ಇತ್ತೀಚೆಗೆ ಟೇಬಲ್ ಟೆನಿಸ್ ಆಟಗಾರ್ತಿ ಮುದಿತ್ ದಾನಿ ಮುಂಬೈನಲ್ಲಿ ವಿವಾಹವಾದರು. ಸಮಾರಂಭದಲ್ಲಿ ಇಡೀ ಅಂಬಾನಿ ಕುಟುಂಬ ಭಾಗವಹಿಸಿತ್ತು. ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರೂ ನೀತಾ ಅಂಬಾನಿ ಮಾತ್ರ ಎಲ್ಲರ ಗಮನ ಸೆಳೆದರು.

ಭಾರತದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಇಡೀ ಕುಟುಂಬವು ಫ್ಯಾಷನ್ ಮತ್ತು ಸ್ಟೈಲ್‌ನಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಟೇಬಲ್ ಟೆನಿಸ್ ಚಾಂಪಿಯನ್ ಮುದಿತ್ ದಾನಿ ಅವರ ವಿವಾಹ ಸಮಾರಂಭದಲ್ಲಿಯೂ ಅಂಬಾನಿ ಕುಟುಂಬ ಮತ್ತೊಮ್ಮೆ ಸದ್ದು ಮಾಡಿತು. ಆದರೆ ಅವರೆಲ್ಲರ ಪೈಕಿ ಅತ್ಯಂತ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಿಸಿಕೊಂಡಿದ್ದು ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ. ನೀತಾ ತುಂಬಾ ಸುಂದರವಾದ ಕಿತ್ತಳೆ ಬಂಧನಿ ಸೀರೆಯಲ್ಲಿ ಎಲ್ಲರ ಗಮನ ಸೆಳೆದರು. ಹಾಗಾದರೆ ನೀತಾ ಅಂಬಾನಿಯವರ ಈ ವಿಶೇಷ ಲುಕ್ ಹೇಗಿತ್ತೆಂದು ತಿಳಿದುಕೊಳ್ಳೋಣ ಬನ್ನಿ...

ಹೆಚ್ಚು ಚರ್ಚೆಯಾಗಿದ್ದು ನೀತಾರ ಉಡುಗೆ
ಮುದಿತ್ ದಾನಿಯವರ ಮದುವೆಗೆ ಅಂಬಾನಿ ಇಡೀ ಕುಟುಂಬ ಆಗಮಿಸಿತ್ತು. ಮುಖೇಶ್ ಅಂಬಾನಿ ಕ್ಲಾಸಿಕ್ ಕುರ್ತಾ-ಪೈಜಾಮ ಧರಿಸಿ ಕಾಣಿಸಿಕೊಂಡರೆ, ಅವರ ಪುತ್ರರಾದ ಆಕಾಶ್ ಮತ್ತು ಅನಂತ್ ಅಂಬಾನಿ ಕೂಡ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡರು. ಅಂಬಾನಿ ಕುಟುಂಬದ ಸೊಸೆಯಂದಿರಾದ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಕೂಡ ಸಾಕಷ್ಟು ಸೊಗಸಾಗಿ, ಸಖತ್ ಸ್ಟೈಲಿಶ್ ಆಗಿ ಕಂಡರು. ಈ ಮೊದಲೇ ಹೇಳಿದ ಹಾಗೆ ಹೆಚ್ಚು ಚರ್ಚೆಗೆ ಗ್ರಾಸವಾದದ್ದು ನೀತಾ ಅಂಬಾನಿಯವರ ಉಡುಗೆ.

ನೀತಾ ಅಂಬಾನಿ ಜರಿ ವರ್ಕ್ ಹೊಂದಿರುವ, ವರ್ಣರಂಜಿತ ಕಿತ್ತಳೆ ಬಣ್ಣದ ಬಂಧನಿ ಸೀರೆ ಧರಿಸಿದ್ದರು. ಇದು ನೀತಾ ಅಂಬಾನಿಯವರ ಸಾಂಪ್ರದಾಯಿಕ ಲುಕ್‌ನ ಸೌಂದರ್ಯ ಹೆಚ್ಚಿಸಿತು. ಈ ಸೀರೆಯನ್ನು ಬ್ಯಾಕ್‌ಬಟನ್ ಬ್ಲೌಸ್‌ನೊಂದಿಗೆ ವಿನ್ಯಾಸಗೊಳಿಸಲಾಗಿತ್ತು. ಇದು ಅವರ ಸಾಂಪ್ರದಾಯಿಕ ನೋಟಕ್ಕೆ ಆಧುನಿಕ ಸ್ಪರ್ಶವನ್ನು ನೀಡುತ್ತಿತ್ತು.

ವಜ್ರದ ಕಿವಿಯೋಲೆ, ಮುತ್ತಿನ ಹಾರ
ನೀತಾ ಅಂಬಾನಿ ಸೀರೆಗೆ ಆಭರಣವಾಗಿ ಮುತ್ತಿನ ಹಾರ ಮತ್ತು ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರು. ಹೆವಿ ಜ್ಯುವೆಲರಿ ಬದಲಿಗೆ ಸಿಂಪಲ್ ಪರಿಕರಗಳನ್ನು ಆರಿಸಿಕೊಂಡಿದ್ದರಿಂದ ಇದು ಅವರ ಸಂಪೂರ್ಣ ಲುಕ್‌ ಅನ್ನು ಬ್ಯಾಲೆನ್ಸ್ ಆಗಿ, ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿತು.

ಮೇಕಪ್ ವಿಷಯದಲ್ಲೂ ನೀತಾ ಅಂಬಾನಿ ಸೂಕ್ಷ್ಮ ಆಯ್ಕೆ ಮಾಡಿಕೊಂಡಿದ್ದರು. ಹೇರ್ ಸ್ಟೈಲ್ ವಿಚಾರಕ್ಕೆ ಬರುವುದಾದರೆ ಬನ್‌ ಸ್ಟೈಲ್ ಅವರ ಸಂಪೂರ್ಣ ಲುಕ್ ಅನ್ನು ಕ್ಲಾಸಿಕ್ ಆಗಿ ಕಾಣುವಂತೆ ಮಾಡಿತ್ತು.

ಯಾವಾಗಲೂ ಟ್ರೆಂಡ್‌ಸೆಟ್ಟಿಂಗ್..
ಅಂಬಾನಿ ಕುಟುಂಬವು ಪ್ರತಿಯೊಂದು ಕಾರ್ಯಕ್ರಮದಲ್ಲೂ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ಮೆಚ್ಚಿಸುತ್ತದೆ. ಅದು ಮದುವೆ, ಸಮಾರಂಭ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ರಮವಾಗಿರಲಿ, ಅವರ ಫ್ಯಾಷನ್ ಪ್ರಜ್ಞೆ ಯಾವಾಗಲೂ ಟ್ರೆಂಡ್‌ಸೆಟ್ಟಿಂಗ್ ಆಗಿರುತ್ತದೆ. ನೀತಾ ಅಂಬಾನಿ ಮತ್ತೊಮ್ಮೆ ಭಾರತೀಯ ಕರಕುಶಲ ವಸ್ತುಗಳು ಮತ್ತು ಆಧುನಿಕ ಫ್ಯಾಷನ್‌ನ ಅತ್ಯುತ್ತಮ ಕಾಂಬಿನೇಶನ್ ಪ್ರೆಸೆಂಟ್ ಮಾಡುವಲ್ಲಿ ತಾನು ಪರಿಣಿತಳು ಎಂದು ಸಾಬೀತುಪಡಿಸಿದ್ದಾರೆ.

ಮುದಿತ್ ದಾನಿಯವರ ಮದುವೆಯಲ್ಲಿ ಇಡೀ ಅಂಬಾನಿ ಕುಟುಂಬವು ತುಂಬಾ ಆಕರ್ಷಕವಾಗಿ ಕಾಣುತ್ತಿದ್ದರೂ, ನೀತಾ ಅಂಬಾನಿಯವರ ಕಿತ್ತಳೆ ಬಣ್ಣದ ಬಂಧನಿ ಸೀರೆಯಲ್ಲಿನ ಲುಕ್ ಹೆಚ್ಚು ಇಷ್ಟವಾಗುತ್ತಿದೆ. ನೀತಾ ಅಂಬಾನಿಯವರ ಈ ಲುಕ್ ನಿಂದ ನೀವೂ ಸ್ಫೂರ್ತಿ ಪಡೆದು ನಿಮ್ಮ ಮದುವೆ ಅಥವಾ ಯಾವುದೇ ಕಾರ್ಯಕ್ರಮಕ್ಕೆ ವಿಶೇಷ ಲುಕ್ ಕ್ರಿಯೇಟ್ ಮಾಡಬಹುದು.

View post on Instagram

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಫೋಟೋಗಳು
ಅಂಬಾನಿ ಫ್ಯಾಮಿಲಿಯವರ ಜನಪ್ರಿಯ ಫ್ಯಾನ್ಸ್‌ ಪೇಜ್‌ವೊಂದು ಅಂಬಾನಿ ದಂಪತಿಗಳು ವಿವಾಹ ಸಂಭ್ರಮವನ್ನು ಆನಂದಿಸುತ್ತಿರುವ ಹಲವಾರು ಹೃದಯಸ್ಪರ್ಶಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಕುಟುಂಬವು ಸ್ನೇಹಿತರು ಮತ್ತು ಇತರ ಅತಿಥಿಗಳೊಂದಿಗೆ ಬೆರೆತಾಗ ಸಂತೋಷ ಹೇಗಿರುತ್ತದೆ ಎಂಬುದನ್ನು ಕ್ಯಾಮೆರಾದರಲ್ಲಿ ಸೆರೆಹಿಡಿಯಲಾಗಿದೆ. ಪ್ರತಿಯೊಬ್ಬ ಸದಸ್ಯರು ಎಥ್ನಿಕ್ ಡ್ರೆಸ್ ಧರಿಸಿದ್ದರು. ಆದರೆ ನೀತಾ ಅಂಬಾನಿ ಅವರ ಸೀರೆಗೆ ಹೆಚ್ಚು ಮಾರ್ಕ್ ಸಿಕ್ಕಿದೆ.