ಚೀನಾದ ಗೋಲ್ಡ್ ಗೇಮ್: ಮತ್ತೆ ಚಿನ್ನ ಖರೀದಿ ಆರಂಭ, ಜಗತ್ತಿನ ವಿರುದ್ಧ ದೊಡ್ಡ ಪ್ಲಾನ್ ಮಾಡ್ತಿದೆಯಾ?
ಚೀನಾ ಸತತ 7ನೇ ತಿಂಗಳು ತನ್ನ ಗೋಲ್ಡ್ ರಿಸರ್ವ್ ಹೆಚ್ಚಿಸಿಕೊಂಡಿದೆ. ಈ ಖರೀದಿ ಕೇವಲ ಹೂಡಿಕೆಯಲ್ಲ, ಜಾಗತಿಕ ಸಮತೋಲನದ ಆಟದ ಭಾಗ ಎಂದು ಹೇಳಲಾಗುತ್ತಿದೆ. ಚೀನಾ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಆರ್ಥಿಕ ಬಫರ್ ಸೃಷ್ಟಿಸಿಕೊಳ್ಳಲು ಚಿನ್ನ ಖರೀದಿಸುತ್ತಿದೆಯೇ?

ಚೀನಾ ಗೋಲ್ಡ್ ಸ್ಟ್ರಾಟಜಿ : ಬೀಜಿಂಗ್‌ನಲ್ಲಿ ಏನೋ ದೊಡ್ಡದೇ ಪ್ಲಾನ್ ನಡೀತಿದ್ಯಾ? ಚೀನಾದ ನಡೆ ನೋಡಿದ್ರೆ ಹಾಗೇ ಅನ್ಸುತ್ತೆ. ವಾಸ್ತವವಾಗಿ, 18 ತಿಂಗಳು ನಿರಂತರವಾಗಿ ಚಿನ್ನ ಖರೀದಿಸಿದ ನಂತರ, ಚೀನಾ 6 ತಿಂಗಳ ವಿರಾಮ ತೆಗೆದುಕೊಂಡಿತ್ತು. ಈ ಬ್ರೇಕ್ ನವೆಂಬರ್ 2023 ರವರೆಗೆ ಮುಂದುವರೆಯಿತು. ಈಗ ಡ್ರ್ಯಾಗನ್ ಮತ್ತೆ ಚಿನ್ನ ಖರೀದಿ ಶುರು ಮಾಡಿದೆ. ಮೇ 2025 ರ ಅಂಕಿಅಂಶಗಳ ಪ್ರಕಾರ, ಚೀನಾ ಸತತ 7ನೇ ತಿಂಗಳು ತನ್ನ ಗೋಲ್ಡ್ ರಿಸರ್ವ್ ಹೆಚ್ಚಿಸಿಕೊಂಡಿದೆ. ಅಮೆರಿಕದೊಂದಿಗಿನ ವ್ಯಾಪಾರ ಯುದ್ಧದ ಮಧ್ಯೆ ಡ್ರ್ಯಾಗನ್ ಚಿನ್ನವನ್ನು ಖರೀದಿಸುವುದು ಬಹಳಷ್ಟು ಸೂಚಿಸುತ್ತಿದೆ.
ಚೀನಾ ಹತ್ರ ಎಷ್ಟು ಚಿನ್ನ ಇದೆ?
ಮೇ 2025 ರ ಅಂತ್ಯಕ್ಕೆ ಚೀನಾದ ಗೋಲ್ಡ್ ರಿಸರ್ವ್ (China Gold Reserve 2025) 73.83 ಮಿಲಿಯನ್ ಫೈನ್ ಟ್ರಾಯ್ ಔನ್ಸ್‌ಗೆ ಹೆಚ್ಚಿದೆ. ಏಪ್ರಿಲ್‌ನಲ್ಲಿ ಈ ಅಂಕಿ 73.77 ಮಿಲಿಯನ್ ಇತ್ತು. PBOC (People’s Bank of China) ಯ ಗೋಲ್ಡ್ ರಿಸರ್ವ್ ಈಗ 241.99 ಬಿಲಿಯನ್ ಡಾಲರ್. ಡಾಲರ್‌ನಲ್ಲಿ ಸ್ವಲ್ಪ ಕಡಿಮೆಯಾಗಿದ್ರೂ, ಚೀನಾದ ಸ್ಟ್ರಾಟಜಿ ಚಿನ್ನವನ್ನು ಒಂದು ರಣತಂತ್ರದ ಅಸ್ತ್ರವಾಗಿ ನೋಡ್ತಿದೆ ಎಂದು ವರದಿ ತೋರಿಸಿದೆ
ಚಿನ್ನದಲ್ಲಿ 27% ಏರಿಕೆ, ಇದು ಕೇವಲ ಕಾಕತಾಳೀಯನಾ?
2024 ರಲ್ಲಿ ಚಿನ್ನದ ಬೆಲೆಯಲ್ಲಿ 27% ಏರಿಕೆ ಕಂಡಿದೆ. ಇದಕ್ಕೆ ಕಾರಣ ನಿರಂತವಾಗಿ ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆ, ಸುಂಕ ಯುದ್ಧದ ಬೆದರಿಕೆ ಮತ್ತು ಮುಖ್ಯವಾಗಿ ನಂಬಿಕೆಯ ಕೊರತೆ. ಇದರ ಪರಿಣಾಮವಾಗಿ PBOC ಯ ಚಿನ್ನ ಖರೀದಿ ಕೇವಲ ಹೂಡಿಕೆಯಲ್ಲ, ಜಾಗತಿಕ ಸಮತೋಲನದ ಆಟದ ಭಾಗ ಅಂತ ಹೇಳಲಾಗ್ತಿದೆ. ಚೀನಾ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಬಯಸುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇದು ಒಂದು ರೀತಿಯಲ್ಲಿ ತನ್ನ ವಿದೇಶಿ ಮೀಸಲು ನಿಧಿಯನ್ನು ಚಿನ್ನಕ್ಕೆ ಬದಲಾಯಿಸುವ ಸೂಚನೆಯಾಗಿದೆ.
ನವೆಂಬರ್‌ನಲ್ಲಿ ಟ್ರಂಪ್ ಗೆಲುವು ಮತ್ತು ಚೀನಾದ ಗೋಲ್ಡ್ ಗೇಮ್ ಶುರು
ಅತ್ಯಂತ ಆಸಕ್ತಿದಾಯಕ ಸಂಗತಿ ಎಂದರೆ ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗ ಚೀನಾ ನವೆಂಬರ್ 2024 ರಿಂದ ಚಿನ್ನ ಖರೀದಿ ಮತ್ತೆ ಶುರು ಮಾಡಿತ್ತು. ಇದು ಕಾಕತಾಳಿಯವಂತೂ ಅಲ್ಲ ಎಂಬುದು ತಜ್ಞರ ಅಭಿಪ್ರಾಯ, ಟ್ರಂಪ್ ಅಧಿಕಾರಕ್ಕೆ ಬರುವ ಭಯನಾ ಅಥವಾ ಬೇರೆ ಏನಾದ್ರೂ? ಇರಬಹುದಾ ಗೊತ್ತಿಲ್ಲ. ಏಕೆಂದರೆ ಈ ಹಿಂದೆಯೂ ಟ್ರಂಪ್ ನೀತಿಯನ್ನು ಚೀನಾ ಅನುಭವಿಸಿದೆ ಮತ್ತು ಈಗ ಆಟ ಮತ್ತೆ ಕಠಿಣವಾಗಬಹುದು ಎಂಬ ಕಾರಣಕ್ಕೆ ಈ ಬೆಳವಣೀಗೆ ನಡೆದಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ, ಚಿನ್ನದ ಮೂಲಕ ಒಂದು ಆರ್ಥಿಕ ಬಫರ್ ಸೃಷ್ಟಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ.
2025 ರಲ್ಲಿ ಗೋಲ್ಡನ್ ಧಮಾಕ ಆಗುತ್ತಾ?
2025 ರಲ್ಲಿ ವಿಶ್ವದ ಕೇಂದ್ರೀಯ ಬ್ಯಾಂಕುಗಳು 1,000 ಮೆಟ್ರಿಕ್ ಟನ್ ಚಿನ್ನವನ್ನು ಖರೀದಿಸಬಹುದು. ಈ ಖರೀದಿ ಕಳೆದ ನಾಲ್ಕು ವರ್ಷಗಳಲ್ಲಿ ಅತಿ ದೊಡ್ಡ ಪ್ರಮಾಣದ್ದು ಆಗಿರಲಿದ್ದು, ಇದಕ್ಕೆ ಚೀನಾ ನೇತೃತ್ವ ವಹಿಸುತ್ತಿದೆ. ಇದು ಕೇವಲ ವ್ಯಾಪಾರ ಅಥವಾ ಚಿನ್ನದ ದರಗಳ ಕಥೆಯಲ್ಲ, ಆದರೆ ಕರೆನ್ಸಿ ಯುದ್ಧದ ಅಡಿಪಾಯ ಮತ್ತು ಯಾವಾಗಲೂ ರಹಸ್ಯವಾಗಿ ತನ್ನ ಆಟವನ್ನು ಆಡುವ ಚೀನಾ, ಬಹುಶಃ ಈ ಬಾರಿಯೂ ಸದ್ದಿಲ್ಲದೆ ಮೌನವಾಗಿ ಚೀನಾ ' ಚಿನ್ನದ ಕ್ರಾಂತಿ'ಯನ್ನು ಪ್ರಾರಂಭಿಸಿದೆಯೇ? ಎಂಬುದು ಸದ್ಯ ಜಗತ್ತಿನ ಮುಂದಿರುವ ಅನುಮಾನದ ಪ್ರಶ್ನೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

