- Home
- Business
- ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ,ನೆಟ್ಟಿಗರ ವಿಶೇಷ ಮನವಿ
ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ,ನೆಟ್ಟಿಗರ ವಿಶೇಷ ಮನವಿ
ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ, ಇದೀಗ ಮದುವೆಯಾದ ಮಹಿಳೆಯರ ನಮ್ಮ ಗಂಡನ ಮನಸ್ಸು ಹೀಗೆ ಆಗಲಿ ಎಂದು ಪ್ರಾರ್ಥಿಸಿದರೆ, ಮದುವೆಯಾಗದವರು ಇಂತಹ ಗಂಡನೇ ಸಿಗಲಿ ಎಂದು ಆಶಿಸುತ್ತಿದ್ದಾರೆ.

ಪತ್ನಿಗೆ ಚಿನ್ನ ಖರೀದಿಸುವುದೇ ಇಷ್ಟವಾದ ಕೆಲಸ
ಭಾರತದ ಶ್ರೀಮಂತ ಉದ್ಯಮಿಗಳ ಲೈಫ್ ಸ್ಟೈಲ್ ಯಾವತ್ತೂ ಕುತೂಹಲ. ದುಬಾರಿ ಜೀವನಶೈಲಿ, ಐಷಾರಾಮಿ ಮನೆ, ಕಾರು ಸೇರಿದಂತೆ ಎಲ್ಲದರಲ್ಲೂ ಐಷರಾಮಿತನ ಇರುತ್ತೆ. ಹಲವು ಶ್ರೀಮಂತ ಉದ್ಯಮಿಗಳಿಗೆ ಒಂದೊಂದು ವಿಚಾರದಲ್ಲಿ ಆಸಕ್ತಿ ಇರುತ್ತೆ. ಕೆಲವರಿ ಹೊಸ ಹೊಸ ಲಕ್ಷುರಿ ಕಾರು ಖರೀದಿ, ಮತ್ತೆ ಕೆಲವರಿಗೆ ಮನೆ ಖರೀದಿ ಹೀಗೆ. ಆದರೆ ಇಲ್ಲೊಬ್ಬ ಭಾರತೀಯ ಉದ್ಯಮಿಯ ಆಸಕ್ತಿಗೆ ದೇಶದ ಇಡೀ ಮಹಿಳೆಯರು ಮನಸೋತಿದ್ದಾರೆ. ಕಾರಣ ಈ ಉದ್ಯಮಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸವುದೇ ಅತೀ ಇಷ್ಟವಾದ ಕೆಲಸ.
ಉದ್ಯಮಿ ಸತೀಶ್ ಸನ್‌ಪಾಲ್ ಚಿನ್ನದ ಪ್ರೀತಿ
ಉದ್ಯಮಿ ಸತೀಶ್ ಸನ್‌ಪಾಲ್ ದುಬೈನಲ್ಲಿ ಅತೀ ಶ್ರೀಮಂತ ಉದ್ಯಮಿ. ಭಾರತೀಯ ಮೂಲದ ಸತೀಶ್ ದುಬೈನಲ್ಲಿ ಹಲವು ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಸತೀಶ್ ಸನ್‌ಪಾಲ್ ಜೀವನ ಅತ್ಯಂತ ಐಷಾರಾಮಿ. ವಿಶೇಷ ಅಂದರೆ ತನ್ನ ಪತ್ನಿ ತಬಿಂದಾ ಸನ್‌ಪಾಲ್ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ತನ್ನ ಪತ್ನಿಗೆ ಪ್ರತಿ ವರ್ಷ 3 ಕೆಜಿ ಚಿನ್ನ ಖರೀದಿಸುತ್ತಾರೆ.
ಬೆಲೆ ಎಷ್ಟೇ ಇರಲಿ, ಚಿನ್ನ ಖಾಯಂ
ಸತೀಶ್ ಸನ್‌ಪಾಲ್ ಚಿನ್ನ ಖರೀದಿ ಆಸಕ್ತಿ ವಿಚಾರವನ್ನು ಖುದ್ದು ಪತ್ನಿ ತಬಿಂದಾ ಸನ್‌ಪಾಲ್ ಬಹಿರಂಗಪಡಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ಕ್ಯಾಮೆರಾ ಮುಂದೆ ಮಾತನಾಡಿದ ತಬಿಂದಾ, ಬೆಲೆ ಎಷ್ಟೇ ಇದ್ದರೂ ನನ್ನ ಪತಿ ನನಗಾಗಿ 3 ಕೆಜಿ ಚಿನ್ನ ಪ್ರತಿ ವರ್ಷ ಖರೀದಿಸುತ್ತಾರೆ ಎಂದಿದ್ದಾರೆ.
ಪತ್ನಿಗೆ ಪ್ರತಿ ವರ್ಷ ಸರಿಸುಮಾರು 4.5 ಕೋಟಿ ರೂ ಚಿನ್ನ
ಚಿನ್ನದ ಬೆಲೆ ಬಲು ದುಬಾರಿಯಾಗಿದೆ. ಆದರೆ ಸತೀಶ್ ಸನ್‌ಪಾಲ್ ಯಾವತ್ತೂ ಚಿನ್ನದ ಬೆಲೆ ನೋಡಲ್ಲ. ಇಡೀ ವರ್ಷದಲ್ಲಿ ಪತ್ನಿಗೆ ಖರೀದಿಸುವ ಚಿನ್ನ 3 ಕೆಜಿ ದಾಟಿರಬೇಕು ಅಷ್ಟೆ. ಸದ್ಯದ ಬೆಲೆ ಪ್ರಕಾರ ಸತೀಶ್ ತನ್ನ ಪತ್ನಿಗಾಗಿ ಸರಿಸುಮಾರು 4.5 ಕೋಟಿ ರೂಪಾಯಿ ಚಿನ್ನಕ್ಕಾಗಿ ಖರ್ಚು ಮಾಡುತ್ತಾರೆ. ಚಿನ್ನದ ಬೆಲೆಗೆ ಅನುಗುಣವಾಗಿ ಬೆಲೆ ವ್ಯತ್ಯಾಸವಾಗಲಿದೆ.
ಯಾರು ಈ ಸತೀಶ್ ಸನ್‌ಪಾಲ್
ಸತೀಶ್ ಸನ್‌ಪಾಲ್ ಭಾರತೀಯ ಮೂಲದ ದುಬೈ ಉದ್ಯಮಿ. ಅನಕ್ಸ್ ಹೋಲ್ಡಿಂಗ್ ಕಂಪನಿ ದುಬೈನಲ್ಲಿ ರಿಯಲ್ ಎಸ್ಟೇಟ್, ಫಿನಾನ್ಶಿಯಲ್ ಮಾರ್ಕೆಟ್ಸ್, ಹಾಸ್ಪಿಟಾಲಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಸತೀಶ್ ಸನ್‌ಪಾಲ್ ಪತ್ನಿ ಬ್ರಟಿಷ್ ಪಾಕಿಸ್ತಾನಿ ತಬಿಂದಾ. ಇವರಿಗೆ ಇಸಾಬೆಲ್ಲಾ ಅನ್ನೋ ಪುಟ್ಟ ಮಗಳಿದ್ದಾಳೆ.
ಮಗಳಿಗೆ ರೋಲ್ಸ್ ರಾಯ್ಸ್ ಗಿಫ್ಟ್
ಮಗಳು ಇಸಾಬೆಲ್ಲಾ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಸತೀಶ್ ಸನ್‌ಪಾಲ್ ರೋಲ್ಸ್ ರಾಯ್ಸ್ ಕಾರು ಗಿಫ್ಟ್ ನೀಡಿದ್ದರು. 2025ರಲ್ಲಿ ಸತೀಶ್ ಸನ್‌ಪಾಲ್ ಮಗಳಿಗೆ ಪಿಂಕ್ ಬಣ್ಣಧ ರೋಲ್ಸ್ ರೋಯ್ಸ್ ಕಾರು ಉಡುಗೊರೆಯಾಗಿ ನೀಡಿರುವುದು ಭಾರಿ ಸದ್ದು ಮಾಡಿತ್ತು. ತಬಿಂದಾ ಚಿನ್ನದ ಮಾತು ಹೇಳುತ್ತಿದ್ದಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಪತಿ ಇದೇ ರೀತಿ ಕನಿಷ್ಠ 4 ಗ್ರಾಂ ಆದರೂ ವರ್ಷಕ್ಕೆ ಖರೀದಿಸಲಿ ಎಂದು ಆಶಿಸುತ್ತಿದ್ದಾರೆ. ಇತ್ತ ಹಲವರು ನಮಗೆ ಇಂತ ಗಂಡನೇ ಸಿಗಲಿದೆ ಎಂದು ಬಯಸುತ್ತಿದ್ದಾರೆ.
ಮಗಳಿಗೆ ರೋಲ್ಸ್ ರಾಯ್ಸ್ ಗಿಫ್ಟ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

