- Home
- Entertainment
- Cine World
- ಆ ಸಿನಿಮಾ ಮಾಡಿ ತಪ್ಪು ಮಾಡಿದೆ, ಹೇಳಿದ್ದೊಂದು, ಮಾಡಿದ್ದೆ ಇನ್ನೊಂದು: ರಸಿಕ ನಟಿ ಭಾನುಪ್ರಿಯಾ ಶಾಕಿಂಗ್ ಕಾಮೆಂಟ್!
ಆ ಸಿನಿಮಾ ಮಾಡಿ ತಪ್ಪು ಮಾಡಿದೆ, ಹೇಳಿದ್ದೊಂದು, ಮಾಡಿದ್ದೆ ಇನ್ನೊಂದು: ರಸಿಕ ನಟಿ ಭಾನುಪ್ರಿಯಾ ಶಾಕಿಂಗ್ ಕಾಮೆಂಟ್!
ಹಿರಿಯ ನಟಿ ಭಾನು ಪ್ರಿಯಾ ಅವರು ತಾವು ನಟಿಸಿದ ಸಿನಿಮಾಗಳ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಇಷ್ಟವಿಲ್ಲದೆ ಕೆಲವು ಸಿನಿಮಾಗಳನ್ನು ಮಾಡಿದ್ದೇನೆ, ಮಾಡಿದ ಮೇಲೆ ತಪ್ಪು ಮಾಡಿದ ಭಾವನೆ ಬಂತು ಎಂದಿದ್ದಾರೆ.

ಭಾನುಪ್ರಿಯಾ ಒಮ್ಮೆ ಸ್ಟಾರ್ ನಟಿಯಾಗಿ ಮಿಂಚಿದವರು. `ಸಿತಾರ` ಆಗಿ ತೆಲುಗು ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದರು. ಈಗಿನ ಹಿರಿಯ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಬಹಳ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದಾರೆ. ಗ್ಲಾಮರಸ್ ಆಗಿಯೂ, ಟ್ರೆಡಿಷನಲ್ ಆಗಿಯೂ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಹೆಚ್ಚಾಗಿ ಸಂಪ್ರದಾಯಗಳಿಗೆ ದೊಡ್ಡ ಪೀಠ ಹಾಕುತ್ತಾ ಬಹಳಷ್ಟು ಗುರುತಿಸಿಕೊಂಡಿದ್ದಾರೆ.
ಭಾನುಪ್ರಿಯಾ ಈಗ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಕಥಾ ಬಲ ಇರುವ ಚಿತ್ರಗಳು, ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಮೂವೀಸ್ ಮಾತ್ರ ಮಾಡ್ತಾರೆ. ಅದು ಕೂಡ ಅಪರೂಪಕ್ಕೆ. ಆದರೆ ಕೆಲವು ಸಿನಿಮಾಗಳನ್ನು ಮಾಡಿ ತಪ್ಪು ಮಾಡಿದೆ ಅಂತ ಹೇಳಿದ್ದಾರೆ ಭಾನು ಪ್ರಿಯಾ. ಆ ಸಿನಿಮಾಗಳ ವಿಚಾರದಲ್ಲಿ ತನಗೆ ಹೇಳಿದ್ದು ಒಂದು ಮಾಡಿದ್ದು ಇನ್ನೊಂದು ಅಂತ, ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಅಂತ ಹೇಳಿದ್ದಾರೆ. ಅವುಗಳನ್ನು ಇಷ್ಟ ಇಲ್ಲದೆ ಮಾಡಿದೀನಿ ಅಂತ ತಿಳಿಸಿದ್ದಾರೆ.
ಭಾನುಪ್ರಿಯಾ ಮಾಡಿ ತಪ್ಪು ಮಾಡಿದೆ ಅಂತ ಬೇಜಾರು ಪಟ್ಟ ಮೂವಿ ಇತ್ತೀಚೆಗೆ ಬಂದ `ನಾಟ್ಯಂ` (2021). ರೇವಂತ್ ಕೋರುಕೊಂಡ ನಿರ್ದೇಶನ ಮಾಡಿದ ಈ ಮೂವಿಯಲ್ಲಿ ಕ್ಲಾಸಿಕಲ್ ಡಾನ್ಸರ್ ಸಂಧ್ಯಾ ರಾಜು ಮುಖ್ಯ ಪಾತ್ರದಲ್ಲಿ ನಟಿಸಿ, ಸಿನಿಮಾನ ನಿರ್ಮಿಸಿದ್ದಾರೆ. ಇದರಲ್ಲಿ ಸಂಧ್ಯಾರಾಜು ತಾಯಿ ಪಾತ್ರದಲ್ಲಿ ಭಾನು ಪ್ರಿಯಾ ನಟಿಸಿದ್ದಾರೆ. ಆದರೆ ತನ್ನ ಪಾತ್ರಕ್ಕೆ ದೊಡ್ಡದಾಗಿ ಪ್ರಾಮುಖ್ಯತೆ ಇಲ್ಲ ಅಂತ, ಕಥೆ ಹೇಳುವಾಗ ಪಾತ್ರ ಚೆನ್ನಾಗಿರುತ್ತೆ ಅಂತ, ಹೀಗೆ ಹಾಗೆ ಅಂತ ತುಂಬಾ ಹೇಳಿದ್ರು, ಕೊನೆಗೆ ಸೆಟ್ಗೆ ಹೋದ್ರೆ ತನ್ನ ಪಾತ್ರ ನೋಡಿ ಆಶ್ಚರ್ಯ ಆದ ಹಾಗೆ ತಿಳಿಸಿದ್ರು.
ತುಂಬಾ ಇಂಪಾರ್ಟೆಂಟ್ ಇರುವ ಪಾತ್ರ ಅಂತ, ಮಗಳನ್ನ ಎಂಕರೇಜ್ ಮಾಡುವ ಪಾತ್ರ ಅಂತ, ಆದರೆ ಕೊನೆಗೆ ನೋಡಿದ್ರೆ ಹಾಗೆ ಇರಲಿಲ್ಲ, ಆದರೆ ಮಧ್ಯದಲ್ಲಿ ನಿಲ್ಲಿಸೋಕೆ ಆಗಲ್ಲ ಅಲ್ವಾ, ಜಗಳ ಆಗುತ್ತೆ. ಯಾಕೆ ಅಂತ ಹೇಳಿ ಮಾಡಿದೆ, ಆದರೆ ಮಾಡಿದ ಮೇಲೆ ತಪ್ಪು ಮಾಡಿದ ಫೀಲಿಂಗ್ ಬಂತು ಅಂತ ಹೇಳಿದ್ದಾರೆ ಭಾನುಪ್ರಿಯಾ. ಮತ್ತೊಂದು ಸಿನಿಮಾ ವಿಚಾರದಲ್ಲಿ ಕೂಡ ಇದೇ ಆಗಿದೆ ಅಂತ ಅವರು ಹೇಳಿದ್ದಾರೆ. ತೆಲುಗು ಒನ್‌ಗೆ ಕೊಟ್ಟ ಇಂಟರ್‌ವ್ಯೂನಲ್ಲಿ ಈ ವಿಷಯವನ್ನು ಅವರು ಹೇಳಿದ್ದಾರೆ. ಅವರ ಕಾಮೆಂಟ್ಸ್ ವೈರಲ್ ಆಗ್ತಾ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.