ನಟ ಕಮಲ್ ಹಾಸನ್, ಈಗ ತಮ್ಮ 70ರ ವಯಸ್ಸಿನಲ್ಲಿ ಇಂತಹ ಸಿನಿಮಾವನ್ನು ಮಾಡಬೇಕಾಗಿಯೇ ಇರಲಿಲ್ಲ ಎಂಬುದು ಹಲವರ ಅಭಿಪ್ರಾಯ. ಜೊತೆಗೆ, 70ರ ಕಮಲ್ ಹಾಸನ್ ಹಾಗೂ 42ರ ತ್ರಿಷಾ ನಡುವೆ ಸಿನಿಮಾದಲ್ಲಿ ನಡೆಯುವ ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳನ್ನು ನೋಡಲಿಕ್ಕೂ ಅಸಹ್ಯ

ಕಮಲ್ ಹಾಸನ್ (Kamal Haasan) ನಟನೆಯ ಥಗ್ ಲೈಫ್ (Thug Life) ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ವರ್ಷನ್ ಬಿಟ್ಟು ಉಳಿದೆಲ್ಲಾ ಕಡೆ ಈ ಸಿನಿಮಾ ಬಿಡುಗಡೆ ಆಗಿದ್ದರೂ ಮುಖ್ಯವಾಗಿ ನೋಡಬೇಕಿರುವು ತಮಿಳು ಭಾಷೆಯ ವಿಮರ್ಶೆ. ಏಕೆಂದರೆ, ಕಮಲ್ ಹಾಸನ್ ಮಾತೃಭಾಷೆ, ತಾಯ್ನೆಲದಲ್ಲಿ ಈ ಥಗ್ ಲೈಫ್ ಸಿನಿಮಾ ಬಗ್ಗೆ ಅದೇನು ಹೇಳ್ತಿದಾರೆ? ಕೆಲವರಂತೂ ಬಾಯಿಗೆ ಬಂದಂತೆ ಬೈಯ್ಯತೊಡಗಿದ್ದಾರೆ. ಹಾಗಿದ್ದರೆ ಅಂಥದ್ದೇನಾಗಿದೆ ಸಿನಿಮಾದಲ್ಲಿ? ನಿರ್ದೇಶಕ ಮಣಿರತ್ನಂ ಏನಂತ ಯಡವಟ್ಟು ಮಾಡಿದ್ದಾರೆ?

ಸಿನಿಮಾ ನೋಡಿದ ಹಲವರ ಪ್ರಕಾರ, ಸಿನಿಮಾ ಸ್ಕ್ರಿಪ್ಟ್ ಸ್ವಲ್ಪವೂ ಸರಿಯಿಲ್ಲ. ಜೊತೆಗೆ, ಸ್ಟಾರ್ ನಟಿ ತ್ರಿಷಾ ಪಾತ್ರವನ್ನು ಕೆಟ್ಟದಾಗಿ ತೋರಿಸಲಾಗಿದೆ. ಅಂದರೆ, ಸಿನಿಮಾದಲ್ಲಿ ತ್ರಿಷಾರನ್ನು ಸಿಂಬು ಸಹೋದರಿ ಎಂದು ತಪ್ಪಾಗಿ ತಿಳಿಯುವ ಹಾಗಿದ್ದು, ಅವರನ್ನು ಹೇಗೆಲ್ಲಾ ಪಾತ್ರದ ನೆಪದಲ್ಲಿ ಹೇಗೆಲ್ಲಾ ಕೆಟ್ಟದಾಗಿ ಬಳಸಿಕೊಳ್ಳಬಹುದೋ ಹಾಗೆ ಮಾಡಲಾಗಿದೆ ಎಂಬ ಅನಿಸಿಕೆ ಇದೆ. ಜೊತೆಗೆ, ಸಿನಿಮಾ ಎಳೆದಂತೆ ಇದ್ದು, ತ್ರಿಶಾ ಪಾತ್ರವನ್ನು ಸುಮ್ಮನೇ ಎಳೆದುತಂದಂತೆ ತೋರುತ್ತದೆ. ಕಮಲ್-ತ್ರಿಷಾ ಹಸಿಬಿಸಿ ದೃಶ್ಯಗಳಂತೂ ಚಿತ್ರಕ್ಕೆ ಸಂಬಂಧವೇ ಇಲ್ಲ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ, ಹೇಳಬೇಕು ಎಂದರೆ, ಕೆಲವು ದಶಕಗಳ ಹಿಂದೆ ಸೂಪರ್‌ ಸ್ಟಾರ್ ಆಗಿದ್ದ ನಟ ಕಮಲ್ ಹಾಸನ್, ಈಗ ತಪ್ಪ 70ರ ವಯಸ್ಸಿನಲ್ಲಿ ಇಂತಹ ಸಿನಿಮಾವನ್ನು ಮಾಡಬೇಕಾಗಿಯೇ ಇರಲಿಲ್ಲ ಎಂಬುದು ಹಲವರ ಅಭಿಪ್ರಾಯ. ಜೊತೆಗೆ, 70ರ ಕಮಲ್ ಹಾಸನ್ ಹಾಗೂ 42ರ ತ್ರಿಷಾ ನಡುವೆ ಸಿನಿಮಾದಲ್ಲಿ ನಡೆಯುವ ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳನ್ನು ನೋಡಲಿಕ್ಕೂ ಅಸಹ್ಯ ಎನ್ನುತ್ತಾರೆ ಹಲವರು. ಹಾಗಿದ್ದರೆ, ನಿರ್ದೇಶಕ ಮಣಿರತ್ನಂ ಎಡವಿದರೆ? ಅಥವಾ, ಥಗ್ ಲೈಫ್ ಚಿತ್ರಕ್ಕೆ ತಾವೇ ನಿರ್ಮಾಪಕರಾಗಿರುವ ಕಮಲ್ ಹಾಸನ್ ಚಿತ್ರಕಥೆ ಸೇರಿದಂತೆ ಎಲ್ಲಾ ಕಡೆ ತಾವೇ ಮೂಗು ತೂರಿಸಿದರೆ?

ಅದೇನಾಗಿದೆಯೋ ಗೊತ್ತಿಲ್ಲ..! ಥಗ್ ಲೈಫ್ ನೋಡಿದವರ ಪ್ರಕಾರ, ಕಮಲ್‌ ಹಾಸನ್‌ಗೆ ಬಿಲ್ಡಪ್ ಕೊಟ್ಟಿರುವ ಚಿತ್ರದಲ್ಲಿ ನಿಜವಾಗಿಯೂ ಸ್ಕೋರ್ ಮಾಡಿರೋದು ನಟ ಸಿಂಬು (ಸಿಂಬಲರಸನ್). ಅಭಿರಾಮಿ ಹಾಗೂ ತ್ರಿಷಾ ಪಾತ್ರಗಳು ಕೇವಲ ಗ್ಲಾಮರ್‌ಗಷ್ಟೇ ಮೀಸಲು. ಅದರಲ್ಲೂ ಮುಖ್ಯವಾಗಿ ನಟಿ ತ್ರಿಷಾ ಕೃಷ್ಣನ್ ಪಾತ್ರವು ಹೆಚ್ಚುಕಡಿಮೆ 'ಕಾಲ್ ಗರ್ಲ್‌' ಜೀವನಕ್ಕೆ ಸಮನಾಗಿದೆ. ಹಾಗಿದ್ದರೆ ತ್ರಿಷಾ ಯಾಕೆ ಇಂತಹ ಪಾತ್ರ ಒಪ್ಪಿಕೊಂಡ್ರು? ಮುದುಕ ಕಮಲ್ ಹಾಸನ್ ಜೊತೆಗೆ ಲಿಪ್ ಲಾಕ್ ದೃಶ್ಯದಲ್ಲೂ ತ್ರಿಷಾ ನಟಿಸುವ ಅಗತ್ಯವಿತ್ತೇ? ಹೀಗೆಂದು ಪ್ರಶ್ನೆ ಮಾಡುತ್ತಿದ್ದಾರೆ ತ್ರಿಷಾ ಫ್ಯಾನ್ಸ್!

ತ್ರಿಷಾ ಏನ್ ಹೇಳ್ತಾರೋ ಅವರಿಗೇ ಗೊತ್ತು..! ಉತ್ತರವನ್ನು ಬಹುಶಃ ಪ್ರಶ್ನೆ ಕೇಳಿದವರೇ ಕೊಟ್ಟುಕೊಳ್ಳಬೇಕೋನೋ.. ಅಥವಾ, ನಿರ್ಮಾಪಕ ಕಮಲ್ ಹಾಸನ್ ಕೊಡಬೇಕಾಗಬಹುದು. ಅದೂ ಆಗದಿದ್ದರೆ ನಿರ್ದೇಶಕ ಮಣಿರತ್ನಂ ಅವರನ್ನು ಕೇಳೋದು ಅನಿವಾರ್ಯ. ಉತ್ತರ ಬೇಕಾದರೆ ನೀವೇ ಪಟ್ಟುಹಿಡಿದು ಪಡೆದುಕೊಳ್ಳಿ.. ಒಟ್ಟಿನಲ್ಲಿ, ಇಷ್ಟು ದಿನ ಸಂಪಾದಿಸಿಕೊಂಡಿದ್ದ ಮಾನ-ಮರ್ಯಾದೆಯನ್ನು ನಟಿ ತ್ರಿಷಾ ಕಮಲ್ ಹಾಸನ್ 'ಥಗ್ ಲೈಫ್‌' ಮೂಲಕ ಹಾಳು ಮಾಡಿಕೊಂಡ್ರಾ? ಯಾರನ್ನು ಕೇಳೋದು, ಯಾರು ಹೇಳೋರು..!?