Home remedies: ಟೀಪುಡಿ ಮತ್ತು ಈರುಳ್ಳಿ ಸಿಪ್ಪೆಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ಎಂದಿಗೂ ಕಾಡಲ್ಲ. ಹಾಗಾದರೆ ಬನ್ನಿ, ಅದನ್ನು ತಯಾರಿಸಿ, ಹಚ್ಚುವುದು ಹೇಗೆಂದು ತಿಳಿಯೋಣ..

Home remedies for white hair: ಕೂದಲು ಬಿಳಿಯಾಗಲು ಹಲವು ಕಾರಣಗಳಿರಬಹುದು. ವಯಸ್ಸಾದಂತೆ ಕೂದಲು ಬಿಳಿಯಾಗುವುದರಿಂದ ಅನೇಕ ಜನರು ಮುಜುಗರ ಅನುಭವಿಸುತ್ತಾರೆ. ಇನ್ನು ಮುಖ್ಯವಾದ ಸಮಸ್ಯೆಯೆಂದರೆ ಕೂದಲು ಬೇಗ ಬೆಳ್ಳಗಾದರೆ ವಯಸ್ಸು ಎಷ್ಟೆಂದು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಅಂದರೆ, ಅವರ ವಯಸ್ಸು ಕಡಿಮೆ ಇದ್ದರೂ ಅವರ ಕೂದಲು ಬಿಳಿಯಾಗಿ ಕಾಣುತ್ತದೆ. ಅಂತಹ ಸಮಯದಲ್ಲಿ ಈ ಕೂದಲನ್ನು ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಕಪ್ಪು ಮಾಡಲು ಪ್ರಯತ್ನಪಡುವ ಸಾಕಷ್ಟು ಜನರಿದ್ದಾರೆ. ಆಗ ಕೆಲವರು ತಿಂಗಳಿರಲಿ, ಪ್ರತಿ ವಾರಕ್ಕೊಮ್ಮೆ ಎರಡನೇ ಅಥವಾ ಮೂರನೇ ದಿನಕ್ಕೆ ಮಾರುಕಟ್ಟೆಯಿಂದ ರಾಸಾಯನಿಕ ಹೇರ್ ಡೈ ತಂದು ಬಳಸುವುದರಿಂದ ಕೂದಲಿಗೆ ಹಾನಿಯಾಗಬಹುದು. ಆದ್ದರಿಂದ ಕೂದಲಿಗೆ ಹಾನಿಯಾಗದಂತೆ ಮತ್ತು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು, ಹೇರ್ ಕಲರ್ ಅನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?, ಅಪ್ಲೈ ಮಾಡುವುದು ಹೇಗೆ? ಎಂದು ಹೋಮ್ ಶೆಫ್ ಪೂನಂ ದೇವ್ನಾನಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ನೀವು ಕೂಡ ಈ ಮನೆಮದ್ದನ್ನು ಬಳಸಿಕೊಂಡು, ತಡಮಾಡದೆ ಬಿಳಿ ಕೂದಲನ್ನು ಕಪ್ಪು ಮಾಡಿಕೊಳ್ಳಿ.

ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲೇ ತಯಾರಿಸಿ ಹೇರ್ ಡೈ
ಬಿಳಿ ಕೂದಲನ್ನು ಕಪ್ಪು ಮಾಡಲು ಈರುಳ್ಳಿ ಸಿಪ್ಪೆ ಮತ್ತು ಟೀ ಪೌಡರ್‌ಗೆ ನೀರು ಸೇರಿಸಿ ಕುದಿಸಿ. ನೀರು ಕಂದು ಬಣ್ಣ ಬರುವವರೆಗೆ ಈ ಮಿಶ್ರಣವನ್ನು ಕುದಿಸಬೇಕು. ಈ ಮಿಶ್ರಣ ಚೆನ್ನಾಗಿ ಕುದ್ದ ನಂತರ, ಅದನ್ನು ಫಿಲ್ಟರ್ ಮಾಡಿ ಪಕ್ಕಕ್ಕೆ ಇರಿಸಿ. ಈ ಮಿಶ್ರಣವನ್ನು ರಾತ್ರಿ ಕೂದಲಿಗೆ ಬಳಸಬಹುದು. ರಾತ್ರಿ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ ಮತ್ತು ರಾತ್ರಿಯಿಡೀ ಬಿಟ್ಟ ನಂತರ, ಬೆಳಗ್ಗೆ ಶಾಂಪೂ ಬಳಸಿ ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೆ 2 ರಿಂದ 3 ಬಾರಿ ಕೂದಲಿಗೆ ಹಚ್ಚಬಹುದು. ಈರುಳ್ಳಿ ಮತ್ತು ಟೀ ಪುಡಿಯ ಈ ಮಿಶ್ರಣವು ಬಿಳಿ ಕೂದಲಿಗೆ ಕಪ್ಪು ಬಣ್ಣವನ್ನು ನೀಡುವುದಲ್ಲದೆ, ಈರುಳ್ಳಿಯ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮನೆಮದ್ದನ್ನು ಪ್ರಯತ್ನಿಸುವ ಮೂಲಕ ನೀವು ಉತ್ತಮ ಫಲಿತಾಂಶಗಳನ್ನು ಸಹ ಪಡೆಯಬಹುದು.

View post on Instagram

ಈ ಟಿಪ್ಸ್ ಕೂಡ ಸಹಕಾರಿ

ಇನ್ನು ಕೆಲವು ಮನೆಮದ್ದುಗಳಿವೆ. ನೀವದನ್ನು ಉಪಯೋಗಿಸಿಕೊಳ್ಳುವ ಮೂಲಕ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.

ಮೊದಲನೆಯದು ಕರಿಬೇವಿನ ಎಲೆಗಳನ್ನು ಕೊಬ್ಬರಿಎಣ್ಣೆಯಲ್ಲಿ ಕುದಿಸುವ ಮೂಲಕ ಎಣ್ಣೆಯನ್ನು ತಯಾರಿಸಬಹುದು. ಈ ಕರಿಬೇವಿನ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಕೂದಲಿನ ಬಣ್ಣ ಕಪ್ಪಾಗುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕ್ರಮೇಣ ಬಿಳಿ ಕೂದಲು ಕಪ್ಪಾಗಿ ಕಾಣಲು ಪ್ರಾರಂಭಿಸುತ್ತದೆ.

ಇನ್ನೊಂದು ಪರಿಣಾಮಕಾರಿ ಸಲಹೆಯೆಂದರೆ ಬಿಳಿ ಕೂದಲಿಗೆ ಹೇರ್ ಡೈ ಮಾಡಲು ಮೆಹಂದಿಯಲ್ಲಿ ಟೀಪುಡಿ ನೀರು ಮತ್ತು ಕಲೋಂಜಿ ಪುಡಿಯನ್ನು ಬೆರೆಸಿ ತಯಾರಿಸಬಹುದು. ಈ ಹೇರ್ ಡೈನಿಂದ ಕೂದಲು ಬೇರುಗಳಿಂದ ತುದಿಯವರೆಗೆ ಕಪ್ಪಾಗುತ್ತದೆ. ಕೆಲವೊಮ್ಮೆ ಮೆಹಂದಿ ಹಚ್ಚುವುದರಿಂದ ಕೂದಲು ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಆದರೆ, ಹೇರ್ ಡೈ ಅನ್ನು ಟೀ ಪುಡಿ ಮತ್ತು ಕಲೋಂಜಿ ಪುಡಿಯಿಂದ ತಯಾರಿಸಿದರೆ, ಅದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.

ಮೂರನೆಯದು ಬಿಳಿ ಕೂದಲನ್ನು ಕಪ್ಪಾಗಿಸಲು ಅಜ್ಜಿಯರು ಬ್ಲಾಕ್ ಟೀ ಪೌಡರ್ ಆಯ್ಕೆ ಮಾಡಿಕೊಂಡಿದ್ದಾರೆ. ಏಕೆಂದರೆ ಬ್ಲಾಕ್ ಟೀಪುಡಿ ನೀರಿನಿಂದ ಕೂದಲು ತೊಳೆಯುವುದರಿಂದ ಕೂದಲಿಗೆ ಆಳವಾದ ಕಪ್ಪು ಬಣ್ಣ ಬರುತ್ತದೆ. ಇದಕ್ಕಾಗಿ, ನೀವು ಮಾಡಬೇಕಾಗಿರುವುದು ಟೀಪುಡಿಯನ್ನು ನೀರಿನಲ್ಲಿ ಕುದಿಸಿ. ಈ ನೀರನ್ನು ತಣ್ಣಗಾಗಿಸಿ ನಂತರ ಕೂದಲನ್ನು ತೊಳೆಯಲು ಬಳಸಿ. ಕೂದಲನ್ನು ನಿಯಮಿತವಾಗಿ ಇದರಿಂದ ತೊಳೆದರೆ, ಬಿಳಿ ಕೂದಲು ಕಪ್ಪಾಗಲು ಪ್ರಾರಂಭಿಸುತ್ತದೆ.