- Home
- Entertainment
- Cine World
- Hollywood Celebrities: ಸನಾತನ ಧರ್ಮವನ್ನು ಸ್ವೀಕರಿಸಿದ ಜನಪ್ರಿಯ ಹಾಲಿವುಡ್ ಸೆಲೆಬ್ರಿಟಿಗಳಿವರು
Hollywood Celebrities: ಸನಾತನ ಧರ್ಮವನ್ನು ಸ್ವೀಕರಿಸಿದ ಜನಪ್ರಿಯ ಹಾಲಿವುಡ್ ಸೆಲೆಬ್ರಿಟಿಗಳಿವರು
ಸನಾತನ ಧರ್ಮದ ಮಹಿಮೆ ಎಲ್ಲರಿಗೂ ತಿಳಿದಿದೆ ಆದರೆ ವಿದೇಶದಲ್ಲಿ ವಾಸಿಸುತ್ತಿದ್ದರೂ ಸಹ ಈ ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿರುವ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಅವರ ಕುರಿತು ಇಲ್ಲಿದೆ ಮಾಹಿತಿ.

ವಿದೇಶದಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರೂ, ಹಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳಾಗಿದ್ದರೂ (hollywood celebrities), ತಮ್ಮ ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ, ಸನಾತನ ಧರ್ಮವನ್ನು ಪಾಲಿಸಿದ ಸೆಲೆಬ್ರಿಟಿಗಳು ಇವರು.
ದಿವಂಗತ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್, ಪ್ರಯಾಗರಾಜ್‌ನಲ್ಲಿ 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು ಮತ್ತು ಅವರ ಗುರು ಸ್ವಾಮಿ ಕೈಲಾಶಾನಂದರಿಂದ ಕಮಲಾ ಎಂಬ ಹಿಂದೂ ಹೆಸರನ್ನು ಪಡೆದರು.
ಜ್ಯಾಕ್‌ಮನ್ (Jackman) ಜಗತ್ತಿಗೆ ವೊಲ್ವೆರಿನ್ ಆಗಿರಬಹುದು, ಆದರೆ ಸ್ವತಃ ಅವನು ಹಿಂದೂ ಧರ್ಮದಲ್ಲಿ ಆಳವಾಗಿ ಮುಳುಗಿದ್ದಾರೆ. ಅವರು ಹಲವಾರು ವರ್ಷಗಳಿಂದ ಹಿಂದೂ ಧರ್ಮವನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾರೆ.
ಅಲ್ಲಾದೀನ್ ಮತ್ತು ಜೆಮಿನಿ ಮ್ಯಾನ್ ಚಿತ್ರಗಳ ಹಾಲಿವುಡ್ ಸೂಪರ್‌ಸ್ಟಾರ್ ವಿಲ್ ಸ್ಮಿತ್ (Will Smith)ಹಿಂದೂ ಧರ್ಮದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಅವರು ಭಾರತದ ಅನೇಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.
ಪ್ರಸಿದ್ಧ ಹಾಲಿವುಡ್ ಸೀರೀಸ್ 'ರ್ಯಾಂಬೊ'ದ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟಲ್ಲೋನ್ (Sylvester Stallone) ಕೂಡ ಸನಾತನ ಧರ್ಮದಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಇವರು ಕೂಡ ಸನಾತನ ಧರ್ಮ ಪಾಲನೆ ಮಾಡ್ತಾ ಬಂದಿದ್ದಾರೆ.
ಏಂಜಲೀನಾ ಜೋಲಿ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ, ಅವರು ಸನಾತನ ಧರ್ಮವನ್ನೂ (Sanatana Dharma) ಅಳವಡಿಸಿಕೊಂಡಿದ್ದಾರೆ. ಆಕೆ ಕಾಂಬೋಡಿಯಾದ ಹಿಂದೂ ಧರ್ಮದಿಂದ ಪ್ರೇರಿತರಾಗಿದ್ದಾರೆ. ಅಲ್ಲಿಗೆ ಹೆಚ್ಚಾಗಿ ಹೋಗುತ್ತಲೇ ಇರುತ್ತಾರೆ.
ಪ್ರಸಿದ್ಧ ಹಾಸ್ಯನಟ ಮತ್ತು ನಟ ರಸೆಲ್ ಬ್ರಾಂಡ್ ಅತೀಂದ್ರಿಯ ಧ್ಯಾನದ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಈವಾಗ್ಲೂ ಅವರು ಅದೇ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಹಾಲಿವುಡ್‌ನ ಅತಿದೊಡ್ಡ ನಟಿಯರಲ್ಲಿ ಒಬ್ಬರಾದ ಜೂಲಿಯಾ ರಾಬರ್ಟ್ಸ್ (Julia Robert), ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ.
ಪ್ರಸಿದ್ಧ ಹಾಲಿವುಡ್ ನಟ ಬ್ರಾಡ್ ಪಿಟ್ (Brad Pitt) ಸನಾತನ ಧರ್ಮದ ಪ್ರಮುಖ ಪಂಥವಾದ ಬೌದ್ಧ ಸಂಪ್ರದಾಯದ ಅನುಯಾಯಿ. ಇವರು ಇಂದಿಗೂ ಹಲವು ಬೌದ್ಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ಹಾಲಿವುಡ್‌ನ ಪಾಪ್ ರಾಣಿ ಮಡೋನಾ ಸನಾತನ ಧರ್ಮದಿಂದ ಪ್ರಭಾವಿತರಾಗಿದ್ದು ಮಾತ್ರವಲ್ಲದೆ ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದಾರೆ. ಇವರು 1990 ರಮಧ್ಯದಲ್ಲೇ ಸನಾತನ ಧರ್ಮ ಪಾಲಿಸಿದ್ದರು.
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಕೂಡ ಸನಾತನ ಧರ್ಮದಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಮಾರ್ಗದರ್ಶನದಿಂದಲೇ ಅವರು ಇಂದು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

