Business Idea: ನೋಡೋಕೆ ಸಣ್ಣ ಬ್ಯುಸಿನೆಸ್, ಆದ್ರೆ ಲಾಭ ಮಾತ್ರ ಲಕ್ಷಗಳಲ್ಲಿ, ನೀವು ಟ್ರೈ ಮಾಡ್ತೀರಾ?
ಕಡಿಮೆ ಬಂಡವಾಳದಲ್ಲಿ ವ್ಯವಹಾರವನ್ನು ಆರಂಭಿಸಬಹುದು. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಯಂತ್ರದೊಂದಿಗೆ, ಗಂಟೆಗೆ ಸಾವಿರಾರು ಪುರಿಗಳನ್ನು ತಯಾರಿಸಿ ಅಧಿಕ ಲಾಭ ಗಳಿಸಬಹುದು. ಈ ವ್ಯವಹಾರಕ್ಕೆ ಬೇಕಾದ ಒಟ್ಟು ಪ್ರಾಜೆಕ್ಟ್ ವೆಚ್ಚ ಮತ್ತು ಪರವಾನಗಿಗಳ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.

ವ್ಯವಹಾರ ಸಣ್ಣದಾದ್ರೂ ಲಾಭದ ಪ್ರಮಾಣ ಮಾತ್ರ ಅತ್ಯಧಿಕ
ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡುವ ಉದ್ಯೋಗಿಗಳು ಸಣ್ಣದಾದ ಸ್ವಂತ ವ್ಯಾಪಾರ ಆರಂಭಿಸುವ ಕನಸು ಕಾಣುತ್ತಿರುತ್ತಾರೆ. ಇಂದು ನಾವು ಹೇಳುತ್ತಿರುವ ವ್ಯವಹಾರವನ್ನು ಕಡಿಮೆ ಬಂಡವಾಳದಿಂದ ಆರಂಭಿಸಬಹುದು. ವ್ಯವಹಾರ ಸಣ್ಣದಾದ್ರೂ ಲಾಭದ ಪ್ರಮಾಣ ಮಾತ್ರ ಅತ್ಯಧಿಕವಾಗಿರುತ್ತದೆ.
ಪಾನಿಪುರಿ
ಭಾರತದ ಜನಸಂಖ್ಯೆಯ ಸುಮಾರು ಶೇ. 30ರಷ್ಟು ಜನರು ಪಾನಿಪುರಿ ತಿನ್ನುತ್ತಾರೆ. ಹೈಸ್ಪೀಡ್ ಜೀವನಶೈಲಿಯನ್ನು ಹೊಂದಿರುವ ಇಂದಿನ ಜನರು ಫಾಸ್ಟ್‌ಫುಡ್‌ಗಳಿಗೆ ಅಡಿಕ್ಟ್ ಆಗಿರುತ್ತಾರೆ. ಇನ್ನು ತುಂಬಾ ಜನರು ರೆಡಿ ಟು ಈಟ್ ಫುಡ್ ಮೊರೆ ಹೋಗುತ್ತಾರೆ. ಹಾಗಾಗಿ ಪಾನಿಪುರಿ ತಯಾರಿಸುವ ವ್ಯವಹಾರ ನಿಮಗೆ ಹೆಚ್ಚು ಲಾಭವನ್ನು ನೀಡುತ್ತದೆ. ಪಾನಿಪುರಿ ವ್ಯವಹಾರ ಆರಂಭಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಪಾನಿಪುರಿ ವ್ಯಹಾರ
ಮೊದಲು ಪುರಿ ತಯಾರಿಸುವ ಆಟೋಮ್ಯಾಟಿಕ್ ಯೂನಿಟ್ ಮಷೀನ್ ಖರೀದಿಸಬೇಕಾಗುತ್ತದೆ. ಈ ಮಷೀನ್ ಗಂಟೆಗೆ 3500-4000 ಪುರಿ ಮಾಡುತ್ತದೆ. ಡೋ ಮಿಕ್ಸರ್ (₹30,000) ಮತ್ತು ಮುಖ್ಯ ಮಷೀನ್ (₹55,000) ಸೇರಿ ಒಟ್ಟು ₹85,000 ಆಗುತ್ತದೆ. ತೆರಿಗೆ, ಶಿಫ್ಟಿಂಗ್, ಇನ್‌ಸ್ಟಾಲೇಷನ್ ಸೇರಿದಂತೆ 1 ಲಕ್ಷ ರೂಪಾಯಿಯಲ್ಲಿ ಈ ಮಷೀನ್ ನಿಮಗೆ ಲಭ್ಯವಾಗುತ್ತದೆ.
ಇತರೆ ಖರ್ಚು
ಕಚ್ಚಾ ಸಾಮಗ್ರಿಗಳ ಖರ್ಚು ಕೆಜಿಗೆ 25-30 ರೂ. ಇರುತ್ತದೆ. ಪುರಿ ತಯಾರಿಸಲು ಮುಖ್ಯ ಪದಾರ್ಥಗಳು ಮೈದಾ, ನೀರು, ಉಪ್ಪು ಬೇಕಾಗುತ್ತದೆ. ಮೈದಾ ಅಥವಾ ರವೆ ಮತ್ತು ನೀರನ್ನು ಸರಿಯಾದ ಪ್ರಮಾಣದಲ್ಲಿ ಮಿಕ್ಸರ್‌ನಲ್ಲಿ ಹಾಕಿ. ಹಿಟ್ಟು ಸಿದ್ಧವಾದ ಮೇಲೆ ಮಷೀನ್‌ಗೆ ಹಾಕಿದ್ರೆ ಪುರಿ ಸಿದ್ಧವಾಗುತ್ತದೆ.
ಇದನ್ನೂ ಓದಿ: ಸ್ವಂತ ಮನೆ ಖರೀದಿ ಅಥವಾ ಬಾಡಿಗೆ ಕಟ್ಟೋದು; ಯಾವುದು ಒಳ್ಳೇದು ಅಂತ ಹೇಳಿದ ಹಣಕಾಸು ತಜ್ಞರು
ಒಟ್ಟು ಪ್ರಾಜೆಕ್ಟ್ ವೆಚ್ಚ ಎಷ್ಟ?
ನೀವು ಮಾರಾಟ ಮಾಡುವ ಉತ್ಪನ್ನಕ್ಕೆ FSSAI ಪರವಾನಗಿ ಹೊಂದಿದ್ದರೆ ಸುಲಭವಾಗಿ ಮಾರಾಟವಾಗುತ್ತದೆ. ಹಾಗೆಯ ಜಿಎಸ್‌ಟಿ ನೋಂದಣಿ, ಫೈರ್ & ಪೊಲ್ಯೂಷನ್ NOC, ಟ್ರೇಡ್‌ಮಾರ್ಕ್ ಬೇಕು.
500 ಚದರ ಅಡಿ ಜಾಗ (ಬಾಡಿಗೆ ₹10,000) ಮತ್ತು ಕೆಲಸ ಮಾಡಲು 2-3 ಸಿಬ್ಬಂದಿ ಬೇಕಾಗುತ್ತಾರೆ. ಯಂತ್ರಗಳು- ₹1 ಲಕ್ಷ, ಫರ್ನಿಚರ್- ₹20 ಸಾವಿರ, ವರ್ಕಿಂಗ್ ಕ್ಯಾಪಿಟಲ್- ₹1.11 ಲಕ್ಷ. ಒಟ್ಟು ಪ್ರಾಜೆಕ್ಟ್ ವೆಚ್ಚ- ₹2.31 ಲಕ್ಷ. ಮೊದಲ ವರ್ಷದಿಂದಲೇ ಲಾಭ ಶುರುವಾಗುತ್ತದೆ.
ಇದನ್ನೂ ಓದಿ: ಲಂಡನ್ ಬೀದಿಯಲ್ಲಿ ಸಮೋಸಾ ಘಮ, ವ್ಯಾಪಾರಸ್ಥನ ಬುದ್ಧಿವಂತಿಕೆಯೇ ಲಕ್ಷ ಸಂಪಾದನೆಗೆ ಕಾರಣ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

