ನೀತಾ ಅಂಬಾನಿ, ಮುಕೇಶ್ ಅಂಬಾನಿ ಕುಟುಂಬ ಪ್ರತಿ ದಿನ ಒಂದೇ ತಳಿ ಹಸುವಿನ ಹಾಲು ಬಳಕೆ ಮಾಡುತ್ತಿದೆ. ಈ ಹಸುಗಳನ್ನು ವಿಶೇಷ ಆರೈಕೆ ಹಾಗೂ ಮೇವು ನೀಡಲಾಗುತ್ತದೆ. ಅಂಬಾನಿ ಕುಟುಂಬಕ್ಕೆ ಹಾಲು ಸರಬರಾಜಾಗುತ್ತಿರುವುದು ಎಲ್ಲಿಂದ?

ಮುಂಬೈ (ಜು.28) ಮುಕೇಶ್ ಅಂಬಾನಿ ಕುಟುಂಬ ಆಹಾರ ಪದ್ಧತಿಯಲ್ಲಿ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸುತ್ತದೆ. ಉತ್ತಮ ಆರೋಗ್ಯ, ಸೌಂದರ್ಯದ ಬಗ್ಗೆ ನೀತಾ ಅಂಬಾನಿ ಸೇರಿದಂತೆ ಇಡೀ ಅಂಬಾನಿ ಕುಟುಂಬ ಮುತುರ್ಜಿ ವಹಿಸುತ್ತದೆ. ಇದೀಗ ಮುಕೇಶ್ ಅಂಬಾನಿ ಕುಟುಂಬ ಬಳಸುತ್ತಿರುವ ಹಸುವಿನ ಹಾಲಿನ ಕುರಿತು ವರದಿಗಳು ಬಹಿರಂಗವಾಗಿದೆ. ವಿಶೇಷ ಅಂದರೆ ಪ್ರತಿ ದಿನ ಮಕೇಶ್ ಅಂಬಾನಿ ಕುಟುಂಬ ಒಂದೇ ತಳಿ ಹಸುವಿನ ಹಾಲು ಬಳಸುತ್ತಿದೆ. ಈ ಹಾಲು ಪ್ರತಿ ದಿನ ಪುಣೆಯಿಂದ ಅಂಬಾನಿಯ ಆ್ಯಂಟಿಲಿಯಾ ಮನೆಗೆ ಪೂರೈಕೆಯಾಗುತ್ತಿದೆ ಅನ್ನೋ ವರದಿ ಬಹಿರಂಗವಾಗಿದೆ.

ಹೊಲ್‌ಸ್ಟೈನ್ ಫ್ರೈಸಿಯಾನ್ ತಳಿ ಹಸುವಿನ ಹಾಲು

ಹಾಲು ಬಹುತೇಕ ಎಲ್ಲಾ ಮನೆಯಲ್ಲಿ ಬಳಕೆಯಾಗುತ್ತದೆ. ಈಗ ಪ್ಯಾಕೆಟ್ ಹಾಲುಗಳು ಸುಲಭವಾಗಿ ಲಭ್ಯವಿದೆ. ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿದೆ. ಹಳ್ಳಿ ಹಳ್ಳಿಯಲ್ಲಿ ಡೈರಿಗಳಿವೆ. ಹೈನುಗಾರಿ ಮಾಡುವವರು ಹಾಲು ಕರೆದೆ ಡೈರಿಗೆ ನೀಡುತ್ತಾರೆ. ಡೈರಿಗಳು ಹಾಲಿನ ಘಟಕ್ಕೆ ಕಳುಹಿಸಿ ಅಲ್ಲಿ ಸಂಸ್ಕರಿಸಿ ಪ್ಯಾಕೆಟ್ ಮೂಲಕ ಪ್ರತಿ ದಿನ ಮನೆ ಮನೆಗೆ ತಲುಪುತ್ತೆದ. ಈ ಪ್ಯಾಕೆಟ್ ಹಾಲು ಹಲವು ತಳಿಗಳ ಮಿಶ್ರಣದ ಹಾಲಾಗಿರುತ್ತದೆ. ಆದರೆ ಅಂಬಾನಿ ಕುಟುಂಬ ಪ್ರತಿ ದಿನ ಬಳಕೆ ಮಾಡುವ ಹಾಲು ಹೊಲ್‌ಸ್ಟೈನ್ ಫ್ರೈಸಿಯಾನ್ ತಳಿ ಹಸುವಿನ ಹಾಲಾಗಿದೆ. ಹೊಲ್‌ಸ್ಟೈನ್ ಫ್ರೈಸಿಯಾನ್ ತಳಿ ಹಸು ಅತೀ ಹೆಚ್ಚು ಹಾಲು ಕೊಡುವ ಹಸು ಎಂದೇ ಜನಪ್ರಿಯವಾಗಿದೆ. ಈ ಹಾಲು ಅತೀ ಹೆಚ್ಚು ಪ್ರೊಟಿನ್, ಮ್ಯಾಕ್ರೋ ಹಾಗೂ ಮೈಕ್ರೋ ನ್ಯೂಟ್ರಿಶಿಯನ್ ಗುಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಸೂಚಿಸುತ್ತಾರೆ.

ಪುಣೆಯ ಭಾಗ್ಯಲಕ್ಷ್ಮಿ ಡೈರಿಯಿಂದ ಅಂಬಾನಿ ಕುಟುಂಬಕ್ಕೆ ಹಾಲು ಪೂರೈಕೆ

ಅಂಬಾನಿ ಕುಟುಂಬಕ್ಕೆ ಪ್ರತಿ ದಿನ ಹೊಲ್‌ಸ್ಟೈನ್ ಫ್ರೈಸಿಯಾನ್ ತಳಿ ಹಸುವಿನ ಹಾಲನ್ನು ಪುಣೆಯ ಭಾಗ್ಯಲಕ್ಷ್ಮಿ ಡೈರಿ ಪೂರೈಕೆ ಮಾಡುತ್ತಿದೆ ಎಂದು ವರದಿ ಹೇಳುತ್ತಿದೆ. ಮಾಧ್ಯಮಗಳ ವರದಿ ಪ್ರಕಾರ, ಪುಣೆಯ ಭಾಗ್ಯಲಕ್ಷ್ಮಿ ಡೈರಿಯಿಂದ ಅಂಬಾನಿ ಕುಟುಂಬಕ್ಕೆ ಹಾಲು ಪೂರೈಕೆ ಮಾಡಲಾಗುತ್ತಿದೆ. 35 ಎಕರೆ ಪ್ರದೇಶದಲ್ಲಿ ಈ ಡೈರಿ ಇದೆ. ಇಲ್ಲಿ 3000ಕ್ಕೂ ಹೆಚ್ಚು ಹಸುಗಳಿವೆ.

ಒಂದು ಲೀಟರ್ ಹಾಲಿನ ಬೆಲೆ ಎಷ್ಟು?

ಹೊಲ್‌ಸ್ಟೈನ್ ಫ್ರೈಸಿಯಾನ್ ತಳಿಯ ಹಾಲನ್ನು ಮಾತ್ರ ಅಂಬಾನಿ ಕುಟುಂಬ ಬಳಸುತ್ತಿದೆ. ಈ ತಳಿಯ ಒಂದು ಲೀಟರ್ ಹಾಲಿಗೆ 160 ರಿಂದ 180 ರೂಪಾಯಿ ಎಂದು ಹೇಳಲಾಗುತ್ತಿದೆ.

ಹಸುಗಳಿಗೆ ಆರ್‌ಒ ನೀರು, ಮಲಗಲು ಮ್ಯಾಟ್

ಈ ಹಸುಗಳಿಗೆ ಫಿಲ್ಟರ್ ಮಾಡಿದ ಆರ್‌ಒ ನೀರನ್ನು ಕೊಡಲಾಗುತ್ತದೆ. ಅತ್ಯುತ್ತಮ ಮೇವು ನೀಡಲಾಗುತ್ತದೆ. ಹಸುವಿಗೆ ಮಲಗಲು ಕೇರಳದಿಂದ ತಂದಿರುವ ರಬ್ಬರ್ ಮ್ಯಾಟ್ ನೀಡಲಾಗಿದೆ.