ರಾಷ್ಟ್ರಪ್ರಶಸ್ತಿ ಸಿಕ್ಕರೂ ಅಜಯ್ ದೇವಗನ್ ಅವರ ಈ ಎರಡೂ ಸಿನಿಮಾಗಳು ಪ್ಲಾಪ್ ಆಗಿದ್ದವು
ರೆಡ್ 2 ಸಿನಿಮಾದಲ್ಲಿ ನಟಿಸಿರೋ ಅಜಯ್ ದೇವಗನ್, ಬಾಲಿವುಡ್ ನಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರೋ ನಟ. ಅವರು ಒಂದು ಅಲ್ಲ, ಮೂರು ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. ಈ ಮೂರು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

1998 ರಲ್ಲಿ ಅಜಯ್ ದೇವಗನ್ ಅವರಿಗೆ ಮೊದಲ ಬಾರಿ ಸಿನಿಮಾದಲ್ಲಿನ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಜಖ್ಮ್ ಸಿನಿಮಾದಲ್ಲಿ ಮುಸ್ಲಿಂ ತಾಯಿ ಮತ್ತು ಹಿಂದೂ ತಂದೆಯ ಮಗನನಾಗಿ ಅವರು ಈ ಸಿನಿಮಾದಲ್ಲಿ ನಟಿಸಿದ್ದರು
ಅಜಯ್ ದೇವಗನ್ ಗಿಂತ 3 ವರ್ಷ ಚಿಕ್ಕವರಾದ ಪೂಜಾ ಭಟ್ ಈ ಚಿತ್ರದಲ್ಲಿ ಅವರ ತಾಯಿಯ ಪಾತ್ರ ಮಾಡಿದ್ದರು. ಆದರೆ ಮಹೇಶ್ ಭಟ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ಆದರೂ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.
ಹಾಗೆಯೇ 2002 ರಲ್ಲಿ ಅಜಯ್ ದೇವಗನ್ ಅವರಿಗೆ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಅವರ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಸಿನಿಮಾಗಾಗಿ ಈ ಪ್ರಶಸ್ತಿ ಸಿಕ್ಕಿದ್ದು, ಇದು ಭಗತ್ ಸಿಂಗ್ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ.
ಅಂದಹಾಗೆ ಅಜಯ್ ದೇವಗನ್ ಅವರ ಈ ಸಿನಿಮಾವೂ ಕೂಡ ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡಲಾಗದೇ ಸೋಲು ಕಂಡಿತ್ತು. ಆದರೂ ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಈ ಸಿನಿಮಾವನ್ನು ರಾಜ್ ಕುಮಾರ್ ಸಂತೋಷಿ ನಿರ್ದೇಶಿಸಿದ್ದರು.
ಹಾಗೆಯೇ ಅಜಯ್ ದೇವಗನ್ ಅವರಿಗೆ ಮೂರನೇ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು 2020 ರಲ್ಲಿ ತಾನ್ಹಾಜಿ ಹೆಸರಿನ ಈ ಸಿನಿಮಾಗೆ ಪ್ರಶಸ್ತಿ ಸಿಕ್ಕಿದ್ದು, ಈ ಸಿನಿಮಾ ಮರಾಠಾ ಯೋಧ ತಾನಾಜಿ ಮಾಲುಸರೆ ಅವರ ಜೀವನಕತೆಯನ್ನು ಹೊಂದಿದೆ.
ಈ ಸಿನಿಮಾವನ್ನು ಓಂ ರಾವತ್ ನಿರ್ದೇಶಿಸಿದ್ದರು. ಈ ಹಿಂದೆ ಎರಡು ರಾಷ್ಟ್ರಪ್ರಶಸ್ತಿ ಸಿಕ್ಕ ಸಿನಿಮಾಗಳು ಸೋತರು ಅಜಯ್ ದೇವಗನ್ ಅವರ ತಾನ್ಹಾಜಿ ಸಿನಿಮಾ ಒಳ್ಳೆ ಯಶಸ್ಸು ಕಂಡಿತು.
ಅಜಯ್ ದೇವಗನ್ ತಾನ್ಹಾಜಿ ಚಿತ್ರದ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದರು. ಪ್ರಸ್ತುತ ಅಜಯ್ ದೇವಗನ್ ತಮ್ಮ ರೈಡ್ 2 ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

