ಆರಂಭವಾಯ್ತು 3 ರಾಶಿಗಳಿಗೆ ಶುಕ್ರದೆಸೆ; ಶುಕ್ರ ಗ್ರಹದ ಅಸ್ತಮದಿಂದ ಅದೃಷ್ಟವೋ ಅದೃಷ್ಟ
Venus Combust Astrology: ಗ್ರಹಗಳ ಚಲನೆಯ ಮೇಲೆ ನಮ್ಮ ಜ್ಯೋತಿಷ್ಯ ನಿಂತಿದೆ ಎಂದು ಪಂಡಿತರು ಹೇಳುತ್ತಾರೆ. ಇತ್ತೀಚೆಗೆ ಶುಕ್ರ ಗ್ರಹದಲ್ಲಿ ಆದ ಪ್ರಮುಖ ಬದಲಾವಣೆ ಕೆಲವು ರಾಶಿಗಳ ಮೇಲೆ ಸ್ಪಷ್ಟ ಪ್ರಭಾವ ಬೀರಲಿದೆ. 3 ರಾಶಿಗಳಿಗೆ ಇದು ಅದೃಷ್ಟ ತರಲಿದೆ ಎನ್ನಲಾಗುತ್ತಿದೆ.

ಶುಕ್ರನ ಚಲನೆ
ವೇದ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಉದಯಿಸಿ ಅಸ್ತಮಿಸುತ್ತವೆ. ಗ್ರಹವು ಸೂರ್ಯನಿಗೆ ಹತ್ತಿರ ಬಂದಾಗ ಕಾಣಿಸದ ಸ್ಥಿತಿಯನ್ನೇ ಅಸ್ತಮ ಎನ್ನುತ್ತಾರೆ. ಶುಕ್ರನ ಈ ಸ್ಥಿತಿಯು ಪ್ರೀತಿ, ಸಂಪತ್ತು ಮತ್ತು ದಾಂಪತ್ಯದ ಮೇಲೆ ಪರಿಣಾಮ ಬೀರುತ್ತದೆ. ಶುಕ್ರನನ್ನು ಅದೃಷ್ಟದ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರನ ಚಲನೆ ರಾಶಿಚಕ್ರಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
ಶುಕ್ರನ ಅಸ್ತಮ
ಶುಕ್ರನು ಅಸ್ತಮಿಸಿದಾಗ ಕೆಲವು ರಾಶಿಗಳಿಗೆ ಸವಾಲುಗಳಿರಬಹುದು. ಆದರೆ, ಕೆಲವು ರಾಶಿಗಳಿಗೆ ಈ ಸಮಯ ಅದೃಷ್ಟ ತರಲಿದೆ. ಆರ್ಥಿಕ ಸ್ಥಿರತೆ, ಕುಟುಂಬದ ಸಂತೋಷ ಮತ್ತು ದಾಂಪತ್ಯದಲ್ಲಿ ಉತ್ತಮ ಬದಲಾವಣೆಗಳು ಕಾಣಿಸುತ್ತವೆ ಶುಕ್ರನ ದೆಸೆಯಿಂದಾಗಿ ಹಲವು ಆನಂದ ಕ್ಷಣಗಳನ್ನು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಶುಕ್ರ ಅಸ್ತಮದ ಸಮಯ ಅನುಕೂಲಕರ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ನೀವು ಮಾಡುವ ಕೆಲಸಗಳಲ್ಲಿನ ಆಸಕ್ತಿ ಹೆಚ್ಚಳವಾಗುತ್ತದೆ. ಇದರಿಂದ ಗುರಿ ಸಾಧನೆಗೆ ಗಟ್ಟಿ ಪ್ರಯತ್ನ ಮಾಡುವಿರಿ. ಉದ್ಯೋಗದಲ್ಲಿ ಮನ್ನಣೆ, ವ್ಯಾಪಾರದಲ್ಲಿ ಲಾಭವಾಗಲಿದೆ. ಕುಟುಂಬದಲ್ಲಿ ಸಂತೋಷವಿರುತ್ತದೆ. ಆರ್ಥಿಕವಾಗಿ ಸಬಲರಾಗುವತ್ತ ಮಹತ್ವದ ಹೆಜ್ಜೆಯನ್ನಿರಿಸುತ್ತೀರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಹಂತವು ತುಂಬಾ ಶುಭಕರ ಮತ್ತು ಮಂಗಳಕರವಾಗಿದೆ. ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಹೆಚ್ಚುತ್ತದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ. ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳು, ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಸುತ್ತಲಿನ ಜನರ ನಡುವೆ ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತೀರಿ.
ಇದನ್ನೂ ಓದಿ: Baba Vanga Prediction: 2026ರಿಂದ 5079 ರವರೆಗಿನ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ!
ಮಕರ ರಾಶಿ
ಮಕರ ರಾಶಿಯವರಿಗೆ ಶುಕ್ರ ಅಸ್ತಮ ಲಾಭದಾಯಕ. ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೂಡಿಕೆಗಳಿಂದ ಲಾಭ ಬರಬಹುದು. ಹಲವು ವರ್ಷಗಳ ಆರ್ಥಿಕ ಸಂಕಷ್ಟಗಳು ದೂರವಾಗಿ ನೆಮ್ಮದಿ ನೆಲೆಸುತ್ತದೆ. ಯಾವುದೇ ಹೊಸ ಉದ್ಯೋಗ ಅಥವಾ ಹೂಡಿಕೆಗೆ ಇದು ನಿಮಗೆ ಸಕಾಲವಾಗಲಿದೆ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?

