ರಿಲಯನ್ಸ್ ಜಿಯೋ 26 ರೂ ರೀಚಾರ್ಜ್ ಪ್ಲಾನ್, 28 ದಿನ ವ್ಯಾಲಿಟಿಡಿ 2 ಜಿಬಿ ಡೇಟಾ ಉಚಿತ
ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪೈಪೋಟಿಯ ನಡುವೆ, ಕಂಪನಿಗಳು ಬಳಕೆದಾರರನ್ನು ಆಕರ್ಷಿಸಲು ವಿವಿಧ ರೀತಿಯ ಯೋಜನೆಗಳನ್ನು ಪರಿಚಯಿಸುತ್ತಿವೆ. ಜಿಯೋ ಇದೀಗ 26 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ ಮತ್ತು 2ಜಿಬಿ ಡೇಟಾ ನೀಡುವ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

ರಿಲಯನ್ಸ್ ಜಿಯೋ ಭಾರತದ ಅತೀ ದೊಡ್ಡ ಟೆಲಿಕಾಂ ನೆಟ್‌ವರ್ಕ್ ಆಗಿ ಹೊರಹೊಮ್ಮಿದೆ. ಗ್ರಾಹಕರಿಗೆ ಹಲವು ವಿಶೇಷ ಆಫರ್, ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಸೇರಿದಂತೆ ಹಲವು ಯೋಜನೆಗಳನ್ನು ನೀಡುತ್ತಿದೆ. ಇದರ ನಡುವೆ ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಇದು ಜಿಯೋ ಫೋನ್ ಬಳಕೆದಾರರಿಗೆ ನೀಡಿದ ಭರ್ಜರಿ ಕೊಡುಗೆಯಾಗಿದೆ. ಕೇವಲ 26 ರೂಪಾಯಿ ರೀಚಾರ್ಜ್ ಪ್ಲಾನ್ ಇದಾಗಿದೆ
ಜಿಯೋ ಫೋನ್ ಬಳಕೆದಾರರು 26 ರೂಪಾಯಿ ರೀಚಾರ್ಜ್ ಮಾಡಿದರೆ ಒಂದು ತಿಂಗಳು ಅಂದರೆ 28 ದಿನ ಯಾವುದೇ ಅಡೆ ತಡೆ ಇಲ್ಲದ ವ್ಯಾಲಿಟಿಡಿ ಸಿಗಲಿದೆ. ಇನ್ನು 2ಜಿಬಿ ಉಚಿತ ಜೇಟಾ ಸಿಗಲಿದೆ. ಈ ಡೇಟಾ ಮುಗಿದರೆ ಇಂಟರ್ನೆಟ್ ಸ್ಪೀಡ್ 64ಕೆಬಿಪಿಎಸ್‌ಗೆ ಇಳಿಕೆಯಾಗಲಿದೆ. ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಘೋಷಿಸಿದೆ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ.
ಯುಪಿಐ ಪಾವತಿಗಳು ಮತ್ತು ವಾಟ್ಸಾಪ್‌ನಂತಹ ಸಣ್ಣಪುಟ್ಟ ಕೆಲಸಗಳಿಗೆ ಜಿಯೋ ಫೋನ್ ಬಳಸುವವರಿಗೆ ಈ ಯೋಜನೆ ಸೂಕ್ತ. ಜಿಯೋ.ಕಾಮ್ ಅಥವಾ ಜಿಯೋ ಆ್ಯಪ್ ಮೂಲಕ ರೀಚಾರ್ಜ್ ಮಾಡಬಹುದು. ಒಮ್ಮೆ ರೀಚಾರ್ಜ್ ಮಾಡಿ ಒಂದು ತಿಂಗಳ ವರೆಗೆ ಸೌಲಭ್ಯಗಳನ್ನು ಆನಂದಿಸಬಹುದು.
ಏರ್‌ಟೆಲ್, ವೊಡಾಫೋನ್ ಐಡಿಯಾ, Vi ಕೂಡ ₹26 ಯೋಜನೆಗಳನ್ನು ನೀಡುತ್ತಿವೆ. ಆದರೆ ಇವುಗಳಲ್ಲಿ1.5 ಜಿಬಿ ಡೇಟಾ ಮತ್ತು ಒಂದು ದಿನದ ವ್ಯಾಲಿಡಿಟಿ ಮಾತ್ರ ಸಿಗುತ್ತದೆ. ಆದರೆ ಜಿಯೋ ತನ್ನ ಜಿಯೋ ಫೋನ್ ಗ್ರಾಹಕರಿಗೆ 26 ರೂಪಾಯಿಯಲ್ಲಿ 28 ವ್ಯಾಲಿಡಿಟಿ ಹಾಗೂ 2ಜಿಬಿ ಡೇಟಾ ನೀಡುತ್ತಿದೆ. ಈ ಮೂಲಕ ಜಿಯೋ ಫೋನ್ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.