- Home
- Entertainment
- Cine World
- ಸ್ವರ್ಗದಲ್ಲಿ ನಟ Dharmendra: ನಿಧನದ ಬಳಿಕ ಸ್ನೇಹಿತರ ಭೇಟಿ: ಮನಮುಟ್ಟುವ AI ವಿಡಿಯೋ ವೈರಲ್
ಸ್ವರ್ಗದಲ್ಲಿ ನಟ Dharmendra: ನಿಧನದ ಬಳಿಕ ಸ್ನೇಹಿತರ ಭೇಟಿ: ಮನಮುಟ್ಟುವ AI ವಿಡಿಯೋ ವೈರಲ್
ಹಿರಿಯ ನಟ ಧರ್ಮೇಂದ್ರ ಅವರ ನಿಧನದ ನಂತರ, ಅಕ್ಟೋಬರ್‌ನಲ್ಲಿ ನಿಧನರಾದ ಸತೀಶ್ ಷಾ, ಗೋವರ್ಧನ್ ಅರ್ಸಾನಿ ಮತ್ತು ಪಂಕಜ್ ಧೀರ್ ಅವರನ್ನು ಸ್ವರ್ಗದಲ್ಲಿ ಭೇಟಿಯಾಗುವ ಎಐ-ರಚಿತ ವಿಡಿಯೋವೊಂದು ರಚನೆಯಾಗಿದೆ. ಈ ನಾಲ್ವರು ನಟರು ಸ್ವರ್ಗದಲ್ಲಿ ಸಂತೋಷವಾಗಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಸಂಭ್ರಮದ ನಡುವೆಯೇ ನಿಧನ
ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಅವರು ನಿನ್ನೆ (ನವೆಂಬರ್ 24) ನಿಧನರಾದರು. ಅವರ ಶೋಲೆ ಚಿತ್ರದ 50ನೇ ವರ್ಷಾಚರಣೆಗೆ ಸಕಲ ಸಿದ್ಧತೆ ನಡೆದಿರುವ ಮುನ್ನವೇ ಅವರು ವಿಧಿವಶರಾಗಿ ಬಿಟ್ಟರು.
ನಾಲ್ವರು ಖ್ಯಾತ ನಟರನ್ನು ಕಳೆದುಕೊಂಡ ಬಾಲಿವುಡ್
ಆದರೆ, ಬಾಲಿವುಡ್ಗೆ ಈ ವರ್ಷ ತುಂಬಾ ಆಘಾತ ಕೊಟ್ಟಿದೆ. ಧರ್ಮೇಂದ್ರ ಅವರ ಅಗಲಿಕೆಯ ಮುನ್ನ ಕಳೆದ ಅಕ್ಟೋಬರ್‌ನಲ್ಲಿ ಮೂವರು ಖ್ಯಾತ ಬಾಲಿವುಡ್ನ ಹಿರಿಯ ನಟರ ನಿಧನವಾಗಿದೆ.
ಬಾಲಿವುಡ್ಗೆ ಅಕ್ಟೋಬರ್ ಶಾಕ್
ಖ್ಯಾತ ಹಾಸ್ಯ ನಟರಾಗಿದ್ದ ಸತೀಶ್ ಷಾ, ಗೋವರ್ಧನ್ ಅರ್ಸಾನಿ ಹಾಗೂ ಮಹಾಭಾರತದಲ್ಲಿ ಕರ್ಣನ ಪಾತ್ರದ ಮೂಲಕ ಫೇಮಸ್ ಆಗಿದ್ದ ನಟ ಪಂಕಜ್ ಧೀರ್ ಅವರು ಅಕ್ಟೋಬರ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮೂವರು ನಟರ ನಿಧನ
ಅಕ್ಟೋಬರ್ 15ರಂದು ಪಂಕಜ್ ಧೀರ್, ಅಕ್ಟೊಭರ್ 20ರಂದು ಗೋವರ್ಧನ್ ಅರ್ಸಾನಿ ಹಾಗೂ 25ರಂದು ಸತೀಶ್ ಷಾ ಅವರು ಮೃತಪಟ್ಟಿದ್ದಾರೆ.
ಎಐ ವಿಡಿಯೋ
ಈಗ ಈ ಎಲ್ಲಾ ನಟರು ಸ್ವರ್ಗದಲ್ಲಿ ಭೇಟಿಯಾಗುವ ರೀತಿಯ ಎಐ ವಿಡಿಯೋ ರಚಿಸಲಾಗಿದೆ. ಧರ್ಮೇಂದ್ರ ಅವರು ಆಸ್ಪತ್ರೆಯ ಹಾಸಿಗೆಯಿಂದ ಮೇಲೆ ಎದ್ದು, ಸ್ವರ್ಗದ ಹಾದಿಯಲ್ಲಿ ಇದ್ದಾರೆ. ಅಲ್ಲಿ ಅವರನ್ನು ಕಳೆದ ತಿಂಗಳು ನಿಧನರಾದ ನಟರು ಸ್ವಾಗತಿಸುತ್ತಿರುವಂತೆ ವಿಡಿಯೋ ಮಾಡಲಾಗಿದೆ.
ಅಭಿಮಾನಿಗಳ ಹಾರೈಕೆ
ಇಲ್ಲಿ ಈ ನಾಲ್ವರು ನಟರು ಸೇರಿ ಮಾತುಕತೆ ನಡೆಸುತ್ತಿರುವಂತೆ ತೋರಿಸಲಾಗಿದೆ. ನಾಲ್ವರು ನಟರು ಸ್ವರ್ಗದಲ್ಲಿ ಇದೇ ರೀತಿ ಖುಷಿಯಾಗಿ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಮಿಸ್ಟರ್ ಹೆಲ್ರಾಕರ್ ಎನ್ನುವವರು ಶೇರ್ ಮಾಡಿರುವ ಈ ವಿಡಿಯೋದ ಲಿಂಕ್ ಇಲ್ಲಿದೆ
https://www.instagram.com/reel/DRcI5CFjxTn/?utm_source=ig_web_copy_link&igsh=NTc4MTIwNjQ2YQ==
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

