MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

1 Min read
Author : Naveen Kodase
Published : Apr 17 2026, 11:19 AM IST
Share this Photo Gallery
  • FB
  • TW
  • Linkdin
  • Whatsapp
16
ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್
Image Credit : Social Media

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್

ಒಂದು ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಾ ಸಾಗಿತ್ತು. ಇನ್ನೊಂದೆಡೆ ಅಕ್ಷಯ ತೃತೀಯ ಸಮೀಪಿಸುತ್ತಿತ್ತು. ಹೀಗಿರುವಾಗಲೇ ಚಿನ್ನ ಖರೀದಿಸುವವರ ಪಾಲಿಗೆ ಇದೀಗ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

26
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1370 ರುಪಾಯಿ ಕುಸಿತ
Image Credit : Pexels

24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1370 ರುಪಾಯಿ ಕುಸಿತ

ಹೌದು, 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಮೇಲೆ ಶುಕ್ರವಾರವಾದ ಇಂದು ಬರೋಬ್ಬರಿ 1370 ರುಪಾಯಿ ಇಳಿಯಾಗಿದೆ. ನಿನ್ನೆ 24 ಕ್ಯಾರಟ್ ಒಂದು ಗ್ರಾಮ್‌ಗೆ 15,557 ಇದ್ದ ರೇಟ್ ಇಂದು 15,420 ರುಪಾಯಿಗೆ ಇಳಿಕೆಯಾಗಿದೆ.

Related Articles

Related image1
ಅಕ್ಷಯ ತೃತೀಯ ನಂತರ ಈ 5 ರಾಶಿಗೆ ಅದೃಷ್ಟ, ಮಂಗಳ ಮತ್ತು ಶನಿಯ ಸಂಯೋಗದಿಂದ ಬಂಪರ್‌ ಲಾಟರಿ
Related image2
ಅಕ್ಷಯ ತೃತೀಯಕ್ಕೆ ಪತ್ನಿಗೆ ಗಿಫ್ಟ್ ಕೊಡಬೇಕಾ? 1 ಗ್ರಾಂ ಚಿನ್ನದ ಉಂಗುರದ ಡಿಸೈನ್ಸ್
36
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1250 ರುಪಾಯಿ ಕುಸಿತ
Image Credit : ANI

22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1250 ರುಪಾಯಿ ಕುಸಿತ

ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಗೋಲ್ಡ್ ರೇಟ್‌ನಲ್ಲೂ ಇಂದು ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 1250 ರುಪಾಯಿ ಇಳಿಕೆಯಾಗಿದೆ.

46
22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕುಸಿತ
Image Credit : Gemini AI

22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕುಸಿತ

ನಿನ್ನೆ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,260 ರುಪಾಯಿ ಆಗಿತ್ತು. ಈ ಮೂಲಕ ಮೇ ತಿಂಗಳ ಗರಿಷ್ಠ ಮೊತ್ತ ತಲುಪಿತ್ತು. ಆದರೆ ಇದೀಗ ಪ್ರತಿ ಗ್ರಾಮ್ ಮೇಲೆ 125 ರುಪಾಯಿ ಕುಸಿತವಾಗಿದ್ದು, ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,135 ರುಪಾಯಿಗಳಾಗಿದೆ.

56
ಚಿನ್ನ ಖರೀದಿಸುವವರ ಮುಖದಲ್ಲಿ ಮಂದಹಾಸ
Image Credit : Asianet News

ಚಿನ್ನ ಖರೀದಿಸುವವರ ಮುಖದಲ್ಲಿ ಮಂದಹಾಸ

ಒಟ್ಟಿನಲ್ಲಿ ಅಕ್ಷಯ ತೃತೀಯ ಸಮೀಪಿಸುತ್ತಿರುವಾಗಲೇ ಚಿನ್ನದ ಬೆಲೆಯಲ್ಲಿ ಇಳಿಮುಖ ಕಾಣುತ್ತಿರುವುದು ಬಂಗಾರ ಖರೀದಿಸುವವರ ಮುಖದಲ್ಲಿ ಕೊಂಚ ಸಮಾಧಾನ ಮೂಡುವಂತೆ ಮಾಡಿರುವಂತೆ ಮಾಡಿರುವುದಂತೂ ಸುಳ್ಳಲ್ಲ.

66
ಒಂದು ಕೆಜಿ ಬೆಳ್ಳಿ ಮೇಲೆ 5000 ರುಪಾಯಿ ಇಳಿಕೆ
Image Credit : Getty

ಒಂದು ಕೆಜಿ ಬೆಳ್ಳಿ ಮೇಲೆ 5000 ರುಪಾಯಿ ಇಳಿಕೆ

ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಇಳಿಕೆಯಾಗಿದೆ. ನಿನ್ನೆಯ ದಿನಕ್ಕೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5000 ರುಪಾಯಿ ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2,65,000 ರುಪಾಯಿಗಳಾಗಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಅಕ್ಷಯ ತೃತೀಯ
ಚಿನ್ನ
ಚಿನ್ನದ ಬೆಲೆ
ಬೆಳ್ಳಿ ದರ

Latest Videos
Recommended Stories
Recommended image1
ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು
Recommended image2
ಅಕ್ಷಯ ತೃತೀಯ ನಂತರ ಈ 5 ರಾಶಿಗೆ ಅದೃಷ್ಟ, ಮಂಗಳ ಮತ್ತು ಶನಿಯ ಸಂಯೋಗದಿಂದ ಬಂಪರ್‌ ಲಾಟರಿ
Recommended image3
ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ!
Related Stories
Recommended image1
ಅಕ್ಷಯ ತೃತೀಯ ನಂತರ ಈ 5 ರಾಶಿಗೆ ಅದೃಷ್ಟ, ಮಂಗಳ ಮತ್ತು ಶನಿಯ ಸಂಯೋಗದಿಂದ ಬಂಪರ್‌ ಲಾಟರಿ
Recommended image2
ಅಕ್ಷಯ ತೃತೀಯಕ್ಕೆ ಪತ್ನಿಗೆ ಗಿಫ್ಟ್ ಕೊಡಬೇಕಾ? 1 ಗ್ರಾಂ ಚಿನ್ನದ ಉಂಗುರದ ಡಿಸೈನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved