ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷ ಹೊಸದಾಗಿರಬೇಕು, ಎಲ್ಲ ಸಮಸ್ಯೆಗೆ ಮುಕ್ತಿ ಸಿಗಬೇಕು, ಸಾಲ – ಅನಾರೋಗ್ಯದಿಂದ ಮುಕ್ತಿ ಸಿಗಬೇಕು ಎನ್ನುವವರು ಏನೆಲ್ಲ ಮಾಡ್ಬೇಕು ಗೊತ್ತಾ?

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಟ್ಟ ಅಭ್ಯಾಸ (Bad habit) ಇರುತ್ತೆ. ಕೆಲವೊಂದನ್ನು ನಾವು ಅರಿತುಕೊಳ್ಳೋದಿಲ್ಲ ಮತ್ತೆ ಕೆಲವೊಮ್ಮೆ ಇದನ್ನು ನಿರ್ಲಕ್ಷ್ಯಿಸ್ತೇವೆ. ಇಷ್ಟು ದಿನ ಕಷ್ಟಪಟ್ಟಿದ್ದು ಸಾಕು, ಒಳ್ಳೆ ದಿನಗಳು ಬೇಕು ಎನ್ನುವವರು ಬರ್ತಿರುವ ಮುಂದಿನ ವರ್ಷದ ಮೊದಲ ದಿನದಿಂದ್ಲೇ ಕೆಲ ಅಭ್ಯಾಸಗಳನ್ನು ತ್ಯಜಿಸೋದು ಒಳ್ಳೆಯದು. ಸಣ್ಣ ಅಥವಾ ಸಾಮಾನ್ಯ ಅಭ್ಯಾಸಗಳು ನಿಮ್ಮ ಜೀವನ ಬದಲಿಸುವ ಸಾಧ್ಯತೆ ಇರುತ್ತದೆ. ನಮ್ಮ ಜೀವನದಲ್ಲಿ ಗ್ರಹಗಳ ಬದಲಾವಣೆ ಮಾತ್ರ ಕಷ್ಟ, ನೋವುಗಳನ್ನು ತರೋದಿಲ್ಲ. ನಮ್ಮ ನಡವಳಿಕೆ, ಜೀವನಶೈಲಿ, ಆಲೋಚನೆ ಪ್ರತಿಯೊಂದು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ನೀವೆಷ್ಟೇ ಕಠಿಣ ಪರಿಶ್ರಮವಹಿಸಿದ್ರೂ ಯಶಸ್ಸು ಸಿಗೋದಿಲ್ಲ. 2026ರ ಆರಂಭದಲ್ಲೇ ಯಾವೆಲ್ಲ ಅಭ್ಯಾಸ ಬಿಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ತಡವಾಗಿ ಮಲಗಿ ತಡವಾಗಿ ಏಳುವುದು

ಅನೇಕರು ರಾತ್ರಿ ಎರಡು – ಮೂರು ಗಂಟೆಯಾದ್ರೂ ಮಲಗೋದಿಲ್ಲ. ಬೆಳಿಗ್ಗೆ 10 ಗಂಟೆಯಾದ್ರೂ ಏಳೋದಿಲ್ಲ. ತಡವಾಗಿ ಮಲಗೋದು ಹಾಗೂ ತಡವಾಗಿ ಏಳೋದು ಈಗ ಸ್ಟೈಲ್ ಆಗಿದೆ. ಆದ್ರೆ ಇದು ನಿಮ್ಮ ಅದೃಷ್ಟ ಹಾಗೂ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನನ್ನು ದುರ್ಬಲಗೊಳಿಸುತ್ತದೆ. ಸೂರ್ಯನನ್ನು ಶಕ್ತಿ, ಪ್ರತಿಷ್ಠೆ ಮತ್ತು ನಾಯಕತ್ವಕ್ಕೆ ಹೋಲಿಸಲಾಗುತ್ತದೆ. ಕಳಪೆ ದಿನಚರಿ ಜಾತಕದಲ್ಲಿ ಸೂರ್ಯ ದೋಷಕ್ಕೆ ದಾರಿಮಾಡಿಕೊಡುತ್ತದೆ. ತಂದೆಗೆ ಅಗೌರವ, ಹಿರಿಯರಿಗೆ ಅವಮಾನ ಎಲ್ಲವೂ ಸೂರ್ಯ ದೋಷಕ್ಕೆ ಕಾರಣವಾಗುತ್ತದೆ.

2026 ರಲ್ಲಿ ಹಂಸ-ಮಾಳವ್ಯ ಡಬಲ್ ರಾಜಯೋಗ, ಈ ರಾಶಿ ಹಣದ ಪೆಟ್ಟಿಗೆ ಪಕ್ಕಾ ಫುಲ್

ಅಸೂಯೆ

ನಿಮ್ಮಲ್ಲಿ ಎಷ್ಟಿದೆಯೋ ಅದ್ರಲ್ಲಿ ತೃಪ್ತಿಪಡುವುದು ಬಹಳ ಮುಖ್ಯ. ಅನೇಕರು ತಮ್ಮಲ್ಲಿರುವ ವಸ್ತುಗಿಂತ ಬೇರೆಯವರ ಬಳಿ ಇರುವ ಆಸ್ತಿ ಮೇಲೆ ಕಣ್ಣಿಟ್ಟಿರುತ್ತಾರೆ. ಯಾವುದೇ ವ್ಯಕ್ತಿ ಏಳ್ಗೆಯನ್ನು ಸಹಿಸೋದಿಲ್ಲ. ಇದು ರಾಹು ದೋಷಕ್ಕೆ ಕಾರಣವಾಗುತ್ತದೆ. ಕೆಲ್ಸದಲ್ಲಿ ಅಡೆತಡೆ ಎದುರಾಗುತ್ತದೆ. ರಾಹು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಾನೆ.

ನೀರು ವ್ಯರ್ಥ

ನೀರನ್ನು ವ್ಯರ್ಥ ಮಾಡೋದು ದೊಡ್ಡ ತಪ್ಪು. ನಾವು ಮಾಡುವ ಈ ತಪ್ಪು ಮುಂದಿನ ಪೀಳಿಗೆಗೆ ದೊಡ್ಡ ಸಮಸ್ಯೆ ತರಬಹುದು. ಇದು ಒಂದ್ಕಡೆಯಾದ್ರೆ ಇನ್ನೊಂದು ಕಡೆ ನೀರನ್ನು ವ್ಯರ್ಥ ಮಾಡಿದ್ರೆ ಅದು ಚಂದ್ರ ಗ್ರಹದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಜೀವನದಲ್ಲಿ ನಾನಾ ಏರುಪೇರಿಗೆ ಕಾರಣವಾಗುತ್ತದೆ. ಚಂದ್ರ ದುರ್ಬಲನಾಗುತ್ತಾನೆ. ಇದು ಒತ್ತಡ, ಕೌಟುಂಬಿಕ ವಾದಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ ನೀವು ತಾಯಿ ಅಥವಾ ಹೆಂಡತಿಯನ್ನು ಎಂದಿಗೂ ಅವಮಾನಿಸಬಾರದು. ಇದು ಚಂದ್ರನನ್ನು ಅಸಮಾಧಾನಗೊಳಿಸುತ್ತದೆ. ಹೊಸ ವರ್ಷದಲ್ಲಿ ಈ ಅಭ್ಯಾಸವನ್ನು ಬಿಡಿ. ನೀರನ್ನು ವ್ಯರ್ಥ ಮಾಡ್ಬೇಡಿ.

Vastu Tips: ಹೊಸ ವರ್ಷಕ್ಕೂ ಮೊದ್ಲು ಈ ವಸ್ತುಗಳನ್ನ ತಂದ್ರೆ, ಮನೆ ತುಂಬಾ ಹಣವೋ ಹಣ!

ಉಗುರು ಕಚ್ಚುವ ಅಭ್ಯಾಸ

ಅನೇಕರು ಉಗುರು ಕಚ್ಚುವ ಅಭ್ಯಾಸ ಹೊಂದಿರುತ್ತಾರೆ. ಟೆನ್ಷನ್ ಆದಾಗ ಉಗುರು ಕಚ್ಚೋದು ಹೆಚ್ಚು. ಉಗುರು ಕಚ್ಚೋದು ಆರೋಗ್ಯವನ್ನು ಹಾಳು ಮಾಡುತ್ತದೆ. ವ್ಯಕ್ತಿಯ ಜಾತಕ ಮತ್ತು ಪ್ರಗತಿಯ ಮೇಲೂ ಇದು ಪರಿಣಾಮ ಬೀರುತ್ತದೆ. ಉಗುರು ಕಚ್ಚುವುದು ರಾಹು ಮತ್ತು ಶನಿ ಗ್ರಹಗಳೆರಡರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಜೀವನದಲ್ಲಿ ಆತಂಕ, ಗೊಂದಲ ಮತ್ತು ಅನಗತ್ಯ ಭಯವನ್ನು ಉಂಟುಮಾಡುತ್ತದೆ. ಹೊಸ ವರ್ಷದಲ್ಲಿ ಎಲ್ಲ ಕೆಲ್ಸಗಳು ಭಯವಿಲ್ಲದೆ, ನಕಾರಾತ್ಮಕ ಪ್ರಭಾವವಿಲ್ಲದೆ ಯಶಸ್ವಿಯಾಗಿ ಆಗ್ಬೇಕು ಅಂದ್ರೆ ಉಗುರು ಕಚ್ಚುವ ಅಭ್ಯಾಸ ಬಿಡಿ.