- Home
- Entertainment
- Cine World
- ಹೇಳೋದಕ್ಕೆ ಖ್ಯಾತ ಬಾಲಿವುಡ್ ನಟ… ಆದ್ರೆ 40 ಸಿನಿಮಾ ಫ್ಲಾಪ್, 33 ಸಿನಿಮಾ ರಿಲೀಸ್ ಆಗಿಯೇ ಇಲ್ಲ… ಕರ್ನಾಟಕ ಜೊತೆ ನಂಟು!
ಹೇಳೋದಕ್ಕೆ ಖ್ಯಾತ ಬಾಲಿವುಡ್ ನಟ… ಆದ್ರೆ 40 ಸಿನಿಮಾ ಫ್ಲಾಪ್, 33 ಸಿನಿಮಾ ರಿಲೀಸ್ ಆಗಿಯೇ ಇಲ್ಲ… ಕರ್ನಾಟಕ ಜೊತೆ ನಂಟು!
ಬಾಲಿವುಡ್ ನ ಈ ಸ್ಟಾರ್ ನಟ ನಟಿಸಿದ್ದ 40 ಸಿನಿಮಾಗಳು ಫ್ಲಾಪ್ ಆಗಿವೆ, ಅಷ್ಟೇ ಅಲ್ಲ 33 ಸಿನಿಮಾಗಳು ರಿಲೀಸ್ ಆಗಲೇ ಇಲ್ವಂತೆ. ಹಾಗಿದ್ರೆ ಆ ನಟ ಯಾರು ಗೊತ್ತಾ?

ಸುನಿಲ್ ಶೆಟ್ಟಿ (Sunil Shetty) ಅವರನ್ನು ಬಾಲಿವುಡ್‌ನಲ್ಲಿ 'ಅಣ್ಣಾ' ಎಂದೂ ಕರೆಯುತ್ತಾರೆ. ತನ್ನ ನಟನೆ, ಶೈಲಿ ಮತ್ತು ವಿಶೇಷ ಸಂಭಾಷಣೆಗಳಿಗಾಗಿ ಸುನಿಲ್ ಶೆಟ್ಟಿ . ಇವೆಲ್ಲದರ ಹೊರತಾಗಿ, ಸುನಿಲ್ ಶೆಟ್ಟಿ ಅವರನ್ನು ಇತರ ನಟರಿಗಿಂತ ಭಿನ್ನವಾಗಿಸುವ ಇನ್ನೊಂದು ವಿಷಯವಿದೆ. ಬಲಿಷ್ಠವಾದ ಮೈಕಟ್ಟು, ಅತ್ಯುತ್ತಮ ಆಕ್ಷನ್ ಮತ್ತು ಸ್ಟ್ರಾಂಗ್ ಆಗಿರುವ ಸಂಭಾಷಣೆಗಳು.
ಇಂದು ಸುನಿಲ್ ಶೆಟ್ಟಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ, ಆದರೆ ಬಾಲ್ಯದಲ್ಲಿ ಅವರು ನಟನಾಗುವ ಬದಲು ಕ್ರಿಕೆಟಿಗನಾಗಬೇಕೆಂದು ಬಯಸಿದ್ದರು. ಚಲನಚಿತ್ರಗಳಲ್ಲಿ ತನಗಾಗಿ ಒಂದು ಸ್ಥಾನವನ್ನು ಗಳಿಸುವುದು ಸುಲಭದ ಕೆಲಸವಲ್ಲ ಎಂದು ಸುನಿಲ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದರು. ಸಿನಿಮಾ ಮಾಡಿದಾಗ, ಆರಂಭದಲ್ಲಿ ನೀವು ಸುಮ್ನೆ ಮನೆಗೆ ಹೋಗಿ ಇಡ್ಲಿ ಮಾರಿ ಅಂತಾನೂ ಹೇಳಿದ್ದರು.
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ಅವರು ತಮ್ಮ ಲುಕ್ ನಿಂದಾಗಿ ಅನೇಕ ರಿಜೆಕ್ಷನ್ ಎದುರಿಸಿದ್ದರು ಸುನೀಲ್ ಶೆಟ್ಟಿ. ಅಷ್ಟೇ ಅಲ್ಲ ಯಾವುದೇ ನಿರ್ದೇಶಕರು ಸಹ ಅವರಿಗೆ ತಮ್ಮ ಚಿತ್ರದಲ್ಲಿ ಕೆಲಸ ನೀಡಲಿಲ್ಲ, ಯಾವುದೇ ನಟಿ ಅವರೊಂದಿಗೆ ಕೆಲಸ ಮಾಡಲು ಬಯಸಲಿಲ್ಲ. ಚಲನಚಿತ್ರಗಳು ಅವರ ಸಾಮರ್ಥ್ಯಕ್ಕೆ ಮೀರಿವೆ ಎಂದು ನಿರ್ದೇಶಕರು ಹೇಳಿದ್ದರು.
ಸುನಿಲ್ ಶೆಟ್ಟಿ 1992 ರ 'ಬಲ್ವಾನ್' (Balwan) ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, 1994 ರಲ್ಲಿ ಬಿಡುಗಡೆಯಾದ 'ಮೊಹ್ರಾ' ಅವರಿಗೆ ವಿಶೇಷ ಮನ್ನಣೆ ನೀಡಿತು. ಇದರಲ್ಲಿ ಅವರೊಂದಿಗೆ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದಾದ ನಂತರ, ಸುನಿಲ್ ಶೆಟ್ಟಿ 'ಗೋಪಿ ಕಿಶನ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಸೂಪರ್ ಹಿಟ್ ಆಯ್ತು.
‘ಯೇ ತೇರಾ ಘರ್ ಯೇ ಮೇರಾ ಘರ್’, ‘ಹೇರಾ ಫೇರಿ’, ‘ದೇ ದಾನಾ ದಾನ್’ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು. ಇಷ್ಟೇ ಅಲ್ಲ, 2001 ರಲ್ಲಿ ಬಿಡುಗಡೆಯಾದ 'ಧಡ್ಕನ್' ಚಿತ್ರಕ್ಕಾಗಿ ಸುನಿಲ್ ಶೆಟ್ಟಿ ಅತ್ಯುತ್ತಮ ಖಳನಾಯಕ ಪ್ರಶಸ್ತಿಯನ್ನು ಗೆದ್ದರು. ಸುನಿಲ್ ಶೆಟ್ಟಿ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ.
ಆದರೆ ನಿಮಗೆ ಗೊತ್ತಾ? ಇಷ್ಟೆಲ್ಲಾ ಹೆಸರು ಗಳಿಸಿರುವ ಸುನಿಲ್ ಶೆಟ್ಟಿ ಅವರ 40 ಚಿತ್ರಗಳು ಫ್ಲಾಪ್ ಆಗಿದ್ದವು ಮತ್ತು ಅವುಗಳಲ್ಲಿ 33 ಚಿತ್ರಗಳು ಬಿಡುಗಡೆಯಾಗಲೇ ಇಲ್ಲ. ಆದರೂ ಅವರನ್ನು 90 ರ ದಶಕದ ಟಾಪ್ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರ ನೆಟ್ ವರ್ತ್ 125 ಕೋಟಿ ರೂ. ಆಗಿದೆ.
ಸುನಿಲ್ ಶೆಟ್ಟಿ ಲವ್ ಸ್ಟೋರಿ
ಸುನಿಲ್ ಶೆಟ್ಟಿ ಲವ್ ಸ್ಟೋರಿ (love story) ಬಗ್ಗೆ ಹೇಳೋದಾದರೆ , ಸುನೀಲ್ ಶೆಟ್ಟಿ ಮೊದಲು ತಮ್ಮ ಪತ್ನಿ ಮಾನಾ ಶೆಟ್ಟಿಯನ್ನು ಮುಂಬೈನ ನೇಪಿಯನ್ ಸೀ ರಸ್ತೆಯಲ್ಲಿರುವ ಪೇಸ್ಟ್ರಿ ಅಂಗಡಿಯಲ್ಲಿ ನೋಡಿದರು, ಅಲ್ಲಿ ಅವರು ಆಗಾಗ್ಗೆ ಸಂಜೆ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೋಗುತ್ತಿದ್ದರು. ಆ ನಟನಿಗೆ ಮೊದಲ ನೋಟದಲ್ಲೇ ಮನಾಳ ಮೇಲೆ ಪ್ರೀತಿ ಹುಟ್ಟಿತ್ತಂತೆ. ಇದಾದ ನಂತರ, ಸುನಿಲ್ ಶೆಟ್ಟಿ ತನ್ನ ಸ್ನೇಹಿತರೊಬ್ಬರಿಗೆ ಪಾರ್ಟಿ ಆಯೋಜಿಸಿ, ಅಲ್ಲಿಗೆ ಮಾನಾಳನ್ನು ಆಹ್ವಾನಿಸಿದ್ದರಂತೆ. ಈ ಪಾರ್ಟಿಯ ನಂತರ, ಸುನಿಲ್ ಮಾನಾ ಜೊತೆ ಬೈಕ್ ರೈಡ್ ಮಾಡುತ್ತಾರೆ. ಈ ಬೈಕ್ ಸವಾರಿಯ ಸಮಯದಲ್ಲಿ ಇಬ್ಬರೂ ಪರಸ್ಪರ ಲವ್ ಮಾಡ್ತಾರೆ ಅನ್ನೋದು ಇಬ್ಬರಿಗೂ ಗೊತ್ತಾಯ್ತು.
ಫ್ಯಾಮಿಲಿಗೆ ಮದುವೆ ಇಷ್ಟ ಇರಲಿಲ್ಲ.
ಹಲವು ಸಮಯ ಬಳಿಕ ಸುನಿಲ್ ಶೆಟ್ಟಿ ಮತ್ತು ಮಾನಾ ಶೆಟ್ಟಿ ನಡುವಿನ ಸಂಬಂಧವು ಗಾಢವಾಯಿತು, ಇಬ್ಬರು ಮದುವೆಯಾಗಲು ಸಿದ್ಧರಾದರು, ಆದರೆ ಮನೆಯವರು ಇವರ ಮದುವೆಯನ್ನು ಒಪ್ಪೋದಕ್ಕೆ ರೆಡಿ ಇರಲಿಲ್ಲ. ಮಾನಾಳ ತಂದೆ ಗುಜರಾತಿ ಮುಸ್ಲಿಂ (Gujarati Muslim)ಮತ್ತು ತಾಯಿ ಪಂಜಾಬಿ. ಸುನಿಲ್ ಶೆಟ್ಟಿ ಕರ್ನಾಟಕದ ತುಳು ಮಾತನಾಡುವ ಕುಟುಂಬಕ್ಕೆ ಸೇರಿದವರು. ಹಾಗಾಗಿ ಸಂಸ್ಕೃತಿ, ಧರ್ಮ ಮತ್ತು ಜಾತಿ ಅವರ ಸಂಬಂಧಕ್ಕೆ ಅಡ್ಡಿಯಾಯಿತು. ಇಬ್ಬರ ಕುಟುಂಬಗಳು ಈ ಸಂಬಂಧವನ್ನು ತಿರಸ್ಕರಿಸಿದ್ದರು. ಆದರೆ ಸುನೀಲ್ ಶೆಟ್ಟಿ ಮತ್ತು ಮಾನಾ ತಮ್ಮ ಪ್ರೀತಿಯನ್ನು ಬಿಟ್ಟು ಕೊಡಲಿಲ್ಲ. ಮನೆಯವರ ಮನ ಒಲಿಸಲು ಅವರು ಪ್ರಯತ್ನಿಸಿದರು.
9 ವರ್ಷಗಳ ದೀರ್ಘ ಕಾಯುವಿಕೆಯ ನಂತರ ನಡೆಯಿತು ಮದುವೆ
ಆರಂಭದಲ್ಲಿ, ಕುಟುಂಬವು ಸುನಿಲ್ ಶೆಟ್ಟಿ ಮತ್ತು ಮಾನಾ ಸಂಬಂಧವನ್ನು ತಿರಸ್ಕರಿಸಿತ್ತು. ಆದರೆ ನಂತರ ಇಬ್ಬರ ನಡುವಿನ ಬಾಂಧವ್ಯವನ್ನು ನೋಡಿದ ಕುಟುಂಬವು ಮದುವೆಗೆ ಒಪ್ಪಿಗೆ ನೀಡಿತ್ತು. ಸುನಿಲ್ ಶೆಟ್ಟಿ ಮತ್ತು ಮಾನಾ ಮದುವೆಯಾಗಲು 9 ವರ್ಷಗಳ ಕಾಲ ಕಾಯಬೇಕಾಯಿತು. 9 ವರ್ಷಗಳ ನಂತರ, ಡಿಸೆಂಬರ್ 25, 1991 ರಂದು, ಸುನಿಲ್ ಶೆಟ್ಟಿ ಮತ್ತು ಮಾನಾ ವಿವಾಹವಾದರು.
ನಿಜ ಜೀವನದಲ್ಲಿ ಸುನಿಲ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನಕ್ಕಿಂತ ತಮ್ಮ ವೃತ್ತಿಪರ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ನಟ ಸಂಪೂರ್ಣವಾಗಿ ಫ್ಯಾಮಿಲಿ ಮ್ಯಾನ್ (Family man). ಹೆಚ್ಚಾಗಿ ತಮ್ಮ ಕುಟುಂಬದ ಜೊತೆಗೆ ಇವರು ಸಮಯ ಕಳೆಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.