ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಏರಿಕೆಯಾಗುತ್ತಾ ಸಾಗಿದ್ದ ಚಿನ್ನದ ಬೆಲೆಯಲ್ಲಿ ಆಗಿರುವ ಭಾರಿ ಇಳಿಕೆಯಿಂದ ಜನರು ಖರೀದಿ ಹಾಗೂ ಹೂಡಿಕೆಗೆ ಮುಂದಾಗಿದ್ದಾರೆ. ಮತ್ತೆ ಏರಿಕೆಯಾಗುವ ಮೊದಲು ಖರೀದಿಸಲು ಪ್ಲಾನ್ ಮಾಡುತ್ತಿದ್ದಾರೆ.

ಏರಿಕೆ ಕಾಣುತ್ತಿದ್ದ ಬಂಗಾರ ಬೆಲೆ ದಿಢೀರ್ ಕುಸಿತ
ಚಿನ್ನ ಈಗಾಗಲೇ ದುಬಾರಿಯಾಗಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ದುಬಾರಿಯಾಗಿರುವ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡಿತ್ತು. ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಕೆಲ ಪ್ರಮುಖ ಕಾರಣಗಳಿಂದ ಬಂಗಾರ ಬೆಲೆ ಏರಿಕೆಯಾಗುತ್ತಲೇ ಹೋಗಿತ್ತು. ಮದುವೆ ಸೀಸನ್ ಹೆಚ್ಚಗುತ್ತಿದ್ದಂತೆ ಬಂಗಾರ ಬೆಲೆ ಏರಿಕೆ ಜನಸಾಮಾನ್ಯರ ಆತಂಕ ಹೆಚ್ಚಿಸಿತ್ತು. ಆದರೆ ಡಿಸೆಂಬರ್ 16ರಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ
ಬಂಗಾರ ಬೆಲೆ ಇಳಿಕೆ ಹಲವರ ನೆಮ್ಮದಿಗೆ ಕಾರಣವಾಗಿದೆ. ವಿಶೇಷವಾಗಿ ಬೆಂಗಳೂರಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,520 ರೂಪಾಯಿ ಇಳಿಕೆಯಾಗಿದೆ. ಅಂದರೆ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 15,200 ರೂಪಾಯಿ ಇಳಿಕೆಯಾಗಿದೆ. ಸದ್ಯ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,33,860 ರೂಪಾಯಿ ಆಗಿದೆ.
ಬೆಂಗಳೂರಲ್ಲಿ ಬಂಗಾರ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಬೆಂಗಳೂರಲ್ಲಿ 1,400 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನಕ್ಕೆ 1,22,700 ರೂಪಾಯಿ ಆಗಿದೆ. ಇನ್ನು 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,150 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ 18 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 1,00,390 ರೂಪಾಯಿ ಆಗಿದೆ.
24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 13,386 ರೂಪಾಯಿ
22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 12,270 ರೂಪಾಯಿ
18 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 10,039 ರೂಪಾಯಿ
ಹೂಡಿಕೆಗೆ ಮುಗಿಬಿದ್ದ ಜನ
ಬಂಗಾರ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದ ನಡುವೆ ದಿಢೀರ್ ಕುಸಿತ ಕಂಡಿರುವ ಕಾರಣ ಹಲವರು ಚಿನ್ನ ಖರೀದಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಎಂಸಿಎಕ್ಸ್ ಟ್ರೇಡ್‌ನಲ್ಲಿ ಇಂದು ಆರಂಭದಲ್ಲೇ ಚಿನ್ನದ ಬೆಲೆ ಕುಸಿತದಿಂದ ಟ್ರೇಡಿಂಗ್ ಶುರುವಾಗಿತ್ತು.
ಹೂಡಿಕೆಗೆ ಮುಗಿಬಿದ್ದ ಜನ
ಮತ್ತಷ್ಟು ಇಳಿಕೆಯಾಗುತ್ತಾ ಚಿನ್ನದ ಬೆಲೆ
ಹೂಡಿಕೆ ತಜ್ಞರ ಪ್ರಕಾರ ಈ ವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಳಿತಗಳಾಗುತ್ತದೆ ಎಂದಿದ್ದಾರೆ. ಅಮೆರಿಕ ಫೆಡರಲ್ ರಿಸರ್ವ್ ಪಾಲಿಸಿಯಲ್ಲಿ ಆಗಿರುವ ಕೆಲ ಬದಲಾವಣೆ, ಅಮೆರಿಕ ಮ್ಯಾಕ್ರೋ ಎಕಾನಮಿಕ್ ಡೇಟಾ ಕೂಡ ಚಿನ್ನದ ಬೆಲೆಯಲ್ಲಿನ ಬದಲಾವಣೆಗೆ ಕಾರಣಾಗಿದೆ ಎಂದಿದ್ದಾರೆ.
ಮತ್ತಷ್ಟು ಇಳಿಕೆಯಾಗುತ್ತಾ ಚಿನ್ನದ ಬೆಲೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

