ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ
ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ ಬಯಲಾಗಿದೆ. ಯುವ ಸಮೂಹ ಹೂಡಿಕೆ ವಿಚಾರದಲ್ಲಿ ಚಿನ್ನವನ್ನೇ ಆಯ್ಕೆ ಮಾಡುತ್ತಿದ್ದಾರೆ. ಸ್ಮೈಟನ್ ಪಲ್ಸ್ ಎಐ ಸರ್ವೇ ಮಾಹಿತಿ ಇಲ್ಲಿದೆ.

ಮೊದಲ ಆಯ್ಕೆ ಚಿನ್ನ
ಭಾರತದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಖರೀದಿ, ಹೂಡಿಕೆ ಸೇರಿದಂತೆ ಹಲವು ಕಾರಣಗಳಿಂದ ಚಿನ್ನಕ್ಕೆ ಅತೀಯಾದ ಪ್ರಾಮುಖ್ಯತೆ ಇದೆ. ಭಾರತದಲ್ಲಿ ಸಾಮಾನ್ಯವಾಗಿ ಮದುವೆ, ಹಬ್ಬ, ವಿಶೇಷ ಸಂದರ್ಭದಲ್ಲಿ ಹಲವು ಅನಿವಾರ್ಯವಾಗಿ ಅಥವಾ ಸಂಭ್ರಮದಿಂದ ಚಿನ್ನ ಖರೀದಿಸುತ್ತಾರೆ. ಈ ಹಿಂದೆ ಕೆಲಸಕ್ಕೆ ಸೇರುವ ಅಥವಾ ವೇತನ ಪಡೆಯಲು ಆರಂಭಿಸಿದ ಬಳಿಕ ಚಿನ್ನ ಖರೀದಿಗಿಂತ ಷೇರು, ರಿಯಲ್ ಎಸ್ಟೇಟ್ , ಆರ್‌ಡಿ, ಮ್ಯೂಚ್ಯುವಲ್ ಫಂಡ್, ಎಲ್ಐಸಿ ಸೇರಿದಂತೆ ಹಲವು ವೇದಿಕೆಗಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಭಾರತದ ಜೆನ್‌ಜಿ ಹಾಗೂ ಮಿಲೇನಿಯಲ್ಸ್ ಹೂಡಿಕೆಯ ಮೊದಲ ಆಯ್ಕೆ ಚಿನ್ನ.
ಸರ್ವೆಯಲ್ಲಿ ಬಯಲಾದ ರಹಸ್ಯ
ಭಾರತದ ಶೇಕಡಾ 62ರಷ್ಟು ಜೆನ್‌ಝಿ ಹಾಗೂ ಮಿಲೇನಿಯಲ್ಸ್ (ಯುವ ಸಮೂಹ) ಚಿನ್ನದ ಮೇಲೆ ಹೂಡಿಕೆಯನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿದೆ ಎಂದು ಸ್ಮೈಟನ್ ಪಲ್ಸ್ ಎಐ ಸರ್ವೇ ಹೇಳಿದೆ. ಮಾರುಕಟ್ಟೆಯಲ್ಲಿ ಅದೆಷ್ಟೇ ಏರಿತಳಗಳಾದರೂ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಯುವ ಸಮೂಹ ನಂಬಿದೆ.
ಚಿನ್ನದ ಮೇಲೆ ಹೂಡಿಕೆ
ಆಭರಣ ರೂಪದ ಚಿನ್ನದ ಮೇಲಿನ ಹೂಡಿಕೆಗಿಂತ ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್, ಸಾವರಿನ್ ಗೋಲ್ಡ್ ಬಾಂಡ್ ರೂಪದಲ್ಲಿ ಹೂಡಿಕೆಗೆ ಲಭ್ಯವಿದೆ. ಜೊತೆಗೆ ಚಿನ್ನದ ಮೇಲಿನ ಗಣನೀಯ ಏರಿಕೆ, ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಇದು ಜೆನ್‌ಝಿ ಹಾಗೂ ಮಿಲೇನಿಯಲ್ಸ್ ಚಿನ್ನದ ಹೂಡಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಮಾಡಿದೆ ಎಂದು ಸರ್ವೆಯಲ್ಲಿ ಯುವ ಸಮೂಹ ಹೇಳಿದೆ.
ಲಿಕ್ವಿಡಿಟಿ ಶಕ್ತಿ
ಚಿನ್ನದ ಮೇಲಿನ ಹೂಡಿಕೆಯಲ್ಲಿನ ಮತ್ತೊಂದು ಪ್ರಮುಖ ಅಂಶ ಎಂದರೆ ತಕ್ಷಣಕ್ಕೆ ಹಣದ ಅವಶ್ಯಕತೆ ಬಂದರೆ ಚಿನ್ನವನ್ನು ಹಣವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಇನ್ನು ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇಲ್ಲ. ಖರೀದಿಸಿದರೆ ನಷ್ಟ ಇಲ್ಲವೇ ಇಲ್ಲ ಎಂದು ಯುವ ಸಮೂಹ ನಂಬಿದೆ. ಹೀಗಾಗಿ ಚಿನ್ನವನ್ನೇ ಮೊದಲ ಆಯ್ಕೆಯಾಗಿ ಮಾಡಿಕೊಂಡಿದೆ.
ಮದುವೆವರೆಗೆ ಕಾಯಲ್ಲ
ವಿಶೇಷವಾಗಿ ಈಗಿನ ಯುವ ಸಮೂಹ ಮದುವೆವರೆಗೆ ಚಿನ್ನ ಖರೀದಿಸಲು ಕಾಯಲ್ಲ, ಇದರ ಬದಲಾಗಿ ಚಿನ್ನ ಮೇಲೆ ವಿವಿಧ ರೂಪದಲ್ಲಿ ಹೂಡಿಕೆ ಮಾಡುತ್ತದೆ. ಇದರಿಂದ ಯುವ ಸಮೂಹ ಆರಂಭದಿಂದಲೇ ಸುರಕ್ಷಿತ ಹೂಡಿಕೆ ಹಾಗೂ ಲಾಭದತ್ತ ಗಮನಹರಿಸಿದೆ ಎಂದು ಸರ್ವೇ ಹೇಳಿದೆ.
ಮದುವೆವರೆಗೆ ಕಾಯಲ್ಲ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

