ಸೋಶಿಯಲ್ ಮೀಡಿಯಾದಲ್ಲಿ ಅನೇಕ ಆಘಾತಕಾರಿ ವಿಡಿಯೋ ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ವಿಡಿಯೋ ಸುದ್ದಿ ಮಾಡಿದೆ. ರೆಸ್ಟೋರೆಂಟ್ ಮಾಲೀಕ ಜೈಲು ಸೇರುವಂತೆ ಮಾಡಿದೆ.

ಬೀದಿ ಬದಿ ಆಹಾರ (Food) ಕ್ಲೀನ್ ಆಗಿರೋದಿಲ್ಲ, ಆಹಾರದ ಮೇಲೆ ಧೂಳಿರುತ್ತೆ ಎನ್ನುವ ಕಾರಣಕ್ಕೆ ಅನೇಕರು ರೆಸ್ಟೋರೆಂಟ್ (restaurant) ಗೆ ಹೋಗ್ತಾರೆ. ಆದ್ರೆ ರೆಸ್ಟೋರೆಂಟ್ ಇನ್ನೂ ಕೆಟ್ಟದ್ದು ಎನ್ನುವ ವಿಷ್ಯ ಅನೇಕರಿಗೆ ತಿಳಿದಿಲ್ಲ. ಆರಾಮವಾಗಿ ಕುಳಿತು, ಬಿಸಿಬಿಸಿಯಾದ ಆಹಾರ ಆರ್ಡರ್ ಮಾಡಿ ತಿನ್ನುತ್ತಾರೆ. ಅನೇಕರು ಹಣ ನೀಡಿದ್ದೇವೆ ಎನ್ನುವ ಕಾರಣಕ್ಕೆ ಪ್ಲೇಟ್ ನಲ್ಲಿ ಒಂದು ಅಗುಳು ಬಿಡದೆ ನೆಕ್ತಾರೆ. ನೀವೂ ಇವ್ರಲ್ಲಿ ಒಬ್ಬರಾಗಿದ್ರೆ ಇನ್ಮುಂದೆ ನಿಮ್ಮ ನೆಕ್ಕುವ ಕೆಲ್ಸಕ್ಕೆ ಫುಲ್ ಸ್ಟಾಪ್ ಬೀಳೋದಿದೆ. ಹೊಟೇಲ್ ಬೆಸ್ಟ್ ಅಂತ ಪದೇ ಪದೇ ಹೊಟೇಲ್ ಗೆ ಹೋಗೋರು, ಪ್ಲೇಟ್, ಪಾತ್ರೆ ಸ್ವಚ್ಛತೆ ಬಗ್ಗೆ ನಾಲ್ಕೂದಯ ಬಾರಿ ಆಲೋಚನೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಕಾರಣ ಸದ್ಯ ವೈರಲ್ ಆಗಿರುವ ವಿಡಿಯೋ. ಅದನ್ನು ನೋಡಿದ್ರೆ ರೆಸ್ಟೋರೆಂಟ್ ಆಹಾರ ತಿನ್ನೋಕೆ ವಾಕರಿಕೆ ಬರುತ್ತೆ. ಮಥುರಾ ಜಿಲ್ಲೆಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಪಾತ್ರೆಗಳನ್ನು ಟಾಯ್ಲೆಟ್ ನಲ್ಲಿ ಕ್ಲೀನ್ ಮಾಡಲಾಗ್ತಿದೆ. ಟಾಯ್ಲೆಟ್ ನಲ್ಲಿರುವ ನೀರು ಬಳಸಿ, ಪಾತ್ರೆಗಳನ್ನು ಸ್ವಚ್ಛ ಮಾಡ್ತಿರುವ ವಿಡಿಯೋ ವೈರಲ್ (video viral) ಆಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ರೊಚ್ಚಿಗೆದ್ದಿದ್ದಾರೆ. ರೆಸ್ಟೋರೆಂಟ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವಿ.ಕೆ. ರೆಸ್ಟೋರೆಂಟ್ (VK Restaurant) ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾ ಎಕ್ಸ್ @Weuttarpradesh ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಬರ್ಸಾನಾ ಪ್ರದೇಶದ ಗೋವರ್ಧನ್ ರಸ್ತೆಯಲ್ಲಿ ಈ ರೆಸ್ಟೋರೆಂಟ್ ಇದೆ. ಟಾಯ್ಲೆಟ್ ನಲ್ಲಿ ಕುಳಿತಿರುವ ಅಪ್ರಾಪ್ತ ಹುಡುಗನೊಬ್ಬ ಪಾತ್ರೆ ಕ್ಲೀನ್ ಮಾಡ್ತಿರೋದನ್ನು ನೀವು ವಿಡಿಯೋದಲ್ಲಿ ಕಾಣ್ಬಹುದು. ಆತ ಪಾತ್ರೆ ನೆನಸಿರುವ ನೀರನ್ನು ನೋಡಿದ್ರೆ ಊಟ ಸೇರೋದಿಲ್ಲ.

ಟಾಯ್ಲೆಟ್ ಅತಿ ಹೆಚ್ಚು ಬ್ಯಾಕ್ಟೀರಿಯಾ ಇರುವ ಜಾಗ. ಟಾಯ್ಲೆಟ್ ನಲ್ಲಿ ಮೊಬೈಲ್ ನೋಡ್ತಾ ಹೆಚ್ಚು ಸಮಯ ಕುಳಿತುಕೊಳ್ಬೇಡಿ, ಟಾಯ್ಲೆಟ್ ಮೂಲೆ ಮೂಲೆಯಲ್ಲಿ ಬ್ಯಾಕ್ಟೀರಿಯಾ ಇರುತ್ತೆ ಅಂತ ತಜ್ಞರು ಆಗಾಗ ಸಲಹೆ ನೀಡ್ತಾನೆ ಇರ್ತಾರೆ. ಕುಳಿತುಕೊಳ್ಳೋದಿರಲಿ, ಊಟ ಮಾಡುವ ಪ್ಲೇಟನ್ನೇ ಟಾಯ್ಲೆಟ್ ನೀರಿನಲ್ಲಿ ಕ್ಲೀನ್ ಮಾಡಲಾಗ್ತಿದೆ ಅಂದ್ರೆ ಪರಿಣಾಮ ಇನ್ನೇನಾಗ್ಬೆಡ?

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಜನರು ಪ್ರತಿಭಟನೆ ನಡೆಸಿದ್ದಾರೆ. ಮಾಲೀಕ ಹಾಗೂ ಯುವಕನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸರು ತಕ್ಷಣ ಕಾರ್ಯಪ್ರವೃತರಾಗಿದ್ದು, ಮಾಲೀಕ ಹಾಗೂ ಯುವಕನನ್ನು ಬಂಧಿಸಿದ್ದಾರೆ. ಮಾಲೀಕ ತನ್ನ ಸಹೋದರಳಿಯನ ಜೊತೆ ಈ ಹೊಟೇಲ್ ನಡೆಸ್ತಿದ್ದ ಎನ್ನಲಾಗಿದೆ. ಕೆಲ್ಸ ಮಾಡ್ತಿದ್ದ ಅಪ್ರಾಪ್ತನಾಗಿದ್ದು, ಪೊಲೀಸರು ಈ ಬಗ್ಗೆಯೂ ದೂರು ದಾಖಲಿಸಿಕೊಂಡಿದ್ದಾರೆ. ಆದ್ರೆ ಹುಡುಗ, ನನ್ನ ಇಚ್ಛೆಯಿಂದಲೇ ಕೆಲ್ಸ ಮಾಡ್ತಿರೋದಾಗಿ ಒಪ್ಪಿಕೊಂಡಿದ್ದಾನೆ. ಮುಸ್ಲಿಂ ಯುವಕ, ಹಿಂದೂ ಹೆಸರಿನಲ್ಲಿ ಈ ಹೊಟೇಲ್ ನಡೆಸ್ತಿದ್ದ ಎನ್ನುವ ಆರೋಪವೂ ಇಲ್ಲಿ ಕೇಳಿ ಬಂದಿದೆ. ಮಾಲೀಕನ ಹೆಸರು ಭೂರಾ ಖಾನ್.

ಈ ವಿಡಿಯೋ ನೋಡಿದ ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಇದೊಂದೇ ಹೊಟೇಲ್ ಅಲ್ಲ, ಶೌಚಾಲಯದಲ್ಲಿ ಪಾತ್ರೆ ಕ್ಲೀನ್ ಮಾಡುವ ಅನೇಕ ಹೊಟೇಲ್ ಗಳಿವೆ. ಅವುಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮತೆಗೆದುಕೊಳ್ಳಿ ಎಂದು ಜನರು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ತಮಾಷೆ ಕಮೆಂಟ್ ಮಾಡಿದ್ದು, ಆಹಾರದ ರುಚಿ ಹೆಚ್ಚಾಗಿರಬೇಕು ಎಂದಿದ್ದಾರೆ.

Scroll to load tweet…