ಭಾರತದ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಸರಳ ಜೀವನಶೈಲಿ ಹೊಂದಿದ್ದಾರೆ. ದುಬಾರಿ ಆಹಾರಗಳಿಗಿಂತ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಊಟ ಮತ್ತು ಸ್ಟ್ರೀಟ್ ಫುಡ್‌ಗಳನ್ನು ಇಷ್ಟಪಡುತ್ತಾರೆ. ಇಡ್ಲಿ ಸಾಂಬಾರ್, ಗುಜರಾತಿ ದಾಲ್ ರೈಸ್, ರೊಟ್ಟಿ-ರಾಜ್ಮಾ ಮತ್ತು ಭೇಲ್ ಅವರ ನೆಚ್ಚಿನ ಆಹಾರಗಳಾಗಿವೆ. ಆರೋಗ್ಯಕರ ಆಹಾರಕ್ಕೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರೆ.  

ಭಾರತದ ಶ್ರೀಮಂತ ಜೋಡಿ ಮುಖೇಶ್ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ (Nita Ambani) ಮೇಲೆ ಶ್ರೀಸಾಮಾನ್ಯರ ಕಣ್ಣು ಇದ್ದೇ ಇದೆ. ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾದ ಆಂಟಿಲಿಯಾದಲ್ಲಿ ಈ ಜೋಡಿ ವಾಸ ಮಾಡ್ತಿದೆ. ಕೆಲ ದಿನಗಳ ಹಿಂದಷ್ಟೆ ಮದುವೆಯ 40ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅನೇಕರ ಫೆವರೆಟ್ ಜೋಡಿ. ಈ ಜೋಡಿ ಬ್ಯುಸಿನೆಸ್ ನಲ್ಲಿ ಮಾತ್ರವಲ್ಲ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸ್ತಾರೆ. ಹಾಗಿರುವಾಗ ಶ್ರೀಮಂತರ ಮನೆಯ ಅಡುಗೆ ಮನೆಯಲ್ಲಿ ಅಂಥಹದ್ದೇನು ಬೇಯಿಸ್ತಾರಾ? ಇಷ್ಟೊಂದು ಹಣ ಇರೋರ ಮೆನ್ಯು ಹೇಗಿರುತ್ತೆ ಎನ್ನುವ ಪ್ರಶ್ನೆ ನಮ್ಮಂತವರನ್ನು ಕಾಡೋದು ಸಾಮಾನ್ಯ. ನಿಮ್ಗೆ ಅಚ್ಚರಿ ಆಗ್ಬಹುದು, ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಎಷ್ಟೇ ಶ್ರೀಮಂತರಾಗಿದ್ರೂ ಅವ್ರ ನಿತ್ಯದ ಆಹಾರ ದುಬಾರಿಯಾಗಿಲ್ಲ. ಅವರು ಎಲ್ಲರಂತೆ ಆರೋಗ್ಯಕರ ಹಾಗೂ ರುಚಿಕರ ಆಹಾರ (Delicious Food) ಸೇವನೆಗೆ ಆದ್ಯತೆ ನೀಡ್ತಾರೆ. ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿಗೆ ಯಾವೆಲ್ಲ ಆಹಾರ ಇಷ್ಟ ಎಂಬ ಪಟ್ಟಿ ಇಲ್ಲಿದೆ.

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಸರಳ ಜೀವನ ನಡೆಸುತ್ತಾರೆ. ದುಬಾರಿ ಬೆಲೆಯ, ಫಾರೆನ್ ಆಹಾರದ ಬದಲು, ಮನೆಯಲ್ಲಿ ತಯಾರಿಸಿದ ಆಹಾರ ಹಾಗೂ ಸ್ಟ್ರೀಟ್ ಫುಡ್ ಮೇಲೆ ಅವರಿಗೆ ಹೆಚ್ಚಿನ ಒಲವಿದೆ. ರುಚಿಯಾದ- ಸಾಂಪ್ರದಾಯಿಕ ಆಹಾರವೆಂದ್ರೆ ಇವರಿಗೆ ಬಲು ಪ್ರೀತಿ. 

ಮುಕೇಶ್-ನೀತಾ ಅಂಬಾನಿ 40ನೇ ವಿವಾಹ ವಾರ್ಷಿಕೋತ್ಸವದಲ್ಲಿ ಗಮನ ಸೆಳೆದ ಕೇಕ್!

ನೀತಾ ಅಂಬಾನಿ – ಮುಖೇಶ್ ಅಂಬಾನಿ ಫೆವರೆಟ್ ಫುಡ್ : 

ಇಡ್ಲಿ ಸಾಂಬಾರ್: ದಕ್ಷಿಣ ಭಾರತದಲ್ಲಿ ಬಹುತೇಕರ ಮನೆಯ ಬೆಳಗಿನ ತಿಂಡಿ ಇಡ್ಲಿ ಸಾಂಬಾರ್. ಮುಖೇಶ್ ಅಂಬಾನಿಗೆ ದಕ್ಷಿಣ ಭಾರತೀಯ ಪಾಕಪದ್ಧತಿ, ವಿಶೇಷವಾಗಿ ಇಡ್ಲಿ ಸಾಂಬಾರ್ ತುಂಬಾ ಇಷ್ಟ. ಮುಂಬೈನ ಮಾತುಂಗಾದಲ್ಲಿರುವ ಪ್ರಸಿದ್ಧ ದಕ್ಷಿಣ ಭಾರತೀಯ ರೆಸ್ಟೋರೆಂಟ್ ಕೆಫೆ ಮೈಸೂರು ಅವರ ನೆಚ್ಚಿನ ತಾಣದಲ್ಲಿ ಒಂದಾಗಿದೆ. ಪ್ರತಿ ಭಾನುವಾರ ಅವ್ರು ಇಡ್ಲಿ ಸಾಂಬಾರ್ ಸವಿ ಸವಿಯುತ್ತಾರೆ.

ಗುಜರಾತಿ ಶೈಲಿಯ ದಾಲ್: ಮುಖೇಶ್ ಮತ್ತು ನೀತಾ ಅಂಬಾನಿ ಸಸ್ಯಾಹಾರಿಗಳು. ಸಾಂಪ್ರದಾಯಿಕ ಮನೆ ತಿಂಡಿಯನ್ನು ಸೇವಿಸುತ್ತಾರೆ. ಮುಖೇಶ್ ಅಂಬಾನಿ ಗುಜರಾತಿ ಶೈಲಿಯ ದಾಲ್ ರೈಸ್ ಸೇವನೆ ಮಾಡಲು ಇಷ್ಟಪಡ್ತಾರೆ. 

ರೊಟ್ಟಿ ಮತ್ತು ರಾಜ್ಮಾ: ನೀತಾ ಮತ್ತು ಮುಖೇಶ್ ತಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡ್ತಾರೆ. ವೃತ್ತಿಪರ ಬಾಣಸಿಗರು ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರವನ್ನು ಸೇವನೆ ಮಾಡ್ತಾರೆ. ಬ್ಯೂಸಿ ಲೈಫ್ ನಲ್ಲೂ ಸಮತೋಲಿತ ಆಹಾರ ಸೇವನೆ ನಿಯಮವನ್ನು ಅವರು ಬಿಟ್ಟಿಲ್ಲ. ರೊಟ್ಟಿ ಮತ್ತು ರಾಜ್ಮಾ ಅವರ ಊಟದ ಬಟ್ಟಲಿನಲ್ಲಿ ಸ್ಥಾನ ಪಡೆದಿದೆ.

61ನೇ ವಯಸ್ಸಿನಲ್ಲೂ ಯೋಗ, ಜಿಮ್‌ – ಫಿಟ್ನೆಸ್‌ ವಿಡಿಯೋ ಹಂಚಿಕೊಂಡ ನೀತಾ ಅಂಬಾನಿ

ಭೇಲ್ : ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಫಾಸ್ಟ್ ಫುಡ್ ಸೇವನೆಯಲ್ಲೂ ಹಿಂದೆ ಬಿದ್ದಿಲ್ಲ. ಮುಂಬೈನ ಜನಪ್ರಿಯ ಫಾಸ್ಟ್ ಫುಡ್ ಸ್ವಾತಿ ಸ್ನ್ಯಾಕ್ಸ್‌ನಿಂದ ಭೇಲ್ ಮತ್ತು ದಹಿ ಬಟಾಟಾ ಪುರಿಯಂತಹ ಬೀದಿ ಆಹಾರಗಳನ್ನು ಇವರು ತಿನ್ನುತ್ತಾರೆ. ಇವರು ಫಾಸ್ಟ್ ಫುಡ್ ಸೇವನೆ ಮಾಡಿದ ಕೆಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತದೆ. 

ಸಂದರ್ಶನವೊಂದರಲ್ಲಿ ನೀತಾ ಅಂಬಾನಿ, ಮುಖೇಶ್ ಅಂಬಾನಿಗಿರುವ ಸ್ಟ್ರೀಟ್ ಫುಡ್ ಪ್ರೀತಿಯನ್ನು ಹೇಳಿದ್ದರು. ಮುಖೇಶ್ ತಡರಾತ್ರಿ ಒಂದು ಕಪ್ ಕಾಫಿ ಕುಡಿಯೋಣ ಅಂತ ಕರೆಯುತ್ತಾರೆ. ನಾವು ಸಿ ಲೌಂಜ್‌ಗೆ ಹೋಗುತ್ತೇವೆ. ಕೆಲವೊಮ್ಮೆ ಭೇಲ್ ಅಥವಾ ದಹಿ ಬಟಾಟಾ ಪುರಿ ಆನಂದಿಸಲು ಸ್ವಾತಿ ಸ್ನ್ಯಾಕ್ಸ್‌ಗೆ ಹೋಗುತ್ತೇವೆ ಎಂದಿದ್ದರು.