MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಫೋಟೋ ವೈರಲ್

ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು: ಬೆಂಗಳೂರು ಜೆಪಿ ನಗರದ ಫೋಟೋ ವೈರಲ್

ಬೆಂಗಳೂರಿನ ಜೆಪಿ ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಹಚ್ಚ ಹಸಿರಿನಿಂದ ಕೂಡಿದ್ದ ಪ್ರದೇಶವನ್ನು ಬೋಳು ಮಾಡಲಾಗಿದೆ. ಈ ಘಟನೆಯ ಡ್ರೋನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಅಭಿವೃದ್ಧಿಯೋ ಅಥವಾ ವಿನಾಶವೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

2 Min read
Author : Anusha Kb
Published : Feb 12 2026, 02:14 PM IST
Share this Photo Gallery
  • FB
  • TW
  • Linkdin
  • Whatsapp
17
ಬೆಂಗಳೂರು ಸೌಂದರ್ಯಕ್ಕೆ ಮಾರು ಹೋಗದವರಿಲ್ಲ..
Image Credit : Bengaluru Greater Authority

ಬೆಂಗಳೂರು ಸೌಂದರ್ಯಕ್ಕೆ ಮಾರು ಹೋಗದವರಿಲ್ಲ..

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಫೇಮಸ್ ಆಗಿರುವ ಬೆಂಗಳೂರು ತನ್ನ ನೈಸರ್ಗಿಕವಾಗಿ ಏರ್ ಕಂಡೀಷನರ್ ರೀತಿ ಇರುವ ತಾಪಮಾನಕ್ಕೂ ಫೇಮಸ್, ಹೀಗಾಗಿಯೇ ಬೆಂಗಳೂರಿಗೆ ಒಮ್ಮೆ ಬಂದು ನೆಲೆಸಿದವರು ಇಲ್ಲಿನ ಸೌಂದರ್ಯಕ್ಕೆ ಮರಳಾಗಿ ಇಲ್ಲಿಯೇ ನೆಲೆಸುತ್ತಾರೆ. ಬೆಂಗಳೂರಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಿದವರು ಲಕ್ಷಾಂತರ ಮಂದಿ ಇದ್ದಾರೆ.

27
ತಾಪಮಾನದಲ್ಲಿ ನಿರಂತರ ಏರಿಕೆ
Image Credit : ‍‍X

ತಾಪಮಾನದಲ್ಲಿ ನಿರಂತರ ಏರಿಕೆ

ಆದರೆ ಬೇಸಿಗೆಯಲ್ಲೂ ಕೂಲ್ ಕೂಲ್ ಎನಿಸುತ್ತಿದ್ದ ಬೆಂಗಳೂರಿನ ತಾಪಮಾನದಲ್ಲೂ ಈಗ ಸಾಕಷ್ಟು ಬದಲಾವಣೆಯಾಗಿದೆ. ಜಾಗತಿಕ ತಾಪಮಾನವೂ ದಿನೇ ದಿನೇ ಏರಿಕೆಯಾಗುತ್ತಿದ್ದು, ಬೆಂಗಳೂರಿನ ತಾಪಮಾನವೂ ಏರುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಅಭಿವೃದ್ಧಿ, ಹೌದು ಅಭಿವೃದ್ಧಿಯ ನೆಪದಲ್ಲಿ ಸೊಗಸಾದ ನಗರದ ನಡುವೆ ಕಾಂಕ್ರೀಟ್ ಕಾಡಿನ ಮಧ್ಯೆ ಇರುವ ಬೃಹತ್ ಮರಗಳನ್ನು ನೆಲಸಮ ಮಾಡುತ್ತಿರುವುದರಿಂದ ತಾಪಮಾನದಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದೆ.

Related Articles

Related image1
ಬೆಂಗಳೂರು ಮೆಟ್ರೋ ಬಾಗಿಲಲ್ಲೇ 10 ಹೊಸ ಬಿಎಂಟಿಸಿ ಬಸ್ ನಿಲ್ದಾಣ; ವಿಮಾನ ನಿಲ್ದಾಣವೂ ಮತ್ತಷ್ಟು ಹತ್ತಿರ!
Related image2
₹27.72 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ
37
ಬೃಹತ್ ಮರಗಳ ನೆಲಸಮ
Image Credit : X

ಬೃಹತ್ ಮರಗಳ ನೆಲಸಮ

ಕೇವಲ ಒಂದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾಂಕ್ರೀಟ್ ಕಟ್ಟಡಗಳ ನಡುವೆ ಬೃಹತ್ ಆಗಿ ಬೆಳೆದು ನಿಂತು ತಂಪು ನೀಡುತ್ತಿದ್ದ ಬೃಹತ್ ಮರಗಳನ್ನು ನೆಲಸಮ ಮಾಡಲಾಗಿದೆ. ಹೌದು ಬೆಂಗಳೂರಿನ ಜೆಪಿ ನಗರ ಪ್ರದೇಶದ ಒಂದು ತಿಂಗಳ ಹಿಂದಿನ ಹಾಗೂ ಈಗಿನ ಡ್ರೋನ್ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿವೃದ್ಧಿಯ ನೆಪದಲ್ಲಿ ನಗರದ ನಡುವೆ ಇರುವ ನಾಲ್ಕು ಮರಗಳನ್ನು ಕಡಿಯುತ್ತಿರುವುದಕ್ಕೆ ಜನ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

47
ವೈರಲ್ ಆಯ್ತು ಮೊದಲ ಹಾಗೂ ನಂತರದ ಫೋಟೋ
Image Credit : twitter

ವೈರಲ್ ಆಯ್ತು ಮೊದಲ ಹಾಗೂ ನಂತರದ ಫೋಟೋ

anonymous (blr) @UsernaRandom ಎಂಬ ಎಕ್ಸ್ ಖಾತೆಯಿಂದ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಕಾಣುವಂತೆ ಜನವರಿ 6ರಂದು ಇದ್ದ ಸೊಗಸಾದ ದಟ್ಟವಾಗಿ ಬೆಳೆದಿದ್ದ ಮರಗಿಡಗಳು ಫೆಬ್ರವರಿ 11ರ ವೇಳೆಗೆಲ್ಲಾ ನೆಲಸಮವಾಗಿದ್ದು, ಬೋಳು ನೆಲ ಕಾಣುತ್ತಿದೆ.

57
ಜೆಪಿ ನಗರ 4ನೇ ಹಂತದಲ್ಲಿ ಘಟನೆ
Image Credit : twitter

ಜೆಪಿ ನಗರ 4ನೇ ಹಂತದಲ್ಲಿ ಘಟನೆ

ಹೃದಯ ಒಡೆಯುತ್ತಿದೆ. ಕೇವಲ ಒಂದು ತಿಂಗಳೊಳಗೆ, ಮರಗಳಿಂದ ತುಂಬಿದ ಹಚ್ಚ ಹಸಿರಿನ ಪ್ರದೇಶವು ಬುಡಕ್ಕೆ ಇಳಿದಿದೆ, ಮತ್ತು ನಾವೆಲ್ಲರೂ ಅದನ್ನು ನೋಡಿದ್ದೇವೆ. ಆದರೆ ಯಾವುದೇ ಆಕ್ರೋಶವಿಲ್ಲ. ಯಾವುದೇ ಹೊಣೆಗಾರಿಕೆ ಇಲ್ಲ. ಕೇವಲ ಮೌನ. ಇದು ಅಭಿವೃದ್ಧಿ ಅಲ್ಲ. ಇದು ವಿನಾಶ ಎಂದು ಅವರು ಫೋಟೋ ಹಂಚಿಕೊಂಡು ಬರೆದಿದ್ದಾರೆ. ಇದು ಜೆಪಿ ನಗರ 4ನೇ ಹಂತ, ಕಲ್ಯಾಣಿ ವಿಸ್ತಾ 2 ಬಳಿ ನಡೆದ ಘಟನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ

67
ಮರಗಳ ನಾಶಕ್ಕೆ ಬೇಸರ
Image Credit : twitter

ಮರಗಳ ನಾಶಕ್ಕೆ ಬೇಸರ

ಈ ಫೋಟೊಗಳು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಜನ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದ ಏಕೈಕ ಹಸಿರು ಭಾಗವನ್ನು ಒಂದೇ ಹೊಡೆತದಲ್ಲಿ ಕತ್ತರಿಸಲಾಗಿದೆ. ಈ ಪ್ರದೇಶಕ್ಕೆ ಸಮೀಪದಲ್ಲೇ ಪರಿಸರ ನಿರ್ವಹಣೆ ಮತ್ತು ನೀತಿ ನಿರ್ಮಾಣ ಸೇರಿದಂತೆ ಎಲ್ಲಾ ಪ್ರಮುಖ ಕಚೇರಿಗಳು ಕೇವಲ 100 ಮೀಟರ್ ದೂರದಲ್ಲಿದೆ. ಆದರೆ ಯಾರೊಬ್ಬರೂ ಇದನ್ನು ಗಮನಿಸಿಲ್ಲ. ಇದು ಯಾವುದೇ ಕಾರಣಕ್ಕೂ ಖಾಸಗಿ ಭೂಮಿಯಂತೆ ಕಾಣುತ್ತಿಲ್ಲ... ಸ್ಥಳೀಯರು ಸಹ ಇದನ್ನೇ ದೃಢಪಡಿಸುತ್ತಾರೆ. ಆದರೂ, ಅದು ಖಾಸಗಿ ಭೂಮಿಯಾಗಿದ್ದರೂ ಸಹ, ಒಂದು ವಾರದೊಳಗೆ ಇಷ್ಟೊಂದು ಮರಗಳನ್ನು ಕಡಿಯಲು ಅವಕಾಶವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು

77
ಇದು ಖಾಸಗಿ ಭೂಮಿ ಎಂದ ಬಳಕೆದಾರ
Image Credit : twitter

ಇದು ಖಾಸಗಿ ಭೂಮಿ ಎಂದ ಬಳಕೆದಾರ

ಆದರೆ ಈ ಪೋಸ್ಟ್‌ಗೆ ಒಬ್ಬರು ಪ್ರತಿಕ್ರಿಯಿಸಿದ್ದು, ಅದು ಪಕ್ಕದಲ್ಲಿರುವ ಮಿನಿ ಫಾರೆಸ್ಟ್‌ಗೆ ಹೊಂದಿಕೊಂಡಿರುವ ಅವನ ಖಾಸಗಿ ಭೂಮಿ, ಅವನು ಅದನ್ನು ಅಭಿವೃದ್ಧಿಪಡಿಸಲು ಬಯಸಬಹುದು. ಇಲ್ಲಿ ಏನು ತಪ್ಪಾಗಿದೆ? ನಮಗೆ ಎಲ್ಲದಕ್ಕೂ ಆಕ್ರೋಶ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ. ಭಾರತೀಯರಿಗೆ ಖಾಸಗಿ ಆಸ್ತಿ ಮತ್ತು ಭೂಮಾಲೀಕರ ಹಕ್ಕುಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹೇಳಿದ್ದಕ್ಕಿಂತ ಜಾಸ್ತಿ ಕೂದಲು ಕತ್ತರಿಸಿದ ಸಲೂನ್ :ಕೋರ್ಟ್ ಮೆಟ್ಟಿಲೇರಿ 25 ಲಕ್ಷ ಪರಿಹಾರ ಪಡೆದ ಯುವತಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಬೆಂಗಳೂರು
ವೈರಲ್ ಸುದ್ದಿ
ಅರಣ್ಯ

Latest Videos
Recommended Stories
Recommended image1
ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ 'ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ' ಪೊಲೀಸರು!
Recommended image2
ರಾಜ್ಯಕ್ಕೆ ಬಿಗ್ ಶಾಕ್ ಕೊಟ್ಟ ಕೇಂದ್ರ, ಡಬ್ಬಲ್ ಡೆಕ್ಕರ್ ಫ್ಲೈಓವರ್, ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಬ್ರೇಕ್!
Recommended image3
IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ಆಯೋಜನೆ ಬಗ್ಗೆ ಹೈವೋಲ್ಟೇಜ್ ಸಭೆ! RCB ಫ್ಯಾನ್ಸ್‌ಗೆ ಶುಭ ಸುದ್ದಿನಾ?
Related Stories
Recommended image1
ಬೆಂಗಳೂರು ಮೆಟ್ರೋ ಬಾಗಿಲಲ್ಲೇ 10 ಹೊಸ ಬಿಎಂಟಿಸಿ ಬಸ್ ನಿಲ್ದಾಣ; ವಿಮಾನ ನಿಲ್ದಾಣವೂ ಮತ್ತಷ್ಟು ಹತ್ತಿರ!
Recommended image2
₹27.72 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved