ಎರಡು ದಿನಗಳ ಬಳಿಕ ಮತ್ತೆ ಖುಷಿಯಾಗುವಷ್ಟು ಕುಸಿತಗೊಂಡ ಚಿನ್ನ: ಹಗುರವಾದ ಬಂಗಾರ, ಖರೀದಿಗೆ ಮತ್ಯಾಕೆ ತಡ?
ಎರಡು ದಿನಗಳ ಬಳಿಕ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 100 ಗ್ರಾಂಗೆ ₹13,100 ರಷ್ಟು ಕುಸಿದಿದ್ದು, ಬೆಳ್ಳಿ ದರವೂ ಕೆಳಮುಖವಾಗಿದೆ. ಚಿನ್ನ ಖರೀದಿಗೆ ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಚಿನ್ನದ ದರದಲ್ಲಿ ಇಳಿಕೆ
ಎರಡು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಕುಸಿತಗೊಂಡಿದೆ. ಶನಿವಾರ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದ್ರೆ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದೆ.
ಖರೀದಿಗೆ ಇಂದು ಒಳ್ಳೆಯ ದಿನ
ಇಂದು 24 ಕ್ಯಾರಟ್ 100 ಗ್ರಾಂ ಬೆಲೆಯಲ್ಲಿ 13,100 ರೂಪಾಯಿ ಕುಸಿತವಾಗಿದೆ. ಅದೇ ರೀತಿ 22 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 12,000 ರೂ.ಗಳಷ್ಟು ಕಡಿಮೆಯಾಗಿದೆ. ಚಿನ್ನ ಖರೀದಿಗೆ ನೀವೇನಾದ್ರು ಪ್ಲಾನ್ ಮಾಡಿಕೊಂಡಿದ್ರೆ ಖರೀದಿಗೆ ಇಂದು ಒಳ್ಳೆಯ ದಿನವಾಗಿದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,644 ರೂಪಾಯಿ
8 ಗ್ರಾಂ: 1,25,152 ರೂಪಾಯಿ
10 ಗ್ರಾಂ: 1,56,440 ರೂಪಾಯಿ
100 ಗ್ರಾಂ: 15,64,400 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,340 ರೂಪಾಯಿ
8 ಗ್ರಾಂ: 1,14,720 ರೂಪಾಯಿ
10 ಗ್ರಾಂ: 1,43,400 ರೂಪಾಯಿ
100 ಗ್ರಾಂ: 14,34,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,44,400 ರೂಪಾಯಿ, ಬೆಂಗಳೂರು: 1,43,400 ರೂಪಾಯಿ, ದೆಹಲಿ: 1,43,500 ರೂಪಾಯಿ, ಕೋಲ್ಕತ್ತಾ: 1,43,400 ರೂಪಾಯಿ, ಹೈದರಾಬಾದ್: 1,43,400 ರೂಪಾಯಿ, ಕೇರಳ: 1,43,400 ರೂಪಾಯಿ, ಅಹಮದಾಬಾದ್: 1,43,450 ರೂಪಾಯಿ, ವಡೋದರ: 1,43,400 ರೂಪಾಯಿ
ಇದನ್ನೂ ಓದಿ: ಒಂದೇ ಆರ್ಡರ್ನಿಂದ ಗಗನಕ್ಕೇರಿದ ಷೇರು ಬೆಲೆ; ಹೂಡಿಕೆದಾರರಿಗೆ ಶೇ.7950 ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್
ದೇಶದಲ್ಲಿಂದು ಬೆಳ್ಳಿ ಬೆಲೆ
ಸಾರ್ವಕಾಲಿಕ ದಾಖಲೆಯನ್ನು ತನ್ನದಾಗಿಸಿಕೊಂಡಿರುವ ಬೆಳ್ಳಿಯೂ ಇಂದು ಇಳಿಕೆಯತ್ತ ಮುಖ ಮಾಡಿದೆ. 1 ಕೆಜಿ ಬೆಳ್ಳಿ ದರದಲ್ಲಿ 7 ಸಾವಿರ ರೂ.ಗಳಷ್ಟು ಕಡಿಮೆಯಾಗಿದೆ. ಇಂದಿನ ದರ ಈ ರೀತಿಯಾಗಿದೆ.
10 ಗ್ರಾಂ: 2,680 ರೂಪಾಯಿ
100 ಗ್ರಾಂ: 26,800 ರೂಪಾಯಿ
1000 ಗ್ರಾಂ: 2,68,000 ರೂಪಾಯಿ
ಇದನ್ನೂ ಓದಿ: ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್ ಫೇವರಿಟ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

