ಹಣಕಾಸಿನ ಸಮಸ್ಯೆಗಳು, ಸಾಲದ ಬಾಧೆ, ಮನೆಯಲ್ಲಿ ಕಲಹವಿದ್ದರೆ, ತುಳಸಿ ಗಿಡದ ಮಣ್ಣಿನಲ್ಲಿ ಒಂದು ವಸ್ತುವನ್ನು ಹೂತು ಹಾಕುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ತುಳಸಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದ್ದು, ಇದು ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ.
ಹಣದ ಕೊರತೆ, ಮನೆಯಲ್ಲಿ ಕಲಹ, ಸಾಲಗಾರರ ಕಿರುಕುಳ ಅನುಭವಿಸುತ್ತಿದ್ರೆ ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರವಿದೆ. ತುಳಸಿ ಗಿಡದ ಮಣ್ಣಿನಲ್ಲಿ ವಸ್ತುವೊಂದನ್ನು ಹೂತು ಹಾಕುವ ಮೂಲಕ ಹಣಕಾಸು ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನ ನೀಡಲಾಗಿದೆ. ತುಳಸಿಯನ್ನು ಲಕ್ಷ್ಮೀ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡದ ಮಹತ್ವವನ್ನು ವಿವರಿಸಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ತುಳಸಿಗೆ ಪೂಜೆ ಮಾಡೋದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಇದರ ಜೊತೆಯಲ್ಲಿ ತುಳಸಿ ಹಲವು ಆರೋಗ್ಯಕರ ಗುಣಗಳನ್ನು ಸಹ ಹೊಂದಿದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ತುಳಸಿ ಸಹಾಯ ಮಾಡುತ್ತದೆ.
ಪ್ರತಿನಿತ್ಯ ತುಳಸಿಯನ್ನು ಪೂಜೆ ಮಾಡೋದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರವಾಗಬಹುದು. ತುಳಸಿ ಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯ ಹೂತು ಹಾಕಬೇಕು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. 1 ರೂಪಾಯಿ ನಾಣ್ಯವನ್ನು ಮಣ್ಣಿನಲ್ಲಿ ಹೂಳೂವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ನೋಡೋಣ ಬನ್ನಿ.
1.ಮನೆಯಲ್ಲಿ ವಾಸ್ತುದೋಷವಿದ್ರೆ ತುಳಸಿಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ಅಥವಾ ತಾಮ್ರ ಅಥವಾ ಬೆಳ್ಳಿ ನಾಣ್ಯವನ್ನು ಇರಿಸಬೇಕು. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಕಡಿಮೆಯಾಗಿ ಧನಾತ್ಮಕ ಶಕ್ತಿಯ ಹೆಚ್ಚಳವಾಗುತ್ತದೆ. ಸಕಾರಾತ್ಮಕತೆ ಹೆಚ್ಚಳವಾದಾಗ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.
2.ತುಳಸಿಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯ ಹೂಳುವುದರಿಂದ ಶನಿ ಮತ್ತು ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ನಿ ಸಾಡೇಸಾತಿ ಅಥವಾ ರಾಹು-ಕೇತುವಿನ ನಕಾರಾತ್ಮಕ ಪರಿಣಾಮಗಳ ಪ್ರಭಾವ ಕಡಿಮೆಯಾಗುತ್ತದೆ.
3.ಕುಟುಂಬದ ಸದಸ್ಯರುಗಳು ನಡುವೆ ಜಗಳ ನಡೆಯುತ್ತಿದ್ರೆ, ತುಳಸಿಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯ ಹೂಳಬೇಕು. ತುಳಸಿ ಮಣ್ಣಿನ ಶಕ್ತಿಯಿಂದಾಗಿ ಒಂದು ರೂಪಾಯಿ ನಾಣ್ಯ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ಜು ಪಸರಿಸುತ್ತದೆ.
ಇದನ್ನೂ ಓದಿ: ವಾಸ್ತು ಟಿಪ್ಸ್: ಪಾಸಿಟಿವ್ ಎನರ್ಜಿಗಾಗಿ ನಿಮ್ಮ ಮನೆಗೆ ಈ ಬಣ್ಣ ಬಳಸಿ
4.ನಿಮ್ಮ ಮನೆಯ ಸದಸ್ಯರ ಜಾತಕದಲ್ಲಿ ಪಿತೃದೋಷವಿದ್ದರೆ , ತುಳಸಿಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯ ಹೂಳಬೇಕು. ಹೀಗೆ ಮಾಡುವದರಿಂದ ಪೂರ್ವಜರ ಆಶೀರ್ವಾದ ಲಭಿಸುತ್ತದೆ. ಪಿತೃದೋಷದ ಸಮಸ್ಯೆಗಳು ನಿವಾರಣೆಯಾಗುತ್ತವೆ.
5.ತುಳಸಿ ಗಿಡದ ಮಣ್ಣಿನಲ್ಲಿ ಕೇವಲ 1 ರೂಪಾಯಿ ಹೂತರೆ ಸಾಲದು. ಪ್ರತಿದಿನ ನಿಯಮಿತವಾಗಿ ತುಳಸಿಯನ್ನು ಪೂಜಿಸಬೇಕು. ಹಾಗೆ ತುಪ್ಪ ಅಥವಾ ಎಣ್ಣೆಯ ದೀಪವನ್ನು ಬೆಳಗಬೇಕು. ಹಾಗೆ ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: ಈ 5 ರಾಶಿ ಹೆಂಡತಿ ಗಂಡನ ಭವಿಷ್ಯ ಬದಲಾಯಿಸುತ್ತಾರಂತೆ, ಶ್ರೀಮಂತಿಕೆ ಪಕ್ಕಾ
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
