ಅಕ್ಷಯ ತೃತೀಯ ಬರುತ್ತಿದ್ದಂತೆ ಇಳಿಕೆಯಾದ ಚಿನ್ನದ ಬೆಲೆ, ಜನಸಾಮಾನ್ಯರಲ್ಲಿ ಮಂದಹಾಸ
ಮದುವೆ ಸೀಸನ್, ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ ಕೂಡ ಇದೆ, ಚಿನ್ನದ ಬೆಲೆ ನೋಡಿದರೆ ಗಗನಕ್ಕೇರಿದೆ. 10 ಗ್ರಾಂ ಚಿನ್ನಕ್ಕೆ ಒಂದು ಲಕ್ಷದ ಗಡಿ ದಾಟಿದೆ. ಕಳೆದ 6 ದಿನಗಳಿಂದ ಸತತ 6 ದಿನದಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಈ ದಿನ ಇಳಿಕೆಯಾಗಿದೆಯೇ, ಏರಿಕೆಯಾಗಿದೆಯೆ? ಚಿನ್ನದ ಹೂಡಿಕೆಗೆ ಈ ದಿನ ಹೇಗಿದೆ?

ಚಿನ್ನ ಬಲು ದುಬಾರಿಯಾಗಿದೆ. ಪ್ರತಿ ದಿನ ಬಂಗಾರದ ಬೆಲೆ ಏರಿಕೆಯಾಗುತ್ತಿರುವ ನಡುವೆ ಅಕ್ಷಯ ತೃತೀಯವೂ ಬರುತ್ತಿದೆ. ಇದರ ನಡುವೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಅಕ್ಷಯ ತೃತೀಯಕ್ಕೂ ಕೆಲವೇ ದಿನ ಮೊದಲು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇದು ಜನಸಾಮಾನ್ಯರ ಮುಖದಲ್ಲಿ ಸಮಾಧನ ಮೂಡಿಸಿದೆ.
ಇಂದಿನ ಮಾರುಕಟ್ಟೆ ಬೆಲೆ ಎಷ್ಟಿದೆ?
ಈ ದಿನವು ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಒಂದು ಗ್ರಾಂಗೆ 69 ರುಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ ಗ್ರಾಂಗೆ 68 ರುಪಾಯಿ ಇಳಿಕೆಯಾಗಿದ್ದು 18ಕ್ಯಾರೆಟ್ ಚಿನ್ನದ ಬೆಲೆ ರು. 51ರಷ್ಟು ಇಳಿಕೆ ಕಂಡಿದೆ.
ಒಂದು ಗ್ರಾಂಗೆ ಎಷ್ಟಿದೆ?
24 ಕ್ಯಾರೆಟ್ ಚಿನ್ನ ಗ್ರಾಂಗೆ ₹9,753
22 ಕ್ಯಾರೆಟ್ ಚಿನ್ನ ಗ್ರಾಂಗೆ ₹8,940
18 ಕ್ಯಾರೆಟ್ ಚಿನ್ನ ಗ್ರಾಂಗೆ d ₹7,315
ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಭಾರಿ ವ್ಯತ್ಯಸಾವೇನು ತಂದಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಇಳಿಕೆಯಾಗುತ್ತಿರುವ ಕಾರಣ ಸಮಾಧಾನ ತಂದಿದೆ. ದುಬಾರಿಯಾಗಿರುವ ಚಿನ್ನದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಜನಸಾಮಾನ್ಯರು ಭಾವಿಸಿದ್ದಾರೆ.
24 ಕ್ಯಾರೆಟ್ ಚಿನ್ನ 10 ಗ್ರಾಂಗೆ ಎಷ್ಟು ಇಳಿಕೆಯಾಗಿದೆ
ನೆನ್ನೆ 10ಗ್ರಾಂ ಚಿನ್ನದ ಬೆಲೆ ರು. 98, 210 ಇತ್ತು, ಇಂದು ರು. 97, 530ಗೆ ಇಳಿಕೆಯಾಗಿದ್ದು ನೆನ್ನೆಗಿಂತ ಇಂದು 680 ರುಪಾಯಿಯಷ್ಟು ಇಳಿಕೆಯಾಗಿದೆ.
22 ಕ್ಯಾರೆಟ್ ಚಿನ್ನ 10ಗ್ರಾಂಗೆ ಎಷ್ಟು ಇಳಿಕೆಯಾಗಿದೆ?
ನೆನ್ನೆ ರು.90020 ಇದ್ದ ಚಿನ್ನದ ಬೆಲೆ ಇಂದು ರು. 89, 400ಗೆ ಇಳಿಕೆಯಾಗಿದೆ, ಇಂದು ಚಿನ್ನದ ಬೆಕೆ 10 ಗ್ರಾಂಗೆ 620ರಷ್ಟು ಇಳಿಕೆಯಾಗುತ್ತಿದೆ.
ಬಡವರಿಗೆ, ಮಧ್ಯಮವರ್ಗದರಿಗೆ ದುಬಾರಿಯಾದ ಚಿನ್ನ
ಚಿನ್ನ ಮೊದಲಿನಿಂದಲೂ ದುಬಾರಿ ಆದರೆ ಈಗ ಏರುತ್ತಿರುವ ಚಿನ್ನದ ಬೆಲೆ ಬಡವರಿಗೆ ಮಧ್ಯಮಬರ್ಗದವರಿಗೆ ತುಂಬಾನೇ ದುಬಾರಿಯಾಗುತ್ತಿದೆ. 10 ಗ್ರಾಂ ಚಿನ್ನ ಖರೀದಿಗೆ ಲಕ್ಷ ಹಣ ಹೊಂದಿಸಬೇಕಾಗುತ್ತಿದೆ. ದಿನದಿಂದ ದಿನಕ್ಕೆ ಎರಿಕೆ ಕಂಡು ಬರುತ್ತಿದ್ದ ಚಿನ್ನದ ಬೆಲೆ ಕಳೆದ 6 ದಿನಗಳಿಂದ ಇಳಿಕೆಯಾಗುತ್ತಿದ್ದು, ಅಕ್ಷಯ ತೃತೀಯಾದ ಸಮಯಕ್ಕೆ ಮತ್ತಷ್ಟು ಇಳಿಕೆಯಾದರೆ ಒಳ್ಳೆಯದಿತ್ತು ಎಂಬ ನಿರೀಕ್ಷೆ ಜನರದ್ದು.
ಚಿನ್ನದ ಬೆಲೆ ಹೇಗೆ ನಿಗದಿ ಮಾಡಲಾಗುವುದು?
ಅಂತರರಾಷ್ಟ್ರೀಯ ಮಾರುಕಟ್ಟೆ, ಚಿನ್ನದ ಮೇಲಿನ ಆಮದು ಸುಂಕ, ಡಾಲರ್ ಎದುದು ಮೌಲ್‌ಯ ಅಧರಿಸಿ ಹಳದಿ ಲೋಹದ ಬೆಲೆ ನಿಗದಿ ಮಾಡಲಾಗುವುದು. ಟ್ರಂಪ್ ತೆರಿಗೆ ನೀತಿಯಿಂದಾಗಿ ಮತ್ತಷ್ಟು ದುಬಾರಿಯಾಗಿದ್ದ ಚಿನ್ನದ ಬೆಲೆ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.