Business Idea: ನಿಮ್ಮ ಬಳಿ ಖಾಲಿ ಜಾಗ ಇದೆಯಾ? ಕಡಿಮೆ ಜಾಗದಲ್ಲಿ ಲಕ್ಷ ಲಕ್ಷ ಗಳಿಸಬಹುದು!
ಇತ್ತೀಚೆಗೆ ಯುವ ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ತರುವ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ. ಅಂತಹ ಒಂದು ಬೆಳೆಯೇ ಕ್ಯಾರೆಟ್. ಇದರ ಕೃಷಿ ಬಗ್ಗೆ ತಿಳಿಯೋಣ.

ಕೃಷಿಯಲ್ಲಿ ಹೊಸ ಹೊಸ ಪ್ರಯೋಗ
ಕ್ಯಾರೆಟ್ ಕೃಷಿಗೆ ಆಳವಾದ, ಮೃದುವಾದ, ನೀರು ನಿಲ್ಲದ ಮಣ್ಣು ಬೇಕು. ಮರಳು ಮಿಶ್ರಿತ ಗೋಡು ಮಣ್ಣು (sandy loam) ಇದಕ್ಕೆ ಬಹಳ ಸೂಕ್ತ. ಉತ್ತಮ ಇಳುವರಿಗಾಗಿ ಮಣ್ಣಿನ pH ಮೌಲ್ಯ 5.5 ರಿಂದ 6.5ರ ನಡುವೆ ಇರಬೇಕು.
ಇನ್ನು ಹವಾಮಾನದ ವಿಚಾರಕ್ಕೆ ಬಂದರೆ, ತಂಪಾದ ವಾತಾವರಣ ಈ ಬೆಳೆಗೆ ಚೆನ್ನಾಗಿ ಹೊಂದುತ್ತದೆ. 16°C ನಿಂದ 20°C ನಡುವಿನ ತಾಪಮಾನವಿದ್ದರೆ ಕ್ಯಾರೆಟ್ಗೆ ಉತ್ತಮ ಬಣ್ಣ ಮತ್ತು ಗುಣಮಟ್ಟ ಬರುತ್ತದೆ. ಭಾರತದಲ್ಲಿ ಸೆಪ್ಟೆಂಬರ್ನಿಂದ ಕೃಷಿ ಆರಂಭಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಕ್ಯಾರೆಟ್ ಬೆಳೆಯುವ ವಿಧಾನ
ಕ್ಯಾರೆಟ್ ಅನ್ನು ಬೀಜಗಳ ಮೂಲಕವೇ ಬೆಳೆಸಲಾಗುತ್ತದೆ. ಒಂದು ಹೆಕ್ಟೇರ್ಗೆ ಸುಮಾರು 5 ರಿಂದ 6 ಕಿಲೋ ಬೀಜಗಳು ಬೇಕಾಗುತ್ತವೆ. ಮೊದಲು, ಭೂಮಿಯನ್ನು 20-30 ಸೆಂ.ಮೀ ಆಳದವರೆಗೆ ಉಳುಮೆ ಮಾಡಬೇಕು. ನಂತರ ಭೂಮಿಯನ್ನು ಸಮತಟ್ಟುಗೊಳಿಸಿ ಬಿತ್ತನೆಗೆ ಸಿದ್ಧಪಡಿಸಬೇಕು.
ಬೀಜಗಳನ್ನು ಮರಳು ಅಥವಾ ಬೂದಿಯೊಂದಿಗೆ ಬೆರೆಸಿ ಬಿತ್ತಿದರೆ, ಅವು ಸಮವಾಗಿ ಬೀಳುತ್ತವೆ. ಸಾಲುಗಳ ನಡುವೆ 30-45 ಸೆಂ.ಮೀ ಮತ್ತು ಗಿಡಗಳ ನಡುವೆ 7-10 ಸೆಂ.ಮೀ ಅಂತರವಿರಬೇಕು. ಬೀಜ ಬಿತ್ತಿದ ನಂತರ ಸ್ವಲ್ಪ ನೀರು ಹಾಯಿಸಬೇಕು. ಸಾಮಾನ್ಯವಾಗಿ 10-15 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ.
ಎಷ್ಟು ಗೊಬ್ಬರ ಬೇಕಾಗುತ್ತೆ !
ಸರಿಯಾದ ಪ್ರಮಾಣದಲ್ಲಿ ಗೊಬ್ಬರ ಹಾಕುವುದು ಬಹಳ ಮುಖ್ಯ. ಪ್ರತಿ ಎಕರೆಗೆ 12 ಟನ್ಗಳಷ್ಟು ಕೊಟ್ಟಿಗೆ ಗೊಬ್ಬರ (FYM) ಹಾಕಬೇಕು. ಸಾರಜನಕ (N), ರಂಜಕ (P), ಮತ್ತು ಪೊಟ್ಯಾಶ್ (K) ಅನ್ನು ಸರಿಯಾದ ಪ್ರಮಾಣದಲ್ಲಿ ನೀಡಬೇಕು. ಬೇರಿನ ಗುಣಮಟ್ಟಕ್ಕೆ ಪೊಟ್ಯಾಶ್ ಹೆಚ್ಚು ಬೇಕಾಗುತ್ತದೆ.
ಇನ್ನು ನೀರಿನ ವಿಷಯಕ್ಕೆ ಬಂದರೆ, ಬೇಸಿಗೆಯಲ್ಲಿ 4-5 ದಿನಗಳಿಗೊಮ್ಮೆ ಮತ್ತು ಚಳಿಗಾಲದಲ್ಲಿ 10-15 ದಿನಗಳಿಗೊಮ್ಮೆ ನೀರು ಕೊಟ್ಟರೆ ಸಾಕು. ನೀರು ಹೆಚ್ಚಾದರೆ ಕ್ಯಾರೆಟ್ಗಳು ಚಿಕ್ಕದಾಗುತ್ತವೆ ಮತ್ತು ಬಣ್ಣ ಕಳೆದುಕೊಳ್ಳುತ್ತವೆ. ಆದ್ದರಿಂದ ಮಿತವಾಗಿ ನೀರುಣಿಸಬೇಕು.
ಬೆಳೆ ಕಟಾವು ಹೇಗೆ?
ಎಷ್ಟು ಖರ್ಷು? ಲಾಭ ಎಷ್ಟು ಸಿಗುತ್ತೆ?
ಒಂದು ಎಕರೆಗೆ ಬೀಜಗಳಿಗೆ ಸುಮಾರು ₹2,000 ದಿಂದ ₹4,000 ಖರ್ಚಾಗುತ್ತದೆ. ಗೊಬ್ಬರಕ್ಕೆ ₹8,000 ದಿಂದ ₹12,000 ಆಗಬಹುದು. ಕೂಲಿ ವೆಚ್ಚ ₹10,000 ದಿಂದ ₹15,000 ತಗುಲುತ್ತದೆ. ಇತರೆ ಖರ್ಚುಗಳೆಲ್ಲ ಸೇರಿ ಸುಮಾರು ₹5,000 ಆಗುತ್ತದೆ. ಹೀಗೆ ನೋಡಿದರೆ, ಒಂದು ಎಕರೆಯಲ್ಲಿ ಕ್ಯಾರೆಟ್ ಬೆಳೆಯಲು ಒಟ್ಟು ₹25,000 ದಿಂದ ₹40,000 ಹೂಡಿಕೆ ಬೇಕಾಗುತ್ತದೆ.
ಲಾಭದ ವಿಷಯಕ್ಕೆ ಬಂದರೆ, ಒಂದು ಎಕರೆಗೆ 8 ರಿಂದ 12 ಟನ್ಗಳವರೆಗೆ ಇಳುವರಿ ಬರುತ್ತದೆ. ಪ್ರಸ್ತುತ ಕೆಜಿ ಕ್ಯಾರೆಟ್ಗೆ ₹15 ರಿಂದ ₹30 ಬೆಲೆ ಇದೆ. ಈ ಲೆಕ್ಕಾಚಾರದಲ್ಲಿ, ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ₹3 ಲಕ್ಷದವರೆಗೆ ಆದಾಯ ಗಳಿಸಬಹುದು. ಮಾರುಕಟ್ಟೆ ದರವನ್ನು ಅವಲಂಬಿಸಿ, 3 ತಿಂಗಳಿಗೆ ಸುಮಾರು ₹2 ಲಕ್ಷದವರೆಗೆ ಲಾಭ ಗಳಿಸಲು ಸಾಧ್ಯ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

