ವರಮಹಾಲಕ್ಷ್ಮೀ ಹಬ್ಬದಂದು ಎಷ್ಟಿದೆ ಚಿನ್ನದ ಬೆಲೆ? ಬೆಳ್ಳಿ ದರ ಕಡಿಮೆಯಾಗಿದ್ಯಾ?
Gold And Silver Price Today: ವರಮಹಾಲಕ್ಷ್ಮೀ ಹಬ್ಬದಂದು ಚಿನ್ನ ಖರೀದಿ ಶುಭ ಎಂದು ಹೇಳಲಾಗುತ್ತದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ಮಾಹಿತಿಯನ್ನು ಈ ಲೇಖನ ಒದಗಿಸುತ್ತದೆ. ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಯನ್ನು ಸಹ ಇಲ್ಲಿ ನೀಡಲಾಗಿದೆ.

ಇಂದು ವರಮಹಾಲಕ್ಷ್ಮೀ ಹಬ್ಬ. ಈ ಹಬ್ಬದಂದು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಚಿನ್ನಾಭರಣಗಳಿಂದ ಪೂಜಿಸಿ, ಮನೆಯಲ್ಲಿ ನೆಲೆಸುವಂತೆ ಪ್ರಾರ್ಥನೆ ಮಾಡಿಕೊಳ್ಳಲಾಗುತ್ತದೆ. ಈ ಹಬ್ಬದಂದು ಚಿನ್ನ ಖರೀದಿ ಒಳ್ಳೆಯದು ಎಂದು ಹೇಳುತ್ತಾರೆ. ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
ಮಾರುಕಟ್ಟೆ ಏರಿಳಿತದಂತೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ. ಹಾಗೆಯೇ ಒಂದು ನಗರದಿಂದ ಮತ್ತೊಂದು ನಗರಕ್ಕೆ ಚಿನ್ನದ ಬೆಲೆ ಬೇರೆ ಬೇರೆಯಾಗಿರುತ್ತದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,470 ರೂಪಾಯಿ
8 ಗ್ರಾಂ: 75,760 ರೂಪಾಯಿ
10 ಗ್ರಾಂ: 94,700 ರೂಪಾಯಿ
100 ಗ್ರಾಂ: 9, 47,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,331 ರೂಪಾಯಿ
8 ಗ್ರಾಂ: 82,648 ರೂಪಾಯಿ
10 ಗ್ರಾಂ: 1,03,310 ರೂಪಾಯಿ
100 ಗ್ರಾಂ: 10,33,100 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ. ಚೆನ್ನೈ: 94,700 ರೂಪಾಯಿ, ಮುಂಬೈ: 94,700 ರೂಪಾಯಿ, ದೆಹಲಿ: 94,850 ರೂಪಾಯಿ, ಕೋಲ್ಕತ್ತಾ: 94,700 ರೂಪಾಯಿ, ಬೆಂಗಳೂರು: 94,700 ರೂಪಾಯಿ, ಹೈದರಾಬಾದ್: 94,700 ರೂಪಾಯಿ, ವಡೋದರ: 94,750 ರೂಪಾಯಿ, ಅಹಮದಾಬಾದ್: 94,750 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ವರಮಹಾಲಕ್ಷ್ಮೀ ದಿನದಂದು ದೇಶದಲ್ಲಿ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ
10 ಗ್ರಾಂ: 1,170 ರೂಪಾಯಿ
100 ಗ್ರಾಂ: 11,700 ರೂಪಾಯಿ
1000 ಗ್ರಾಂ: 1,17,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

