- Home
- Business
- Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ
Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ
ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಮಾಡಿದ ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ. ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಿದ್ದವರಿಗೆ ಮತ್ತೆ ಉದ್ಯೋಗಾವಕಾಶ ನೀಡುವುದಾಗಿ ಅವರು ಹೇಳಿದ್ದರು. ಇದಕ್ಕೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ.

ಝೊಮ್ಯಾಟೋ ಮಾಲೀಕ ದೀಪಿಂದರ್ ಗೋಯಲ್ ಆಫರ್
ಝೊಮ್ಯಾಟೋ ಮಾಲೀಕ ದೀಪಿಂದರ್ ಗೋಯಲ್ ಮಾಡಿದ ಒಂದು ಕೆಲಸಕ್ಕೆ ಅವರಿಗೆ ಅನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿದೆ. ಈ ಘೋಷಣೆ ಉದ್ಯಮ ಜಗತ್ತಿನಲ್ಲಿ, ವಿಶೇಷವಾಗಿ ಸ್ಟಾರ್ಟ್‌ಅಪ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಆಶ್ಚರ್ಯಚಕಿತರಾದ ದೀಪಿಂದರ್ ಗೋಯಲ್
ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಿದ ಪ್ರತಿಭಾವಂತ ಉದ್ಯೋಗಿಗಳು ಹಿಂತಿರುಗಬೇಕೆಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಕರೆ ನೀಡಿದ್ದರು. ಇದಕ್ಕಾಗಿ ವಿಶೇಷ ಇಮೇಲ್ ಐಡಿಯನ್ನೂ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ, ಸುಮಾರು 8,000 ಇಮೇಲ್‌ಗಳು ಬಂದಿವೆ. ಇದನ್ನು ನೋಡಿ ತಾವೇ ಆಶ್ಚರ್ಯಚಕಿತರಾಗಿದ್ದಾಗಿ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಬಂದ ಇಮೇಲ್ ಪೈಕಿ 4,000 ಮಾಜಿ ಉದ್ಯೋಗಿಗಳವು
ಬಂದ ಇಮೇಲ್‌ಗಳಲ್ಲಿ ಸುಮಾರು 4,000 ಮಾಜಿ ಉದ್ಯೋಗಿಗಳಿಂದ ಬಂದಿದ್ದವು. ಉಳಿದ 4,000 ಇಮೇಲ್‌ಗಳು ಹೊಸದಾಗಿ ಕಂಪನಿ ಸೇರಲು ಆಸಕ್ತಿ ತೋರಿದವರಿಂದ ಬಂದಿವೆ ಎಂದು ದೀಪಿಂದರ್ ಗೋಯಲ್ ತಿಳಿಸಿದ್ದಾರೆ.
ಭಾವುಕರಾದ ಝೊಮ್ಯಾಟೋ ಸಿಇಒ
ಹಳೆಯ ಉದ್ಯೋಗಿಗಳು ಕಳುಹಿಸಿದ ಇಮೇಲ್‌ಗಳನ್ನು ಓದುವಾಗ ತುಂಬಾ ಭಾವುಕನಾದೆ ಎಂದಿದ್ದಾರೆ. ಕಂಪನಿಯ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು, ಒಟ್ಟಿಗೆ ಕೆಲಸ ಮಾಡಿದ ಅನುಭವಗಳು ಮತ್ತು ಆ ದಿನಗಳ ನೆನಪುಗಳನ್ನು ಅವರು ವಿವರಿಸಿದ್ದಾರೆ. ಇವುಗಳನ್ನು ಓದುವಾಗ ಹೆಮ್ಮೆಯೆನಿಸಿತು ಎಂದು ಗೋಯಲ್ ಹೇಳಿದ್ದಾರೆ.
ತಾವೇ ಖುದ್ದಾಗಿ ಮೇಲ್ ಓದುತ್ತಿರುವ ಝೊಮ್ಯಾಟೋ ಸಿಇಒ
ಗೋಯಲ್ ನಿರ್ಧಾರ ಸ್ವಾಗತಿಸಿದ ನೆಟ್ಟಿಗರು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

