಿನ ಐಕಾನಿಕ್ ವ್ಯಕ್ತಿಗಳಲ್ಲಿ ಒಬ್ಬರು. ನಟ ರಜನಿಕಾಂತ್ ಅವರು ದೇವರು ಹಾಗೂ ಸನಾತನ ಧರ್ಮದ ಮೇಲೆ ಅಪಾರ ನಂಬಿಕೆಯುಳ್ಳ ವ್ಯಕ್ತಿ. ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಭಕ್ತರು. ತಮಿಳುನಾಡಿನಲ್ಲಿರುವ ಮಣಿಕರ್ಣಿಕಾ ಗುಡ್ಡದ ಮೇಲೆ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಾಗ ಭೇಟಿ ನೋಡಿ ಶ್ರೀ ರಾಯರ ದರ್ಶನ ಪಡೆಯುತ್ತಾ ಇರುತ್ತಾರೆ. ಅಷ್ಟೇ ಅಲ್ಲ, ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಕೂಡ ಆಗಾಗ ಭೇಟಿ ನೀಡುತ್ತಾ ಇರುತ್ತಾರೆ.
2011ರಲ್ಲಿ ನಟ ರಜನಿಕಾಂತ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಆಗ ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿ ಅಲ್ಲಿ ಹಲವರನ್ನು ಭೇಟಿ ಮಾಡಿದ್ದರು, ಅಲ್ಲಿನ ಒಬ್ಬರು ಬಾಬಾರಿಂದ ದೀಕ್ಷೆಯನ್ನೂ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲ, ಇವರು 'ಶ್ರೀ ರಾಘವೇಂದ್ರ ಸ್ವಾಮಿ' ಹಾಗೂ 'ಬಾಬಾ' ಎಂಬ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
'ನಮ್ಮ ಈ ಜಗತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅದೆಷ್ಟೇ ಮುಂದುವರೆದಿದ್ದರೂ ಕೂಡ, ಒಂದು ಹನಿ ರಕ್ತವನ್ನು ಸೃಷ್ಟಿಸಲು ಮನುಷ್ಯನಿಂದ ಸಾಧ್ಯವಿಲ್ಲ. ಈ ಸತ್ಯ ಮನುಷ್ಯನಿಗೆ ಗೊತ್ತಿದ್ರೂ ಕೂಡ, ಕೆಲವರು ದೇವ್ರನ್ನು ನಂಬಲ್ಲ, ದೇವರೇ ಇಲ್ಲ ಅಂತಾರೆ.. ಇಂಥವ್ರನ್ನ ನೋಡಿದ್ರೆ ನಂಗೆ ಅಳಬೇಕೋ ನಗಬೇಕೋ ಗೊತ್ತಾಗಲ್ಲ'ಎಂದಿದ್ದಾರೆ ನಟ ರಜನಿಕಾಂತ್.
ಇನ್ನೊಂದು ಕಡೆ ನಟ ರಜನಿಕಾಂತ್ ಅವರು 'ಕೆಲವರಿಗೆ ದೇವರು ಇಷ್ಟವಾಗಲ್ಲ.. ಆದ್ರೆ ದೇವರಿಗೆ ಅಚ್ರು ಅಂದ್ರೆ ತುಂಬಾ ಇಷ್ಟ ಆಗಿದೆ' ಎಂದಿದ್ದಾರೆ. ಮತ್ತೊಂದು ಕಡೆ ನಟ ರಜನಿ ಅವರು 'ದೇವರು ಎಷ್ಟು ಶಕ್ತಿಶಾಲಿ ಎಂಬುದು ನಾವು ಅವನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿದೆ' ಎಂದಿದ್ದಾರೆ.
ನಟ ರಜನಿಕಾಂತ್ ಅವರ ಕೂಲಿ (Coolie) ಸಿನಿಮಾ ಇದೇ ವಾರ, ಅಂದರೆ 14 ಆಗಸ್ಟ್ 2025ರಂದು ಇಡೀ ಜಗತ್ತಿನ ತುಂಬಾ ತೆರೆಯ ಮೇಲೆ ವಿಜೃಂಭಿಸಲು ಸಿದ್ಧವಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ನಟರಾದ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ನಟಿ ಶ್ರತಿ ಹಾಸನ್ ಹಾಗು ರಚಿತಾ ರಾಮ್ ಕೂಡ ನಟಿಸಿದ್ದಾರೆ. ಕನ್ನಡದಿಂದಲೇ ಇಬ್ಬರು (ಉಪೇಂದ್ರ, ರಚಿತಾ ರಾಮ್) ಕೂಲಿ ಚಿತ್ರದಲ್ಒಇ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಈಗಾಗಲೇ ಮನೆಮಾಡಿದೆ. ಇನ್ನೇನು ಈ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.


