Hema Malini - Dharmendra ವೆಡ್ಡಿಂಗ್ ಆನಿವರ್ಸರಿ ಫೋಟೋ ಶೇರ್ ಮಾಡಿದ ನಟಿ
ಇಂದು ಅಂದರೆ ಮೇ 2 ರಂದು ಬಾಲಿವುಡ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾದ ಧರ್ಮೇಂದ್ರ (Dharmendra) ಮತ್ತು ಹೇಮಾ ಮಾಲಿನಿ (Hema Malini)ಅವರ ವಿವಾಹದ 42 ನೇ ವಾರ್ಷಿಕೋತ್ಸವ. ಪ್ರಪಂಚದ ಅಪಹಾಸ್ಯಗಳನ್ನು ಲೆಕ್ಕಿಸದೆ ದಂಪತಿಗಳು 1980 ರಲ್ಲಿ ವಿವಾಹವಾದರು. ಇಷ್ಟು ವರ್ಷಗಳ ಕಾಲ ಒಟ್ಟಿಗೆ ಇದ್ದರೂ, ದಂಪತಿಗಳ ನಡುವೆ ಇದುವರೆಗೂ ಯಾವುದೇ ಜಗಳ ಮುನ್ನೆಲೆಗೆ ಬಂದಿಲ್ಲ. ಇಬ್ಬರಿಗೂ ಇಶಾ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಂಪತಿಗಳಿಗೆ ಮೊಮ್ಮಕ್ಕಳು ಸಹ ಇದ್ದಾರೆ. ವಿವಾಹ ವಾರ್ಷಿಕೋತ್ಸವದಂದು, ಹೇಮಾ ಮಾಲಿನಿ ಟ್ವೀಟ್‌ನಲ್ಲಿ ತಮ್ಮ ಪತಿಯೊಂದಿಗೆ ಫೋಟೋ ಜೊತೆ ಹೃದಯ ಸ್ಪರ್ಶಿ ಶೀರ್ಷಿಕೆಯನ್ನು ಬರೆದಿದ್ದಾರೆ.

ಹೇಮಾ ಧರ್ಮೇಂದ್ರ ಅವರನ್ನು ಮದುವೆಯಾದಾಗ, ಆಗಾಗಲೇ ನಟ ಮದುವೆಯಾಗಿ 4 ಮಕ್ಕಳ ತಂದೆಯಾಗಿದ್ದರು. ಆದರೂ ಸಹ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರನ್ನು ಒಂದಾಗುವುದು ತಡೆಯಲು ಸಾಧ್ಯವಾಗಲಿಲ್ಲ.
ವೆಡ್ಡಿಂಗ್ ಆನಿವರ್ಸರಿಯ ಸಂಧರ್ಭದಲ್ಲಿ ಹೇಮಾ ಮಾಲಿನಿ ಅವರು ಪತಿ ಧರ್ಮೇಂದ್ರ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಇಂದು ನಮ್ಮ ವಿವಾಹ ವಾರ್ಷಿಕೋತ್ಸವ. ಇಂದು, ಈ ಎಲ್ಲಾ ವರ್ಷಗಳ ಸಂತೋಷ, ನಮ್ಮ ಪ್ರೀತಿಯ ಮಕ್ಕಳು, ಮೊಮ್ಮಕ್ಕಳು ಮತ್ತು ಎಲ್ಲೆಡೆ ಇರುವ ನಮ್ಮ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ನಿಜವಾಗಿಯೂ ಆಶೀರ್ವಾದ ಪಡೆದಿದ್ದೇನೆ' ಎಂದು ನಟಿ ಬರೆದಿದ್ದಾರೆ.
ಹೇಮಾ ಶೇರ್ ಮಾಡಿರುವ ಫೋಟೋದಲ್ಲಿ ಗೋಲ್ಡನ್ ಬಾರ್ಡರ್ ಇರುವ ಸೆಲ್ಫ್ ಪ್ರಿಂಟ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರು ತನ್ನ ಕುತ್ತಿಗೆಗೆ ಹಸಿರು ಹಾರವನ್ನು ಧರಿಸಿದ್ದಾರೆ. ಅದೇ ಸಮಯದಲ್ಲಿ ಧರ್ಮೇಂದ್ರ ಬಿಳಿ ಶರ್ಟ್‌ನಲ್ಲಿ ಹೆಂಡತಿಯ ಭುಜದ ಮೇಲೆ ಕೈ ಹಾಕಿದ್ದಾರೆ.
ಫೋಟೋದಲ್ಲಿ ಇಬ್ಬರ ಮುಖದಲ್ಲೂ ನಗು ಮೂಡಿದೆ. ಹೇಮಾ ಶೇರ್ ಮಾಡಿರುವ ಫೋಟೋಗಳಿಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಜೋಡಿಯನ್ನು ಅಭಿನಂದಿಸುತ್ತಿದ್ದಾರೆ.
ಧರ್ಮೇಂದ್ರ 2 ಗಂಡು ಮತ್ತು 4 ಹೆಣ್ಣು ಮಕ್ಕಳ ತಂದೆ. ಧರ್ಮೇಂದ್ರ 19 ವರ್ಷದವರಾಗಿದ್ದಾಗ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು . ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನವೇ ತಂದೆಯಾಗಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದಾರೆ.
ಇಬ್ಬರು ಪುತ್ರರು ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಮತ್ತು ಇಬ್ಬರು ಪುತ್ರಿಯರಾದ ಅಜೇಯತಾ-ವಿಜೇತಾ. ಗಂಡುಮಕ್ಕಳು ಚಿತ್ರರಂಗಕ್ಕೆ ಬಂದರು ಆದರೆ ಹೆಣ್ಣುಮಕ್ಕಳು ಯಾವಾಗಲೂ ಪ್ರಚಾರದಿಂದ ದೂರ ಉಳಿಯುತ್ತಾರೆ.
ಅದೇ ಸಮಯದಲ್ಲಿ, ಧರ್ಮೇಂದ್ರ ಅವರು ಹೇಮಾ ಮಾಲಿನಿಯಿಂದ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ. ಇಶಾ ಡಿಯೋಲ್-ಅಹಾನಾ ಡಿಯೋಲ್. ಇಶಾ ಚಲನಚಿತ್ರಗಳಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು. ಆದರೆ ಅವರ ಹೆತ್ತವರಷ್ಟು ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ಅದೇ ಸಮಯದಲ್ಲಿ, ಧರ್ಮೇಂದ್ರ ಮತತ್ತು ಹೇಮಾ ಮಾಲಿನಿ ಎರಡನೇ ಮಗಳು ಅಹಾನಾ ಯಾವಾಗಲೂ ಚಲನಚಿತ್ರಗಳಿಂದ ದೂರವಿದ್ದರು. ಆದರೆ, ಇಬ್ಬರು ಪುತ್ರಿಯರೂ ಹೇಮಾ ಮಾಲಿನಿಯಂತೆ ಶಾಸ್ತ್ರೀಯ ನೃತ್ಯದಲ್ಲಿ ಎಕ್ಸ್‌ಪರ್ಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.