MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ

ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ

ಹಲವು ಜನ್ಮದ ಪುಣ್ಯ, ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಬಿಗ್ ಬಾಸ್ ಖ್ಯಾತಿಯ ನಟಿ ಮನದಾಳ ಬಿಚ್ಚಿಟ್ಟಿದ್ದಾರೆ. ಹಲವು ಧರ್ಮದ ಪುಣ್ಯಗಳಿಂದ ನನಗೆ ಸನಾತನ ಧರ್ಮದಲ್ಲಿರುವ ಸಾಧ್ಯವಾಗಿದೆ ಎಂದಿದ್ದಾರೆ.

2 Min read
Author : Chethan Kumar
Published : Feb 17 2026, 11:23 PM IST
Share this Photo Gallery
  • FB
  • TW
  • Linkdin
  • Whatsapp
16
ಬಿಗ್ ಬಾಸ್ ಖ್ಯಾತಿಯ ನಟಿ ಹಿಂದೂ ಆಗಿದ್ದು ಹೇಗೆ
Image Credit : our own

ಬಿಗ್ ಬಾಸ್ ಖ್ಯಾತಿಯ ನಟಿ ಹಿಂದೂ ಆಗಿದ್ದು ಹೇಗೆ

ಬಿಗ್ ಬಾಸ್, ಸಿನಿಮಾ, ಸೀರಿಯಲ್ ಮೂಲಕ ಭಾರಿ ಜನಪ್ರಿಯರಾಗಿರುವ ನಟಿ ತಾವು ಇಸ್ಲಾಂನಿಂದ ಹಿಂದೂ ಆಗಿ ಮತಾಂತರಗೊಂಡ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾರೆ. ಇದು ನನ್ನ ಹಲವು ಜನ್ಮಗಳ ಪುಣ್ಯ ಎಂದಿದ್ದಾರೆ. ಹೌದು, ಸಬೀನಾ ಅಬ್ದುಲ್ ಲತೀಫ್ ಈಗ ಜನಪ್ರಿಯ ಲಕ್ಷ್ಮಿ ಪ್ರಿಯಾ ಎಂದೇ ಗುರುತಿಸಿಕೊಂಡಿದ್ದಾರೆ. ಮಲೆಯಾಳಂ ನಟಿಯ ಮತಾಂತರದ ರೋಚಕ ಘಟನೆ ಇಲ್ಲಿದೆ.

26
ಮುಸ್ಲಿಂ ಆಗಿ ಹುಟ್ಟಿದ್ದ ಲಕ್ಷ್ಮಿ ಪ್ರಿಯಾ
Image Credit : Lakshmi Priya/ Facebook

ಮುಸ್ಲಿಂ ಆಗಿ ಹುಟ್ಟಿದ್ದ ಲಕ್ಷ್ಮಿ ಪ್ರಿಯಾ

ಸಿನಿಮಾ ಮತ್ತು ಸೀರಿಯಲ್‌ಗಳ ಮೂಲಕ ನಟನಾ ಕ್ಷೇತ್ರದಲ್ಲಿ ಹೆಸರು ಮಾಡಿದವರು ನಟಿ ಲಕ್ಷ್ಮಿಪ್ರಿಯಾ. ಬಿಗ್ ಬಾಸ್ ಮಲಯಾಳಂ ಸೀಸನ್ 4ರಲ್ಲಿ ಸ್ಪರ್ಧಿಸಿ ನಾಲ್ಕನೇ ಸ್ಥಾನವನ್ನೂ ಪಡೆದಿದ್ದರು. 2005ರಲ್ಲಿ ತೆರೆಕಂಡ ಮೋಹನ್‌ಲಾಲ್-ಜೋಷಿ ಜೋಡಿಯ 'ನರನ್' ಚಿತ್ರದ ಮೂಲಕ ಲಕ್ಷ್ಮಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟರು. ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದ ಲಕ್ಷ್ಮಿಪ್ರಿಯಾ ಅವರ ಮೊದಲ ಹೆಸರು ಸಬೀನಾ ಅಬ್ದುಲ್ ಲತೀಫ್. ಮದುವೆಗೂ ಮುನ್ನವೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಬಗ್ಗೆ ಬಿಗ್ ಬಾಸ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದೀಗ, ತಮ್ಮ ಮತಾಂತರದ ಬಗ್ಗೆ ಸಂದರ್ಶನವೊಂದರಲ್ಲಿ ಲಕ್ಷ್ಮಿಪ್ರಿಯಾ ಹಂಚಿಕೊಂಡಿರುವ ಮಾತುಗಳು ಗಮನ ಸೆಳೆಯುತ್ತಿವೆ.

Related Articles

Related image1
ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ
Related image2
ನಟಿ ಹನಿ ರೋಸ್‌ಗೆ ಬಿಗ್ ರಿಲೀಫ್: ಕೇಂದ್ರದ ಜಿಎಸ್‌ಟಿ ನೋಟಿಸ್ ಅನ್ನೇ ರದ್ದುಗೊಳಿಸಿದ ಹೈಕೋರ್ಟ್!
36
ಸನಾತನ ದೀಕ್ಷೆ ಹಲವು ಜನ್ಮಗಳ ಪುಣ್ಯ
Image Credit : our own

ಸನಾತನ ದೀಕ್ಷೆ ಹಲವು ಜನ್ಮಗಳ ಪುಣ್ಯ

ತಾನು ಮುಸ್ಲಿಂ ಆಗಿದ್ದರೂ, ಆ ಧರ್ಮದ ಸಂಪ್ರದಾಯಗಳ ಪ್ರಕಾರ ಯಾವತ್ತೂ ಬದುಕಿಲ್ಲ ಎಂದು ಲಕ್ಷ್ಮಿಪ್ರಿಯಾ ಹೇಳಿದ್ದಾರೆ. "ನಾನು ಇಲ್ಲಿಯವರೆಗೆ ಕುರಾನ್ ಓದಿಲ್ಲ, ನನಗೆ ಅರೇಬಿಕ್ ಕೂಡ ಗೊತ್ತಿಲ್ಲ. ಸನಾತನ ಧರ್ಮದ ದೀಕ್ಷೆ ಸಿಗೋದು ಒಂದೇ ಜನ್ಮದ ಪುಣ್ಯವಲ್ಲ. ನಾನು ಹಿಂದಿನ ಜನ್ಮದಲ್ಲೂ ಇದೇ ಆಗಿದ್ದೆ ಅಂತ ನನಗೆ ಅನಿಸುತ್ತೆ. ಆ ಜನ್ಮದಲ್ಲಿ ನನ್ನೊಳಗೆ ಇದ್ದಿದ್ದೇ ಈ ಜನ್ಮದಲ್ಲೂ ಹೊರಬಂದಿದೆ. ಕೆಲವೊಮ್ಮೆ 'ನಾನು ಜನ್ಮದಿಂದ ಬ್ರಾಹ್ಮಣ ಸ್ತ್ರೀ, ಆದರೂ ಲಕ್ಷ್ಮಿ ಹೇಳುವ ಹಾಗೆ ಲಲಿತಾ ಸಹಸ್ರನಾಮ ಹೇಳಲು ಆಗಲ್ಲ' ಅಂತ ಕೆಲವರು ಹೇಳುತ್ತಾರೆ. ಆದರೆ ನನಗೆ ಹಾಗಲ್ಲ. ನಾನು ಊರು ಓಣಾಟುಕರ. ನಮ್ಮ ಕಾಲದಲ್ಲಿ ಅಲ್ಲಿ ಮದುವೆ, ಸಾವು ಸಂಭವಿಸಿದಾಗ ಮಾತ್ರ ಜಾತಿ, ಧರ್ಮವನ್ನು ನೋಡುತ್ತಿದ್ದರು.

46
ಕಷ್ಟ ಆಗಲಿಲ್ಲ
Image Credit : stockPhoto

ಕಷ್ಟ ಆಗಲಿಲ್ಲ

ಧರ್ಮ ಬದಲಾಯಿಸುವಾಗ ನನಗೆ ಯಾವುದೇ ಕಷ್ಟ ಆಗಲಿಲ್ಲ. ನನ್ನ ಗಂಡ ಸಂಘದವನು, ಅದಕ್ಕೆ ನಾನು ಧರ್ಮ ಬದಲಾಯಿಸಿದೆ ಅಂತ ಕೆಲವರು ಹೇಳ್ತಾರೆ. ಆದರೆ ನನ್ನ ಪತಿಗೆ ನನ್ನ ಪ್ರೀತಿ, ಧರ್ಮ ಬದಲಾವಣೆ ಏನೂ ಗೊತ್ತಿರಲಿಲ್ಲ. ನಾನು ಸಬೀನಾ ಆಗಿರುವುದೇ ಜಯೇಶ್ ಅವರಿಗೆ ಇಷ್ಟವಾಗಿತ್ತು. ಪತಿ ಜಯೇಶ್ ಮತಾಂತರಗೊಳ್ಳಲು ಹೇಳಿಲ್ಲ, ನಾನೇ ಮತಾಂತರವಾಗಲು ಮುಂದಾದೆ. ಹೆಸರು, ಜಾತಿ ಎಲ್ಲವನ್ನೂ ಅಧಿಕೃತವಾಗಿ ಬದಲಾಯಿಸಿದೆ.

56
ಹಳೇ ಬಟ್ಟೆ ಕಳಚಿ ಹೊಸ ಬಟ್ಟೆ ಧರಿಸಿದೆ
Image Credit : our own

ಹಳೇ ಬಟ್ಟೆ ಕಳಚಿ ಹೊಸ ಬಟ್ಟೆ ಧರಿಸಿದೆ

ಮದುವೆಗೋಸ್ಕರ ಮತಾಂತರಗೊಂಡಿದ್ದು ನಿಜ. ಧರ್ಮ ಬದಲಾವಣೆ ಹಳೆಯ ಬಟ್ಟೆ ಬದಲಿಸಿ ಹೊಸ ಬಟ್ಟೆ ಧರಿಸಿದ ಅನುಭವವಾಯಿತಷ್ಟೇ. ಆ ಹಳೆ ಬಟ್ಟೆಯನ್ನು ತೊಳೆದು, ಒಣಗಿಸಿ ಎಲ್ಲೋ ಒಂದು ಕಡೆ ಇಟ್ಟಿದ್ದೇನೆ, ಅಷ್ಟೇ. ನನ್ನ ಮಗು ಅಪ್ಪನ ಸಂಸ್ಕೃತಿಯನ್ನೇ ಪಾಲಿಸಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಜಯೇಶ್ ಅವರು ನನ್ನ ಜೀವನಕ್ಕೆ ಬಂದಿರಲಿಲ್ಲ ಅಂದಿದ್ರೆ, ನಾನು ಒಬ್ಬ ಮುಸ್ಲಿಂ ಯುವಕನನ್ನು ಮದುವೆ ಆಗುತ್ತಿರಲಿಲ್ಲ ಎಂದು ಲಕ್ಷ್ಮಿಪ್ರಿಯಾ ಹೇಳಿದ್ದಾರೆ. ಅಬಾಕ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

66
ತಾಯಿ ಮನೆಯವರು ಸಂಪ್ರದಾಯಸ್ಥ ಮುಸ್ಲಿಮರು
Image Credit : our own

ತಾಯಿ ಮನೆಯವರು ಸಂಪ್ರದಾಯಸ್ಥ ಮುಸ್ಲಿಮರು

ನನ್ನ ತಾಯಿಯ ಮನೆಯವರು ಹೆಚ್ಚು ಸಂಪ್ರದಾಯಸ್ಥ ಮುಸ್ಲಿಮರು. ಆದರೆ ತಂದೆಯ ಮನೆಯವರು ಪ್ರಗತಿಪರ ಚಿಂತನೆ ಉಳ್ಳವರಾಗಿದ್ದರು. ಅವರು ಸಂಪ್ರದಾಯಸ್ಥ ಮುಸ್ಲಿಮರಾಗಿದ್ದರೂ, ಚೆಟ್ಟಿಕುಳಂಗರ ಭಗವತಿ ನಮ್ಮ ಕುಲದೇವರಂತೆ ಇದ್ದಳು. ನನ್ನ ತಂದೆಯ ತಾತ ಹರಿಪ್ಪಾಡ್ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಹರಿಪ್ಪಾಡ್ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೊದಲ ಕಾಣಿಕೆ ಎಣ್ಣೆಯನ್ನು ನಮ್ಮ ಕುಟುಂಬದಿಂದಲೇ ಕೊಡಲಾಗುತ್ತಿತ್ತು. ನಾನು ಕುರಾನ್ ಕಲಿತಿಲ್ಲ. ನನ್ನ ಅಜ್ಜಿ ಓದು-ಬರಹ ಬಾರದಿದ್ದರೂ, ಉಸ್ತಾದ್‌ರಿಂದ ಕಲಿತು ಹತ್ತು ಪುಸ್ತಕ ಓದಿದವರಾಗಿದ್ದರು. ಆದರೂ ಅವರು ನನಗೆ ಧರ್ಮವನ್ನು ಕಲಿಯುವಂತೆ ಎಂದಿಗೂ ಒತ್ತಾಯಿಸಲಿಲ್ಲ. ಅರೇಬಿಕ್ ಅಕ್ಷರಗಳು ಈಗಲೂ ನನಗೆ ಜಿಲೇಬಿ ತರಾನೇ ಕಾಣಿಸುತ್ತೆ. ನಾನು ಒಂದು ದಿನವೂ ರಂಜಾನ್ ಉಪವಾಸ ಮಾಡಿಲ್ಲ. ಮುಸ್ಲಿಂ ಸಂಪ್ರದಾಯದಂತೆ ನಾನು ಎಂದಿಗೂ ಬದುಕಿಲ್ಲ. ಅದೆಲ್ಲಾ ನನಗೆ ಯಾವತ್ತೂ ಒಗ್ಗಲೇ ಇಲ್ಲ ಎಂದು ಲಕ್ಷ್ಮಿಪ್ರಿಯಾ ವಿವರಿಸಿದ್ದಾರೆ.

ತಾಯಿ ಮನೆಯವರು ಸಂಪ್ರದಾಯಸ್ಥ ಮುಸ್ಲಿಮರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಹಿಂದೂ
ನಟಿ
ಬಿಗ್ ಬಾಸ್

Latest Videos
Recommended Stories
Recommended image1
Vijay Devarakonda ಜೊತೆ ಲಿಪ್​ಲಾಕ್​ ಮಾಡುವೆ: ಮೈಸೂರು ಸ್ಯಾಂಡಲ್​ ಬ್ಯೂಟಿ ತಮನ್ನಾ ಆಸೆ ಕೇಳಿ!
Recommended image2
ಖ್ಯಾತ ಕ್ರಿಕೆಟಿಗನೊಬ್ಬ ತನ್ನ ಮನದ ಬಯಕೆ ಹೇಳಿದ್ದ, ಮೆಸೇಜ್ ರಿವೀಲ್ ಮಾಡಿದ ಪೂನಂ ಪಾಂಡೆ
Recommended image3
ಈ ಹಿಟ್ ಹಾಡಿಗೆ ನಡೆದದ್ದು ಬರೋಬ್ಬರಿ 16 ದಿನ ಶೂಟಿಂಗ್ , ರಕ್ತ ಹರಿದರೂ ನೃತ್ಯ ನಿಲ್ಲಿಸದ Aishwarya Rai
Related Stories
Recommended image1
ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ
Recommended image2
ನಟಿ ಹನಿ ರೋಸ್‌ಗೆ ಬಿಗ್ ರಿಲೀಫ್: ಕೇಂದ್ರದ ಜಿಎಸ್‌ಟಿ ನೋಟಿಸ್ ಅನ್ನೇ ರದ್ದುಗೊಳಿಸಿದ ಹೈಕೋರ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved