MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಎರಡು ಸೀರಿಯಲ್​ಗಳ ಆಗರ್ಭ ಶ್ರೀಮಂತ ನಾಯಕರು ರಾತ್ರೋರಾತ್ರಿ ಬೀದಿಪಾಲು: ಜಾತಕದಲ್ಲಿ ಇರುವುದೇನು?

ಎರಡು ಸೀರಿಯಲ್​ಗಳ ಆಗರ್ಭ ಶ್ರೀಮಂತ ನಾಯಕರು ರಾತ್ರೋರಾತ್ರಿ ಬೀದಿಪಾಲು: ಜಾತಕದಲ್ಲಿ ಇರುವುದೇನು?

ಜ್ಯೋತಿಷ ಶಾಸ್ತ್ರವು ಒಂದು ವಿಜ್ಞಾನವಾಗಿದ್ದು, ಆಗರ್ಭ ಶ್ರೀಮಂತರು ಹಠಾತ್ತನೆ ಬೀದಿಪಾಲಾಗಲು ಕಾರಣಗಳನ್ನು ವಿವರಿಸುತ್ತದೆ. ಸಾಡೇಸಾತಿ, ಜಾತಕದಲ್ಲಿ ಶನಿ, ಮಂಗಳ, ರಾಹು-ಕೇತುಗಳಂತಹ ಗ್ರಹಗಳ ಕೆಟ್ಟ ಸ್ಥಾನ  ಕಾನೂನು ಸಂಕಷ್ಟ, ಆರ್ಥಿಕ ನಷ್ಟ  ತರಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

2 Min read
Author : Suchethana D
Published : Apr 22 2026, 12:20 PM IST
Share this Photo Gallery
  • FB
  • TW
  • Linkdin
  • Whatsapp
16
ಜ್ಯೋತಿಷವೇ ವಿಜ್ಞಾನ
Image Credit : Getty

ಜ್ಯೋತಿಷವೇ ವಿಜ್ಞಾನ

ಜ್ಯೋತಿಷವನ್ನು ವಿಜ್ಞಾನ ಎಂದು ಕರೆಯುತ್ತಾರೆ. ಏಕೆಂದರೆ ಜ್ಯೋತಿಷ ಶಾಸ್ತ್ರಕ್ಕೂ, ವಿಜ್ಞಾನಕ್ಕೂ ಅಪಾರ ನಂಟಿದೆ. ಆದರೆ ಇಂದು ದುಡ್ಡಿನ ಆಸೆಗೆ ಬಿದ್ದು, ಬಹುತೇಕ ಮಂದಿ ಜ್ಯೋತಿಷಿಗಳಾಗಿ, ಇಲ್ಲದ ಅನಾಚಾರ ಮಾಡುತ್ತಿರುವ ಕಾರಣಕ್ಕೆ ಈ ವಿಜ್ಞಾನಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜ್ಯೋತಿಷ ಶಾಸ್ತ್ರವನ್ನೇ ನಂಬದ ಸ್ಥಿತಿ ಉಂಟಾಗಿದೆ. ಆದರೆ ಎಂದೋ ಆಗುವ ಗ್ರಹಣ, ಪ್ರಕೃತಿ ವಿಕೋಪ ಇವೆಲ್ಲವುಗಳ ಬಗ್ಗೆಯೂ ಇದೇ ಜ್ಯೋತಿಷ ಶಾಸ್ತ್ರವನ್ನು ಆಧರಿಸಿಯೇ ಸಹಸ್ರಾರು ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದರು ಎಂದರೆ ಇದರ ಮಹತ್ವ ತಿಳಿಯುತ್ತದೆ.

26
ಆಗರ್ಭ ಶ್ರೀಮಂತರು ರಾತ್ರೋರಾತ್ರಿ ಬೀದಿಪಾಲು
Image Credit : Gemini AI

ಆಗರ್ಭ ಶ್ರೀಮಂತರು ರಾತ್ರೋರಾತ್ರಿ ಬೀದಿಪಾಲು

ಇದೀಗ ಇಲ್ಲಿ ಹೇಳ್ತಿರೋದು, ಕೆಲವು ಆಗರ್ಭ ಶ್ರೀಮಂತರು ರಾತ್ರೋರಾತ್ರಿ ಬೀದಿಪಾಲಾಗುವುದನ್ನು, ಜೈಲು ಸೇರುವುದನ್ನು, ಎಲ್ಲವನ್ನೂ ಕಳೆದುಕೊಂಡು ಬಿಕಾರಿಯಂತೆ ಆಗುವುದನ್ನು ಹಲವು ಬಾರಿ ನೋಡುತ್ತಿರುತ್ತೇವೆ. ಇಂಥ ರಾಜಕಾರಣಿಗಳು, ಉದ್ಯಮಿಗಳ, ಸಿನಿಮಾ ತಾರೆಯರ ವಿಷಯ ಎಲ್ಲರಿಗೂ ತಿಳಿದದ್ದೇ. ಹಾಗಿದ್ದರೆ ಇದಕ್ಕೆ ಕಾರಣ ಏನು ಎನ್ನುವುದನ್ನು ಜ್ಯೋತಿಷದಲ್ಲಿ ವಿವರಿಸಲಾಗಿದೆ.

Related Articles

Related image1
Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​: ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ
Related image2
Karna serial: ಕರ್ಣ-ನಿಧಿ ಒಂದಾಗ್ತಾರಾ ಕೇಳಿದ್ರೆ ರೊಮಾನ್ಸ್​ ನಂಗೆ ಆಗಿಬರಲ್ಲ ಎನ್ನೋದಾ ನಟ Kiran Raj
36
ಸೀರಿಯಲ್​ ಉದಾಹರಣೆ
Image Credit : Instagram

ಸೀರಿಯಲ್​ ಉದಾಹರಣೆ

ಇದಕ್ಕೆ ಸೀರಿಯಲ್​ ಪ್ರೇಮಿಗಳಿಗೆ ಸೀರಿಯಲ್​ದ್ದೇ ಉದಾಹರಣೆ ಕೊಡುವುದಾದರೆ ಸದ್ಯ ಅಮೃತಧಾರೆ (Amruthadhaare Serial) ಸೀರಿಯಲ್​ನಲ್ಲಿ ವಿಲನ್​ ಶಕುಂತಲಾ ದೇವಿ ಬೀದಿಪಾಲಾಗಿದ್ದಾಳೆ. ರಾಣಿಯಾಗಿ ಮೆರೆದಿದ್ದ ಅವಳನ್ನು ಸ್ವಂತ ಮಗನೇ ಒದ್ದು ಹೊರಕ್ಕೆ ಹಾಕಿದ್ದಾನೆ. ಈಗ ಅವಳ ಸ್ಥಿತಿ ಭಿಕ್ಷುಕಿಯಂತಾಗಿದೆ. ಇನ್ನು ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್​ನಲ್ಲಿ ರಾಜಕಾರಣಿ ವೀರು ಕಥೆನೂ ಹಾಗೆಯೇ ಆಗಿದೆ. ಇಲ್ಲಿ ಅವನಿಗೆ ಈಗ ತನ್ನ ಅಕ್ಕ ವಿಜಯಾಂಬಿಕಾ ವಿಲನ್​ ಎನ್ನೋದು ತಿಳಿದಿದೆ. ಆದರೆ ಅದು ತಿಳಿಯುವಷ್ಟರಲ್ಲಿ ಅವಳು ಇಡೀ ಆಸ್ತಿಯ ಸಹಿಯನ್ನು ಹಾಕಿಸಿಕೊಂಡುಬಿಟ್ಟಿದ್ದಳು. ಅಕ್ಕನ ಮೇಲಿನ ವ್ಯಾಮೋಹದಿಂದ ಎಲ್ಲಾ ಪೇಪರ್​ಗಳಿಗೂ ಸಹಿ ಹಾಕಿ ಈಗ ಬೀದಿಗೆ ಬಂದಿದ್ದಾನೆ.

46
ರಿಯಲ್​ ಲೈಫ್​ನಲ್ಲಿ ಹೇಗೆ?
Image Credit : our own

ರಿಯಲ್​ ಲೈಫ್​ನಲ್ಲಿ ಹೇಗೆ?

ಇದು ಸೀರಿಯಲ್​ ವಿಷ್ಯವಾಯ್ತು. ಆದರೆ ರಿಯಲ್​ ಲೈಫ್​ನಲ್ಲಿ ಹೀಗೆ ಆಗಲು ಕಾರಣವೇನು ಎನ್ನುವುದನ್ನು ನೋಡುವುದಾದರೆ, ಸಾಡೇಸಾತಿ ಪ್ರಭಾವ ಇದಕ್ಕೆ ಕಾರಣ. ಏಳೂವರೆ ವರ್ಷ ಈ ಪ್ರಭಾವ ಇರುತ್ತದೆ. ಆದರೆ ಎರಡನೆಯ ಹಂತದಲ್ಲಿ ಅಂದರೆ ಮೊದಲ ಎರಡೂವರೆ ವರ್ಷಗಳ ಬಳಿಕ ಶನಿ ವಿಪರೀತ ತೊಂದರೆ ಕೊಡುತ್ತಾನೆ. ಮನುಷ್ಯನಿಗೆ ಜೀವನದ ನಿಜವಾದ ಅರ್ಥ ಏನು ಎನ್ನುವುದು ಇದೇ ಸಂದರ್ಭದಲ್ಲಿ ಕಲಿಸುತ್ತಾನೆ ಶನಿ. ಆ ಸಮಯದಲ್ಲಿಯೇ ಇದಾಗಲೇ ಸಾಕಷ್ಟು ರಾಜಕಾರಣಿಗಳು, ಸಿನಿಮಾ ತಾರೆಯರು ಜೈಲು ಸೇರಿದ್ದರೆ, ಉದ್ಯಮಿಗಳು ದೇಶಬಿಟ್ಟು ಹೋಗಿದ್ದಾರೆ.

56
ಜಾತಕದಲ್ಲಿ ಹೀಗಿದ್ದರೆ...
Image Credit : Asianet News

ಜಾತಕದಲ್ಲಿ ಹೀಗಿದ್ದರೆ...

ಇನ್ನು ಜಾತಕದ ವಿಷಯಕ್ಕೆ ಬರುವುದಾದರೆ ಗ್ರಹಗಳ ಸ್ಥಾನದಿಂದ ಇಂಥ ಭಯಾನಕ ದಿನಗಳು ಬರುತ್ತವೆ. ಶನಿ ಮತ್ತು ಮಂಗಳ ಗ್ರಹಗಳು ಪಾಪಗ್ರಹಳಾಗಿ ಮಾರ್ಪಟ್ಟರೆ ಅಂದರೆ ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಅಥವಾ ಪ್ರಬಲವಾಗಿದ್ದರೆ, ವ್ಯಕ್ತಿಯು ಕಾನೂನು ಸಂಕಷ್ಟ, ಬಂಧನ ಅಥವಾ ಜೀವನದಲ್ಲಿ ತೀವ್ರವಾದ ಅಡಚಣೆಗಳನ್ನು ಎದುರಿಸುತ್ತಾನೆ. ವ್ಯಯ ಸ್ಥಾನದಲ್ಲಿ ರವಿ ಅಂದರೆ 12ನೇ ಮನೆಗೆ ಬಂದಾಗ ಕೆಲಸಗಳು ಅರ್ಧಕ್ಕೆ ನಿಲ್ಲುವುದು, ಸ್ಥಿರತೆ ಇಲ್ಲದಿರುವುದು ಮತ್ತು ಆರ್ಥಿಕ ನಷ್ಟ ಜೊತೆಗೆ ಬೀದಿ ಪಾಲಾಗುವ ಪರಿಸ್ಥಿತಿ ಉಂಟಾಗಬಹುದು.

66
ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ಏನಾಗುತ್ತದೆ?
Image Credit : Asianet News

ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ಏನಾಗುತ್ತದೆ?

ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ದಾಂಪತ್ಯ ಜೀವನದಲ್ಲಿ ತೊಂದರೆ ಅಥವಾ ಸಂಗಾತಿಯ ಮರಣ ಸಂಭವಿಸಬಹುದು. ಗ್ರಹಗಳು ಸೂರ್ಯನಿಗೆ ಹತ್ತಿರವಾಗಿದ್ದಾಗ ಗ್ರಹಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ನಿಷ್ಕ್ರಿಯವಾಗುತ್ತವೆ. ಇದರಿಂದ ಆ ಗ್ರಹದ ಶುಭ ಫಲಗಳು ಸಿಗುವುದಿಲ್ಲ. ರಾಹು-ಕೇತುಗಳನ್ನು ನೆರಳು ಗ್ರಹಗಳು ಎನ್ನಲಾಗುತ್ತದೆ. ರಾಹು ದುರ್ಬಲನಾಗಿದ್ದರೆ ಮೆದುಳಿನ ತೊಂದರೆ, ಬುದ್ಧಿಭ್ರಮಣೆ, ಆರ್ಥಿಕ ನಷ್ಟ ಬರಬಹುದು. ಕೇತು ದುರ್ಬಲನಾಗಿದ್ದರೆ ಕಾಲುಗಳ ನೋವು, ನರಗಳ ದೌರ್ಬಲ್ಯ ಮತ್ತು ಹಠಾತ್ ರೋಗಗಳು ಬರಬಹುದು. ಶನಿ ದುರ್ಬಲವಾಗಿದ್ದರೆ ದೈಹಿಕ ದೌರ್ಬಲ್ಯ, ನೋವು, ಕೂದಲಿನ ಸಮಸ್ಯೆ ಮತ್ತು ಅಪಘಾತಗಳ ಭಯವಿರುತ್ತದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಜ್ಯೋತಿಷ್ಯ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು

Latest Videos
Recommended Stories
Recommended image1
ಮೇ ತಿಂಗಳಲ್ಲಿ ಮೇಷ ರಾಶಿ ಜೊತೆ ಈ 3 ರಾಶಿಗೆ ಅದೃಷ್ಟ, ಆರ್ಥಿಕ ಲಾಭ- ಬಡ್ತಿ
Recommended image2
ಶುಕ್ರನು ರಾಹುವಿನ ನಕ್ಷತ್ರದಲ್ಲಿ, ಮೇ ತಿಂಗಳಲ್ಲಿ ಸಿಂಹ ಜೊತೆ 4 ರಾಶಿಗೆ ಅದೃಷ್ಟ, ಶ್ರೀಮಂತಿಕೆ
Recommended image3
ಡಿಸೆಂಬರ್ ವರೆಗೆ 4 ರಾಶಿಗೆ ಅಪಾಯ, ಕೆಲಸ ಮತ್ತು ಪ್ರೀತಿಯಲ್ಲಿ ಸಂಘರ್ಷದ ಸಮಯ
Related Stories
Recommended image1
Anchor Anushree ಸ್ಮೈಲ್​ ಬಗ್ಗೆ ಭವಿಷ್ಯ ನುಡಿದಿದ್ರಂತೆ ಆ ಟೀಚರ್​: ಮಗಳನ್ನು ಹದ್ದುಬಸ್ತಲ್ಲಿ ಇಟ್ಕೊಳಿ ಅಂದಿದ್ರಂತೆ
Recommended image2
Karna serial: ಕರ್ಣ-ನಿಧಿ ಒಂದಾಗ್ತಾರಾ ಕೇಳಿದ್ರೆ ರೊಮಾನ್ಸ್​ ನಂಗೆ ಆಗಿಬರಲ್ಲ ಎನ್ನೋದಾ ನಟ Kiran Raj
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved