8ನೇ ವೇತನ ಆಯೋಗ: ಸಂಬಳದ ಬಗ್ಗೆ ದೊಡ್ಡ ಅನೌನ್ಸ್‌ಮೆಂಟ್! ಲೆಕ್ಕಾಚಾರ ತಿಳ್ಕೊಳ್ಳಿ..
ಸರ್ಕಾರ 2026ರಿಂದ ಜಾರಿಗೆ ಬರುವ 8ನೇ ವೇತನ ಆಯೋಗವನ್ನು ಘೋಷಿಸಿದ್ದು, 45 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಹೊಸ ವೇತನ ರಚನೆಯಲ್ಲಿ ಮೂಲ ವೇತನ, ಇತರ ಭತ್ಯೆಗಳು ಮತ್ತು ಕಾರ್ಯಕ್ಷಮತೆ ವೇತನ 40,000 ರೂಪಾಯಿಗಳನ್ನು ಮೀರುವ ಸಾಧ್ಯತೆಯಿದೆ.

ಐದನೇ ವೇತನ ಆಯೋಗವನ್ನು 1994ರ ಏಪ್ರಿಲ್‌ನಲ್ಲಿ ಅನೌನ್ಸ್ ಮಾಡಿದ್ದು, ಜೂನ್‌ನಲ್ಲಿ ಶುರುವಾಗಿತ್ತು. ಈಗ ಅದಕ್ಕೊಂದು ಸರಿಯಾದ ರೂಪ ಬಂದಿದೆ.
ಜನವರಿ 17ಕ್ಕೆ ಎಂಟನೇ ವೇತನ ಆಯೋಗ ಅನೌನ್ಸ್ ಆಗಿದ್ದು, 45 ಲಕ್ಷ ನೌಕರರಿಗೆ ಅನುಕೂಲ ಆಗುತ್ತೆ. ಇದರಿಂದ ಅವರೆಲ್ಲಾ ಖುಷಿಯಾಗಿದ್ದಾರೆ.
2026 ಜನವರಿ 1ರಿಂದ ಜಾರಿಗೆ ಬರುವ 8ನೇ ವೇತನ ಆಯೋಗವನ್ನು ಸರ್ಕಾರ ಅನೌನ್ಸ್ ಮಾಡಿದೆ. ಅದ್ದರಿಂದ ಸರ್ಕಾರಿ ನೌಕರರ ಮುಖದಲ್ಲಿ ಮೂಡಿದೆ.
ಆರನೇ ವೇತನ ಆಯೋಗವನ್ನು ಜುಲೈ 2006ರಲ್ಲಿ ಅನೌನ್ಸ್ ಮಾಡಿದ್ದು, ಅಕ್ಟೋಬರ್‌ನಲ್ಲಿ ಫಾರ್ಮಲ್ ಆಗಿ ಶುರುವಾಗಿತ್ತು. ಅದೀಗ ಫೈನಲ್ ಹಂತ ತಲುಪಿ ಅನೌನ್ಸ್ ಆಗಿದೆ.
ಏಳನೇ ವೇತನ ಆಯೋಗವನ್ನು 2013 ಸೆಪ್ಟೆಂಬರ್ 25ಕ್ಕೆ ಒಪ್ಪಿಗೆ ನೀಡಿದ್ದು, 2014 ಫೆಬ್ರವರಿ 28ಕ್ಕೆ ಶುರುವಾಗಿತ್ತು. ಇದೀಗ 8ನೇ ವೇತ ಅಯೋಗದ ಘೊಷಣೆ ಆಗಿದೆ.
8ನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಹೇಗೆ ಲೆಕ್ಕ ಹಾಕ್ತಾರೆ? ಇಲ್ಲಿ ತಿಳ್ಕೊಳ್ಳಿ. ಈ ನ್ಯೂಸ್ ನೋಡಿದರೆ ನಿಮಗೆ ಸರಿಯಾದ ಒಂದು ಮಾಹಿತಿ ಸಿಗುತ್ತೆ.
ಮೂಲ ಕನಿಷ್ಠ ಭತ್ಯೆ, ಇತರೆ ಭತ್ಯೆಗಳು ಮತ್ತು ಕೆಲಸದ ಆಧಾರದ ಮೇಲಿನ ಸಂಬಳ 40,000 ರೂಪಾಯಿ ದಾಟೋ ಸಾಧ್ಯತೆ ಇದೆ. ಒಟ್ಟಾರೆಯಾಗಿ ಸರ್ಕಾರಕ್ಕೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ.
ಹೊಸ ಬೇಸಿಕ್ ಸ್ಯಾಲರಿ 2.28 ಫಿಟ್ಮೆಂಟ್ ಫ್ಯಾಕ್ಟರ್ ಆಧಾರದ ಮೇಲೆ 91,200 ರೂಪಾಯಿಗೆ ಏರಿಕೆ ಆಗುತ್ತೆ ಅಂತ ಎಕ್ಸ್ಪರ್ಟ್ಸ್ ಹೇಳ್ತಾರೆ.
ಡಿಎ ಹೊಸ ಬೇಸಿಕ್ ಸ್ಯಾಲರಿಯ 70% ಆದ್ರೆ, ಅದು 63,840 ರೂಪಾಯಿ ಆಗುತ್ತೆ. 24% ರೇಟ್‌ನಲ್ಲಿ HRA 21,888 ರೂಪಾಯಿ ಆಗುತ್ತೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.