- Home
- Entertainment
- Cine World
- ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ: ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ
ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ: ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ
ಪ್ರಸಿದ್ಧ ನಟ ಕೋಟ ಶ್ರೀನಿವಾಸ ರಾವ್ ಅವರ ನಿಧನದಿಂದ ಚಿತ್ರರಂಗದಲ್ಲಿ ದುಃಖ ಮಡುಗಟ್ಟಿದೆ. ಕೋಟ ಶ್ರೀನಿವಾಸ ರಾವ್ 750 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಪಾತ್ರಗಳಲ್ಲಿ, ವಿಲನ್ ಆಗಿ, ಪೋಷಕ ನಟರಾಗಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದ್ದಾರೆ.

ಕೋಟ ಅವರ ನಿಧನದಿಂದ ಅವರ ವೃತ್ತಿಜೀವನದ ವಿಶೇಷಗಳನ್ನು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಕೋಟಗೆ ಉತ್ತಮ ಬಾಂಧವ್ಯವಿತ್ತು. ಯಮುಡಿಕಿ ಮೊಗುಡು, ಮೆಕ್ಯಾನಿಕ್ ಅಳ್ಳುಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಕೋಟ ಶ್ರೀನಿವಾಸ ರಾವ್ ಅವರ ಮದ್ಯಪಾನದ ಅಭ್ಯಾಸದ ಬಗ್ಗೆ ಹಲವು ವರದಿಗಳು ಬಂದಿದ್ದವು. 'ನೀನು ತುಂಬಾ ಕುಡಿಯುತ್ತಿದ್ದೀಯ, ನೀನು ಒಳ್ಳೆ ಆರ್ಟಿಸ್ಟ್, ಹೀಗೆ ಜೀವನ ಹಾಳ್ ಮಾಡ್ಕೋಬೇಡ' ಅಂತ ಚಿರು ಹಲವು ಬಾರಿ ಎಚ್ಚರಿಸಿದ್ದರಂತೆ.
'ನೀನು ತುಂಬಾ ಕುಡಿಯುತ್ತಿದ್ದೀಯ, ನೀನು ಒಳ್ಳೆ ಆರ್ಟಿಸ್ಟ್, ಹೀಗೆ ಹಾಳ್ ಮಾಡ್ಕೋಬೇಡ' ಅಂತ ಚಿರು ಹಲವು ಬಾರಿ ನನ್ನ ಮೇಲೆ ಕೂಗಾಡಿದ್ದಾರೆ ಅಂತ ಕೋಟ ಹೇಳಿದ್ದಾರೆ. ಚಿರು ನನ್ನ ಮೇಲೆ ಕೂಗಾಡೊದ್ರಲ್ಲಿ ತಪ್ಪಿಲ್ಲ, ನನ್ನ ಮೇಲೆ ಪ್ರೀತಿ ಇದ್ದದ್ದರಿಂದ ಅರಚಿದ್ರು.
ಆದರೆ ಕುಡಿದು ಶೂಟಿಂಗ್‌ಗೆ ಹೋಗ್ತಿದ್ದೆ ಅನ್ನೋದು ಸುಳ್ಳು ಅಂತ ಕೋಟ ಹೇಳಿದ್ದಾರೆ. ಚಿರು ಮೊದಲ ಚಿತ್ರ ಪ್ರಾಣಂ ಖರೀದು ಚಿತ್ರದ ಮೂಲಕವೇ ಕೋಟ ಸಿನಿ ಜೀವನ ಶುರುವಾಯಿತು. ಬ್ಯಾಂಕ್ ಉದ್ಯೋಗಿಯಾಗಿದ್ದ ಕೋಟ ರಂಗಭೂಮಿ ನಟರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

