Trump tariff astrological analysis : ಡೋನಾಲ್ಡ್ ಟ್ರಂಪ್, ಭಾರತೀಯರಿಗೆ ಶಾಕ್ ನೀಡಿದ್ದಾರೆ. ಏಕಾಏಕಿ ಸುಂಕ ಏರಿಕೆ ಬರೆ ನೀಡಿದ್ದಾರೆ. ಇದ್ರ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ
ಇಡೀ ದೇಶ ಚೌತಿ ಹಬ್ಬದ ಸಂಭ್ರಮದಲ್ಲಿದ್ರೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತಕ್ಕೆ ಶಾಕ್ ನೀಡಿದ್ದಾರೆ. ಭಾರತೀಯ ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ಹೆಚ್ಚುವರಿ ಸುಂಕ ಘೋಷಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದೇನಾಗಲಿದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ. ಚತುರ್ಥಿ ದಿನ, ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿರೋದು ಆರಂಭದಲ್ಲಿ ದೊಡ್ಡ ಹೊಡೆತ ನೀಡಲಿದೆಯಾದ್ರೂ ಮುಂದಿನ ದಿನಗಳಲ್ಲಿ ನಿರ್ಧಾರ ಬದಲಿಸುವ ಸಾಧ್ಯತೆ ಹೆಚ್ಚು ಎಂದು ಶಾಸ್ತ್ರಜ್ಞರು ಭರವಸೆ ನೀಡಿದ್ದಾರೆ.
ಮೀನ ರಾಶಿಯಲ್ಲಿ ಶನಿ ವಕ್ರ, ಕನ್ಯಾರಾಶಿಯಲ್ಲಿ ಮಂಗಳ-ಚಂದ್ರನ ಸಂಯೋಗ, ಮಿಥುನ ರಾಶಿಯಲ್ಲಿ ಗುರುವಿನ ಪ್ರಭಾವದಿಂದ ಇದು ಸಂಭವಿಸಿದೆ. ಟ್ರಂಪ್ ಈ ನಿರ್ಧಾರ, ಭಾರತದ ಜವಳಿ ಉದ್ಯಮ, ಕೃಷಿ, ಆಭರಣ ಉತ್ಪನ್ನಗಳ ಮೇಲಾಗಲಿದೆ. ನವೆಂಬರ್ 2025ರಲ್ಲಿ ಶನಿ ತನ್ನ ಮಾರ್ಗವನ್ನು ಬದಲಿಸಲಿದ್ದಾನೆ. ಅವನ ನೇರವಾದ ಚಲನೆ, ಹೊಸ ಒಪ್ಪಂದ ಹಾಗೂ ನಿರ್ಧಾರ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ.
ಚತುರ್ಥಿಯಂದು ರಾಜತಾಂತ್ರಿಕ ಬಿರುಗಾಳಿ : ಅಮೆರಿಕಾ ಹಾಗೂ ಭಾರತದ ಮಧ್ಯೆ ವ್ಯಾಪಾರ ಉದ್ವಿಗ್ನತೆ ಹೆಚ್ಚಾಗ್ತಿದೆ. ಗಣೇಶ ಚತುರ್ಥಿಯಂದೇ ಟ್ರಂಪ್ ಈ ನಿರ್ಧಾರ ಕಾಕತಾಳೀಯವಲ್ಲ. ಇದಕ್ಕೆ ಗ್ರಹಗತಿಗಳು ಕಾರಣ. ಮೇಲೆ ಹೇಳಿದಂತೆ ಕೆಲ ಗ್ರಹಗಳ ನಡೆ, ಸಂಯೋಗದಿಂದ ನಾನಾ ಸಮಸ್ಯೆ ಆಗ್ತಿದೆ. ಪಂಡೀತರ ಪ್ರಕಾರ, ಅಡೆತಡೆಗಳು ಮೊದಲು ಬರುತ್ವೆ, ನಂತ್ರ ಹೊಸ ಮಾರ್ಗ ತೆರೆದುಕೊಳ್ಳುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ ದಿನ ತೆಗೆದುಕೊಂಡ ಕಠಿಣ ನಿರ್ಧಾರ, ದೀರ್ಘಾವದಿಯಲ್ಲಿ ಬದಲಾಗುತ್ತದೆ. ಆದ್ರೆ ಅಲ್ಪಾವಧಿಯ ಪರಿಣಾಮ ಹೆಚ್ಚಿರುತ್ತದೆ.
ಗ್ರಹ ಸ್ಥಾನ ಸನ್ನಿವೇಷದಿಂದ ಏನೆಲ್ಲ ಆಗ್ತಿದೆ? :
ಚಂದ್ರ ಮತ್ತು ಮಂಗಳ ಕನ್ಯಾ ರಾಶಿಯಲ್ಲಿದ್ದು, ಇದರಿಂದ ದಾಖಲೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹಠಾತ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಸೂರ್ಯ ಸಿಂಹರಾಶಿಯಲ್ಲಿರುವ ಕಾರಣ ಶಕ್ತಿ ಮತ್ತು ದುರಹಂಕಾರ ಮೆರೆಯುತ್ತದೆ. ಅಮೆರಿಕಾ ಈಗ ಅದೇ ರೀತಿ ನಡೆದುಕೊಳ್ತಿದೆ.
ಇನ್ನು ಮೀನರಾಶಿಯಲ್ಲಿ ಶನಿ ವಕ್ರವಾಗಿರುವ ಕಾರಣ, ಸಮುದ್ರ ವ್ಯಾಪಾರ, ತೈಲ ಲಾಜಿಸ್ಟಿಕ್ಸ್ ಮೇಲೆ ಒತ್ತಡ ಬೀಳಲಿದೆ.
ಮಿಥುನ ರಾಶಿಯಲ್ಲಿ ಗುರು ಇರೋದ್ರಿಂದ ಒಪ್ಪಂದಗಳು, ಚರ್ಚೆ, ಮರುಪರಿಶೀಲನೆಗೆ ಅವಕಾಶವಿದೆ.
ಟ್ರಂಪ್ ನಿರ್ಧಾರದಿಂದ ಯಾವ – ಯಾವ ಕ್ಷೇತ್ರಕ್ಕೆ ಬೀಳಲಿದೆ ಹೊಡೆತ ? : ಮಸಾಲೆ ಪದಾರ್ಥ, ದಿನನಿತ್ಯದ ವಸ್ತುಗಳು ಮತ್ತು ಧಾನ್ಯದ ಮೇಲೆ ಇದು ಪರಿಣಾಮ ಬೀರಲಿದೆ. ಜವಳಿ, ರತ್ನ-ಆಭರಣದ ಮೇಲೆ ಇದ್ರ ಪರಿಣಾಮ ಕಾಣ್ಬಹುದು. ಅಲ್ಲದೆ ಡಾಲರ್ ಎದುರು ರೂಪಾಯಿ ದುರ್ಬಲವಾಗಲಿದೆ. ಇಂಧನ ಮತ್ತು ದಿನನಿತ್ಯದ ವಸ್ತುಗಳು ದುಬಾರಿಯಾಗಲಿವೆ. MSME ಮತ್ತು ಸಣ್ಣ ರೈತರಿಗೆ ಇದ್ರಿಂದ ಹೊಡೆತವಾಗಲಿದೆ. ರಫ್ತು ಕಡಿಮೆಯಾದ್ರೆ, ದೇಶೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಲಿದೆ.
ಇದಕ್ಕೆ ಜ್ಯೋತಿಷ್ಯ ಪರಿಹಾರ ಏನು? : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗಣೇಶ ಪೂಜೆ ಇದಕ್ಕೆ ಪರಿಹಾರ. ದೂರ್ವಾ ಮತ್ತು ಮೋದಕವನ್ನು ಗಣಪತಿಗೆ ಅರ್ಪಿಸುವುದ್ರಿಂದ ವ್ಯಾಪಾರ ಅಡೆತಡೆ ಕಡಿಮೆಯಾಗಲಿದೆ. ಶನಿ ಶಾಂತಿ ಕೂಡ ಇದಕ್ಕೆ ಉತ್ತಮ ಪರಿಹಾರವಾಗಿದೆ. ಶನಿ-ಮೀನ ರಾಶಿಯ ಒತ್ತಡವನ್ನು ಕಡಿಮೆ ಮಾಡಲು ಎಳ್ಳು ದೀಪ ಹಚ್ಚಬೇಕು. ಅಗತ್ಯ ಇರುವವರಿಗೆ ಆಹಾರ ದಾನ ಮಾಡ್ಬೇಕು.


