MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಬೆಂಗಳೂರಿನ ಐಟಿ ಹಬ್‌ಗೆ ಪ್ರಧಾನ ಕಚೇರಿ ಸ್ಥಳಾಂತರಿಸಿದ ಸ್ವಿಗ್ಗಿ: 4 ಮಹಡಿಯ ಪರಿಸರ ಸ್ನೇಹಿ ಕ್ಯಾಂಪಸ್‌ ವಿಶೇಷತೆಗಳಿವು

ಬೆಂಗಳೂರಿನ ಐಟಿ ಹಬ್‌ಗೆ ಪ್ರಧಾನ ಕಚೇರಿ ಸ್ಥಳಾಂತರಿಸಿದ ಸ್ವಿಗ್ಗಿ: 4 ಮಹಡಿಯ ಪರಿಸರ ಸ್ನೇಹಿ ಕ್ಯಾಂಪಸ್‌ ವಿಶೇಷತೆಗಳಿವು

ಪ್ರಮುಖ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತನ್ನ ಹೊಸ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ತೆರೆದಿದೆ. 'ದಿ ಎವೆರಿಡೇ ಎನೇಬಲರ್' ಪರಿಕಲ್ಪನೆಯಡಿ ನಿರ್ಮಿಸಲಾದಪರಿಸರ ಸ್ನೇಹಿ ಕ್ಯಾಂಪಸ್, ಶೇ. 85ರಷ್ಟು ಹಳೆಯ ವಸ್ತುಗಳ ಮರುಬಳಕೆ, ವಿದ್ಯುತ್ ಉಳಿತಾಯವನ್ನು ಹೊಂದಿದೆ.

2 Min read
Author : Gowthami K
Published : Apr 20 2026, 02:48 PM IST
Share this Photo Gallery
  • FB
  • TW
  • Linkdin
  • Whatsapp
16
ಪರಿಸರ ಸ್ನೇಹಿ ನೂತನ ಕ್ಯಾಂಪಸ್‌ನ ವಿಶೇಷತೆಗಳೇನು?
Image Credit : x

ಪರಿಸರ ಸ್ನೇಹಿ ನೂತನ ಕ್ಯಾಂಪಸ್‌ನ ವಿಶೇಷತೆಗಳೇನು?

ಬೆಂಗಳೂರು:  ಪ್ರಮುಖ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್‌ಫಾರ್ಮ್ 'ಸ್ವಿಗ್ಗಿ' ತನ್ನ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೆಂಗಳೂರಿನ ಐಟಿ ಕಾರಿಡಾರ್ 'ವೈಟ್‌ಫೀಲ್ಡ್‌'ಗೆ ಸ್ಥಳಾಂತರಿಸಿದೆ. ಉದ್ಯೋಗಿಗಳ ಯೋಗಕ್ಷೇಮ ಮತ್ತು ಕಂಪನಿಯ ಮುಂದಿನ ಹಂತದ ಬೃಹತ್ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅತ್ಯಾಧುನಿಕ ಕ್ಯಾಂಪಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

26
'ದಿ ಎವೆರಿಡೇ ಎನೇಬಲರ್' ಪರಿಕಲ್ಪನೆ
Image Credit : x

'ದಿ ಎವೆರಿಡೇ ಎನೇಬಲರ್' ಪರಿಕಲ್ಪನೆ

ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ವಿಗ್ಗಿ, ತನ್ನ ಹೊಸ ಕಚೇರಿಯನ್ನು "ದಿ ಎವೆರಿಡೇ ಎನೇಬಲರ್" ಎಂಬ ಪರಿಕಲ್ಪನೆಯಡಿ ವಿನ್ಯಾಸಗೊಳಿಸಿದೆ. ಕಚೇರಿಯ ಒಳಾಂಗಣವು ಸ್ವಿಗ್ಗಿಯ ಕಾರ್ಯವೈಖರಿಯನ್ನು ಪ್ರತಿಬಿಂಬಿಸುವಂತಿದ್ದು, ಡೆಲಿವರಿ ಪಾರ್ಟ್‌ನರ್ಸ್, ರೆಸ್ಟೋರೆಂಟ್ ಪಾಲುದಾರರು ಹಾಗೂ ಗ್ರಾಹಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ‘ದಿ ಸ್ಟ್ರೀಟ್ ಲಾಜಿಸ್ಟಿಕ್ಸ್ ಹಬ್’, ‘ದಿ ಕ್ಯುಲಿನರಿ ನೈಬರ್‌ಹುಡ್’, ಮತ್ತು ‘ಡಾರ್ಕ್ ಸ್ಟೋರ್ ಕಿಚನ್’ ಎಂಬ ವಿಶಿಷ್ಟ ವಲಯಗಳನ್ನು ಸೃಷ್ಟಿಸಲಾಗಿದೆ.

Related Articles

Related image1
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಆಹಾರದ ಹೊಸ ಅಧ್ಯಾಯ, ಸ್ವಿಗ್ಗಿ ಜತೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್!
Related image2
ತಾನು ಆರ್ಡರ್ ಮಾಡಿದ ಪೊಂಗಲ್‌ಗೆ ಹೆಚ್ಚು ಬೆಲೆ ಚಾರ್ಜ್ ಮಾಡಿದ್ದಕ್ಕೆ ಸ್ವಿಗ್ಗಿ ವಿರುದ್ಧ ಮಾಜಿ ಸಂಸದೆ ಸುಮಲತಾ ಆಕ್ರೋಶ
36
ನಾಲ್ಕು ಮಹಡಿಗಳಲ್ಲಿ ಎಲ್ಲಾ ವಿಭಾಗ
Image Credit : iSTOCK

ನಾಲ್ಕು ಮಹಡಿಗಳಲ್ಲಿ ಎಲ್ಲಾ ವಿಭಾಗ

ಒಟ್ಟು ನಾಲ್ಕು ಮಹಡಿಗಳಲ್ಲಿ ಹರಡಿಕೊಂಡಿರುವ ಈ ಬೃಹತ್ ಕ್ಯಾಂಪಸ್‌ನಲ್ಲಿ ಫುಡ್ ಡೆಲಿವರಿ, ಕ್ವಿಕ್ ಕಾಮರ್ಸ್, ಡೈನಿಂಗ್ ಔಟ್ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಸ್ವಿಗ್ಗಿಯ ಎಲ್ಲಾ ವಿಭಾಗಗಳನ್ನು ಒಂದೇ ಸೂರಿನಡಿ ತರಲಾಗಿದೆ. ಉದ್ಯೋಗಿಗಳಿಗಾಗಿ ಮೀಟಿಂಗ್ ರೂಮ್‌ಗಳು, ಆಂಫಿಥಿಯೇಟರ್ ಶೈಲಿಯ ಕಲಿಕಾ ಕೇಂದ್ರಗಳು, ದೊಡ್ಡ ಕೆಫೆಟೇರಿಯಾ, ಮನರಂಜನಾ ವಲಯಗಳು ಮತ್ತು ವೆಲ್‌ನೆಸ್ (ಆರೋಗ್ಯ) ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

"ಸ್ವಿಗ್ಗಿಯ ಈ ಹೊಸ ಪ್ರಧಾನ ಕಚೇರಿಯು ನಮ್ಮ ಗುರುತು ಮತ್ತು ನಾವು ಸಾಗುತ್ತಿರುವ ಗುರಿಯ ಪ್ರತಿಬಿಂಬವಾಗಿದೆ. ನಮ್ಮ ತಂಡಗಳನ್ನು ಮತ್ತಷ್ಟು ಹತ್ತಿರ ತರಲು, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸೃಜನಶೀಲತೆ ಹಾಗೂ ಹೊಣೆಗಾರಿಕೆಯ ಸಂಸ್ಕೃತಿಯನ್ನು ಬೆಳೆಸಲು ಈ ಕ್ಯಾಂಪಸ್ ಅನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಸ್ವಿಗ್ಗಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್ಆರ್‌ಒ) ಗಿರೀಶ್ ಮೆನನ್ ತಿಳಿಸಿದ್ದಾರೆ.

46
ಶೇ. 85ರಷ್ಟು ಹಳೆಯ ವಸ್ತುಗಳ ಮರುಬಳಕೆ!
Image Credit : our own

ಶೇ. 85ರಷ್ಟು ಹಳೆಯ ವಸ್ತುಗಳ ಮರುಬಳಕೆ!

ಕಾರ್ಪೊರೇಟ್ ವಲಯದಲ್ಲಿ ಹೊಸ ಕಚೇರಿಗೆ ಹೋಗುವಾಗ ಹಳೆಯ ವಸ್ತುಗಳನ್ನು ಎಸೆಯುವ ಸಂಸ್ಕೃತಿಗೆ ಬ್ರೇಕ್ ಹಾಕಿರುವ ಸ್ವಿಗ್ಗಿ, ತನ್ನ ಹಿಂದಿನ 'ಔಟರ್ ರಿಂಗ್ ರೋಡ್' ಕಚೇರಿಯ ಶೇ. 85ರಷ್ಟು ಪೀಠೋಪಕರಣಗಳು ಮತ್ತು ವಸ್ತುಗಳನ್ನು ಮರುಬಳಕೆ ಮಾಡಿದೆ. ಸಂಪೂರ್ಣವಾಗಿ ಮರುಬಳಕೆಯಾಗುವ ವಸ್ತುಗಳಿಂದಲೇ ನಿರ್ಮಾಣವಾಗಿರುವ ಈ ಕ್ಯಾಂಪಸ್, ಜಾಗತಿಕ ಪರಿಸರ ಮಾನ್ಯತೆಗಳಾದ ಲೀಡ್‌ (LEED), ವೆಲ್‌ (WELL) ಮತ್ತು IGBC ಗುಣಮಟ್ಟವನ್ನು ಹೊಂದಿದೆ.

56
ಪೇಪರ್ ಮುಕ್ತ ಡಿಜಿಟಲ್ ಕಾರ್ಯವೈಖರಿ
Image Credit : our own

ಪೇಪರ್ ಮುಕ್ತ ಡಿಜಿಟಲ್ ಕಾರ್ಯವೈಖರಿ

ಸ್ಮಾರ್ಟ್ ತಂತ್ರಜ್ಞಾನದ ಅಳವಡಿಕೆಯಿಂದ ಶೇ. 25ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಕಚೇರಿಯಾದ್ಯಂತ ಗಾಳಿಯನ್ನು ಶುದ್ಧೀಕರಿಸುವ ಗಿಡಗಳನ್ನು ನೆಡಲಾಗಿದ್ದು, ಪೇಪರ್ ಮುಕ್ತ ಡಿಜಿಟಲ್ ಕಾರ್ಯವೈಖರಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಚೇರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸ್ಥಳದಲ್ಲೇ ವಿಂಗಡಿಸುವ ಮೂಲಕ ಪ್ರತಿದಿನ ಸುಮಾರು 17 ಕೆ.ಜಿ. ತ್ಯಾಜ್ಯ ಭೂಮಿಗೆ ಸೇರುವುದನ್ನು ತಪ್ಪಿಸಲಾಗುತ್ತಿದೆ.

66
ವಾಶ್‌ರೂಮ್‌ಗಳಲ್ಲಿ ವಾಟರ್ ಡ್ಯಾಶ್‌ಬೋರ್ಡ್!
Image Credit : our own

ವಾಶ್‌ರೂಮ್‌ಗಳಲ್ಲಿ ವಾಟರ್ ಡ್ಯಾಶ್‌ಬೋರ್ಡ್!

ಜಲ ಸಂರಕ್ಷಣೆಗೂ ಒತ್ತು ನೀಡಿರುವ ಸ್ವಿಗ್ಗಿ, ನೀರಿನ ಬಳಕೆಯನ್ನು ತಗ್ಗಿಸಲು ಲೋ-ಫ್ಲೋ ಫಿಕ್ಸ್ಚರ್‌ಗಳನ್ನು ಅಳವಡಿಸಿದೆ. ಇದರ ಜೊತೆಗೆ, ವಾಶ್‌ರೂಮ್‌ಗಳಲ್ಲಿ ರಿಯಲ್-ಟೈಮ್ ಮಾನಿಟರಿಂಗ್ ಡ್ಯಾಶ್‌ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು, ಉದ್ಯೋಗಿಗಳಿಗೆ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಾಡಲಾಗಿದೆ.

ವೈಟ್‌ಫೀಲ್ಡ್‌ಗೆ ಸ್ಥಳಾಂತರಗೊಂಡಿರುವುದರಿಂದ ಬೆಂಗಳೂರಿನ ಪ್ರಮುಖ ಟೆಕ್ ಮತ್ತು ಬಿಸಿನೆಸ್ ಕಾರಿಡಾರ್‌ಗೆ ಸ್ವಿಗ್ಗಿ ಇನ್ನಷ್ಟು ಹತ್ತಿರವಾಗಿದೆ. ಭವಿಷ್ಯದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಲು ಮತ್ತು ಕಂಪನಿಯ ಮೂಲಸೌಕರ್ಯ ಅಭಿವೃದ್ಧಿಗೆ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸ್ವಿಗ್ಗಿ
ಆಹಾರ
ಸುದ್ದಿ
ಬೆಂಗಳೂರು
ವ್ಯವಹಾರ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಕೇವಲ ಒಂದು ಲಕ್ಷಯಿದ್ರೆ ಸಾಕು, ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಹಣ ಗಳಿಸಿ!
Recommended image2
ಮಿಯಾಝಾಕಿ ಮಾವು ನಮ್ಮ ಸೇಂದೂರಕ್ಕೂ ಸಮವಲ್ಲ, ಇದು ಶಿಫಾರಸು ತಳಿ ಅಲ್ಲ; ರೈತರಿಗೆ ಎಚ್ಚರಿಕೆ ಕೊಟ್ಟ IIHR ವಿಜ್ಞಾನಿಗಳು
Recommended image3
ಕರ್ನಾಟಕದ ಹೊಸ ಮದ್ಯದ ನೀತಿ ಎಫೆಕ್ಟ್: ಮದ್ಯದ ಕಂಪನಿಗಳ ಷೇರು ಮೌಲ್ಯ ಶೇ.3ರಷ್ಟು ಏರಿಕೆ; ಮೈಲ್ಡ್‌ ಬಿಯರ್‌ ಬೆಲೆ ಇಳಿಕೆ
Related Stories
Recommended image1
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಆಹಾರದ ಹೊಸ ಅಧ್ಯಾಯ, ಸ್ವಿಗ್ಗಿ ಜತೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್!
Recommended image2
ತಾನು ಆರ್ಡರ್ ಮಾಡಿದ ಪೊಂಗಲ್‌ಗೆ ಹೆಚ್ಚು ಬೆಲೆ ಚಾರ್ಜ್ ಮಾಡಿದ್ದಕ್ಕೆ ಸ್ವಿಗ್ಗಿ ವಿರುದ್ಧ ಮಾಜಿ ಸಂಸದೆ ಸುಮಲತಾ ಆಕ್ರೋಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved