MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Cognizant Q1 revenue rises: ಲೇ-ಆಫ್‌ಗಳ ಮಧ್ಯೆ ಕಾಗ್ನಿಜೆಂಟ್‌ನ ಹೊಸ ಅಧ್ಯಾಯ! ಒಂದೇ ವರ್ಷದಲ್ಲಿ 21,000 ನೇಮಕಾತಿ

Cognizant Q1 revenue rises: ಲೇ-ಆಫ್‌ಗಳ ಮಧ್ಯೆ ಕಾಗ್ನಿಜೆಂಟ್‌ನ ಹೊಸ ಅಧ್ಯಾಯ! ಒಂದೇ ವರ್ಷದಲ್ಲಿ 21,000 ನೇಮಕಾತಿ

ಟೆಕ್ ದೈತ್ಯ 'ಕಾಗ್ನಿಜೆಂಟ್' ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷಕ್ಕೆ ಹೆಚ್ಚಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದ್ದು, ಎಐ ಆಧಾರಿತ ಯೋಜನೆಗಳು ಮತ್ತು ಬೃಹತ್ ಒಪ್ಪಂದಗಳ ಮೂಲಕ ಐಟಿ ವಲಯಕ್ಕೆ ಹೊಸ ಭರವಸೆ ಮೂಡಿಸಿದೆ.

2 Min read
Author : Gowthami K
Published : Apr 29 2026, 06:29 PM IST
Share this Photo Gallery
  • FB
  • TW
  • Linkdin
  • Whatsapp
16
ಜಾಗತಿಕ ಟೆಕ್ ದೈತ್ಯ 'ಕಾಗ್ನಿಜೆಂಟ್' ಭರ್ಜರಿ ಸಿಹಿಸುದ್ದಿ
Image Credit : our own

ಜಾಗತಿಕ ಟೆಕ್ ದೈತ್ಯ 'ಕಾಗ್ನಿಜೆಂಟ್' ಭರ್ಜರಿ ಸಿಹಿಸುದ್ದಿ

ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಸಾಲು ಸಾಲು ಲೇ-ಆಫ್‌ಗಳಿಂದಾಗಿ ಕಂಗೆಟ್ಟಿದ್ದ ಭಾರತದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಜಾಗತಿಕ ಟೆಕ್ ದೈತ್ಯ 'ಕಾಗ್ನಿಜೆಂಟ್' ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕಾಗ್ನಿಜೆಂಟ್ ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ.

26
ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ
Image Credit : Getty

ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ

2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ (ಕ್ಯೂ1) ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕಾ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕ್ಯೂ1 ನಲ್ಲಿ ಕಂಪನಿಯ ಆದಾಯವು ಶೇ. 5.8 ರಷ್ಟು ಏರಿಕೆ ಕಂಡು 5.4 ಬಿಲಿಯನ್ ಡಾಲರ್ (ಸುಮಾರು 51,200 ಕೋಟಿ ರೂ.) ತಲುಪಿದೆ. ಸ್ಥಿರ ಕರೆನ್ಸಿ ಲೆಕ್ಕಾಚಾರದಲ್ಲಿ ಇದು ಶೇ. 3.9ರಷ್ಟು ಬೆಳವಣಿಗೆಯಾಗಿದೆ.

ಆದರೆ, ಕಂಪನಿಯ ಕಾರ್ಯಾಚರಣೆ ಮಾರ್ಜಿನ್ ಈ ತ್ರೈಮಾಸಿಕದಲ್ಲಿ ಶೇ. 15.6ರಷ್ಟಿದ್ದು, ಹೊಂದಾಣಿಕೆಯ ಆಧಾರದ ಮೇಲೆ ಸ್ಥಿರವಾಗಿದ್ದರೂ, ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ ಕಂಡಿದೆ.

Related Articles

Related image1
ಬೆಂಗಳೂರು, ಹೈದರಾಬಾದ್ ಚೆನ್ನೈ ಆಸ್ತಿಯನ್ನು ಮಾರಲು ಮುಂದಾದ ಜಾಗತಿಕ ಮುಂಚೂಣಿಯಲ್ಲಿರುವ ಕಾಗ್ನಿಜೆಂಟ್!
Related image2
ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯ ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್, ಎಐ ಜಗತ್ತಿನ ಹೊಸ ಅಧ್ಯಾಯ ಆರಂಭ
36
ಫೈನಾನ್ಶಿಯಲ್‌ ವಲಯದಲ್ಲಿ ಭರ್ಜರಿ ಬೆಳವಣಿಗೆ
Image Credit : Wikimedia Commons

ಫೈನಾನ್ಶಿಯಲ್‌ ವಲಯದಲ್ಲಿ ಭರ್ಜರಿ ಬೆಳವಣಿಗೆ

ಫೈನಾನ್ಶಿಯಲ್‌ ಸರ್ವಿಸ್ ವಲಯ ಶೇ. 12.4ರಷ್ಟು ವೃದ್ಧಿ ಸಾಧಿಸಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದರೆ, ಕಮ್ಯುನಿಕೇಶನ್ ಮತ್ತು ಮೀಡಿಯಾ ವಲಯ ಶೇ. 8.1ರಷ್ಟು ಹಾಗೂ ಪ್ರಾಡಕ್ಟ್ಸ್ ವಲಯ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿವೆ. ಭೌಗೋಳಿಕವಾಗಿ ನೋಡುವುದಾದರೆ, ಉತ್ತರ ಅಮೆರಿಕಾದಲ್ಲಿ ಶೇ. 5.1ರಷ್ಟು ಹಾಗೂ ಯುರೋಪ್ ಮಾರುಕಟ್ಟೆ ಶೇ. 3.5ರಷ್ಟು ಬೆಳವಣಿಗೆ ಕಂಡು ಬಂದಿದೆ.

ಎರಡನೇ ತ್ರೈಮಾಸಿಕದಲ್ಲಿ (ಕ್ಯೂ2) ಆದಾಯ ಶೇ. 3.8 ರಿಂದ ಶೇ. 5.3ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಕಾಗ್ನಿಜೆಂಟ್ ವ್ಯಕ್ತಪಡಿಸಿದ್ದು, 2026ರ ಪೂರ್ಣ ಆರ್ಥಿಕ ವರ್ಷದಲ್ಲಿ ಆದಾಯದ ಬೆಳವಣಿಗೆ ಶೇ. 4.8 ರಿಂದ ಶೇ. 7.3ರಷ್ಟಿರಲಿದೆ (ಸ್ಥಿರ ಕರೆನ್ಸಿಯಲ್ಲಿ ಶೇ. 4 ರಿಂದ ಶೇ. 6.5) ಎಂದು ಅಂದಾಜಿಸಿದೆ.

46
ಐಟಿ ವಲಯಕ್ಕೆ ನೆಮ್ಮದಿ ತಂದ ಕಾಗ್ನಿಜೆಂಟ್
Image Credit : our own

ಐಟಿ ವಲಯಕ್ಕೆ ನೆಮ್ಮದಿ ತಂದ ಕಾಗ್ನಿಜೆಂಟ್

ಟಿ‌ಸಿ‌ಎಸ್, ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ದೈತ್ಯ ಕಂಪನಿಗಳು ಉದ್ಯೋಗ ನೇಮಕಾತಿಯನ್ನು ತಗ್ಗಿಸುತ್ತಿರುವ ಹೊತ್ತಿನಲ್ಲೇ, ಕಾಗ್ನಿಜೆಂಟ್ ಹೊಸ ನೇಮಕಾತಿಯಲ್ಲಿ ಮುಂಚೂಣಿಯಲ್ಲಿದೆ. ಕ್ಯೂ1 ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31, 2026ರ ಕೊನೆಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 3,57,600ಕ್ಕೆ ತಲುಪಿದೆ. ಕಳೆದ ಒಂದೇ ತ್ರೈಮಾಸಿಕದಲ್ಲಿ 6,000 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ (2025ರ ಕ್ಯೂ1) ಹೋಲಿಸಿದರೆ ಉದ್ಯೋಗಿಗಳ ಸಂಖ್ಯೆಯಲ್ಲಿ 21,300ರಷ್ಟು ಭಾರಿ ಏರಿಕೆ ಕಂಡಿದೆ. ಕಾಗ್ನಿಜೆಂಟ್‌ನ ಹೆಚ್ಚಿನ ಉದ್ಯೋಗಿಗಳು ಭಾರತದಲ್ಲೇ ಇರುವುದರಿಂದ, ಇದು ದೇಶದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಇನ್ನು ಕಂಪನಿ ಬಿಟ್ಟು ಹೋಗುವ ಉದ್ಯೋಗಿಗಳ ಪ್ರಮಾಣ (ಅಟ್ರಿಷನ್‌ ದರ) ಶೇ. 12.3ರಷ್ಟಿದ್ದು ಸ್ಥಿರವಾಗಿದೆ.

56
ಭಾರಿ ಒಪ್ಪಂದ, ಎಐನತ್ತ ಕಂಪನಿ ಚಿತ್ತ
Image Credit : our own

ಭಾರಿ ಒಪ್ಪಂದ, ಎಐನತ್ತ ಕಂಪನಿ ಚಿತ್ತ

ಕ್ಯೂ1 ನಲ್ಲಿ ಕಾಗ್ನಿಜೆಂಟ್‌ನ ಬುಕಿಂಗ್‌ಗಳಲ್ಲಿ ಶೇ. 21ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಕಳೆದ 12 ತಿಂಗಳ ಒಟ್ಟು ಬುಕಿಂಗ್ ಮೌಲ್ಯ 29.6 ಬಿಲಿಯನ್ ಡಾಲರ್ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 7 ಬೃಹತ್ ಡೀಲ್‌ಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಮೆಗಾ ಡೀಲ್ ಕೂಡ ಸೇರಿದೆ.

"ನಮ್ಮ ಎಐ ಆಧಾರಿತ ಕಾರ್ಯತಂತ್ರವು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಎಐ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದು, ಶೇ. 40ರಷ್ಟು ಕೋಡಿಂಗ್ ಕೆಲಸಗಳನ್ನು ಎಐ ನೆರವಿನಿಂದಲೇ ಮಾಡಲಾಗುತ್ತಿದೆ" ಎಂದೂ ಕಂಪನಿಯ ಸಿಇಒ ರವಿ ಕುಮಾರ್ ಎಸ್ ತಿಳಿಸಿದ್ದಾರೆ.

66
ಆಸ್ಟ್ರೇಯಾ ಕಂಪನಿ ಖರೀದಿಸಲಿದೆ ಕಾಗ್ನಿಜೆಂಟ್‌
Image Credit : our own

ಆಸ್ಟ್ರೇಯಾ ಕಂಪನಿ ಖರೀದಿಸಲಿದೆ ಕಾಗ್ನಿಜೆಂಟ್‌

ತನ್ನ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾಗ್ನಿಜೆಂಟ್, ಐಟಿ ಸೇವಾ ಪೂರೈಕೆದಾರ ಕಂಪನಿಯಾದ 'ಆಸ್ಟ್ರೇಯಾ'ವನ್ನು ಸುಮಾರು 600 ಮಿಲಿಯನ್ ಡಾಲರ್ (5,700 ಕೋಟಿ ರೂ.) ಮೌಲ್ಯದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕ್ರಿಯೆ 2026ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತದ ಭೀತಿ ಎದುರಾಗಿರುವ ಈ ಸಮಯದಲ್ಲಿ, ಕಾಗ್ನಿಜೆಂಟ್‌ನ ಈ ಪಾಸಿಟಿವ್ ಬೆಳವಣಿಗೆ ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಉದ್ಯೋಗಗಳು
ಸುದ್ದಿ
ಐಟಿ ಉದ್ಯೋಗ
ಖಾಸಗಿ ಉದ್ಯೋಗಗಳು
ಉದ್ಯೋಗ ಕಡಿತ
ನೇಮಕಾತಿ

Latest Videos
Recommended Stories
Recommended image1
ಭಾರತದಲ್ಲಿ ನೆಮ್ಮದಿಯ ನಿವೃತ್ತ ಜೀವನಕ್ಕೆ ಬೇಕು 40 ಕೋಟಿ ರೂಪಾಯಿ! ಸ್ಟಾರ್ಟ್ಅಪ್ ಸಂಸ್ಥಾಪಕನ ಲೆಕ್ಕಾಚಾರಕ್ಕೆ ಬೆಚ್ಚಿಬಿದ್ದ ನೆಟ್ಟಿಗರು
Recommended image2
ಜಗತ್ತಿನ ಟಾಪ್ 10 ಅತಿದೊಡ್ಡ ಸಿನಿಮಾ ಇಂಡಸ್ಟ್ರಿಗಳು ಯಾವವು, ಭಾರತಕ್ಕೆ ಎಷ್ಟೇ ಸ್ಥಾನ? ಇಲ್ಲಿದೆ ಅಚ್ಚರಿಯ ಮಾಹಿತಿ!
Recommended image3
ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ, ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ಡ್ಯೂಟಿ-ಫ್ರೀ, ಪ್ರೀ-ಬುಕಿಂಗ್!
Related Stories
Recommended image1
ಬೆಂಗಳೂರು, ಹೈದರಾಬಾದ್ ಚೆನ್ನೈ ಆಸ್ತಿಯನ್ನು ಮಾರಲು ಮುಂದಾದ ಜಾಗತಿಕ ಮುಂಚೂಣಿಯಲ್ಲಿರುವ ಕಾಗ್ನಿಜೆಂಟ್!
Recommended image2
ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯ ಓಪನ್ಎಐ ಜೊತೆ ಕೈ ಜೋಡಿಸಿದ ಕಾಗ್ನಿಜೆಂಟ್, ಎಐ ಜಗತ್ತಿನ ಹೊಸ ಅಧ್ಯಾಯ ಆರಂಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved