- Home
- Entertainment
- Cine World
- ಹದಿನಾರರ ಹರೆಯ, ಫರ್ಮಾನ್ ಖಾನ್‌ರನ್ನು ಮದುವೆಯಾಗಿ 10 ದಿನಕ್ಕೆ ಗರ್ಭಿಣಿಯಾದ ಕುಂಭಮೇಳದ ಹುಡುಗಿ ಮೊನಾಲಿಸಾ
ಹದಿನಾರರ ಹರೆಯ, ಫರ್ಮಾನ್ ಖಾನ್‌ರನ್ನು ಮದುವೆಯಾಗಿ 10 ದಿನಕ್ಕೆ ಗರ್ಭಿಣಿಯಾದ ಕುಂಭಮೇಳದ ಹುಡುಗಿ ಮೊನಾಲಿಸಾ
ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೋನಾಲಿಸಾ ಭೋಸ್ಲೆ ಅವರು ನಟ ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ ಮದುವೆಯಾಗಿದ್ದರು. ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಲವ್ ಜಿಹಾದ್ ಎಂದು ಚರ್ಚೆಗಳು ಆಯ್ತು. ಅಲ್ಲಿನ ಪೊಲೀಸರು, ಸ್ಥಳೀಯರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಇದಕ್ಕೆ ಮೊನಾಲಿಸಾ ಮನೆಯ ವಿರೋಧ ಇತ್ತು.

ಮನೆಯಲ್ಲಿ ಬೇರೆ ಹುಡುಗನನ್ನು ನೋಡಿದ್ರು
ಮೊನಾಲಿಸಾ ತನ್ನ ಅಣ್ಣ ಎಂದು ಭಾವಿಸುವ ಕಸಿನ್ ಜೊತೆ ಮದುವೆ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದರಂತೆ. ತನ್ನ ಕಷ್ಟದ ಸಮಯದಲ್ಲಿ ನೆರವು ನೀಡಿದ್ದ ಫರ್ಮಾನ್ ಖಾನ್ ಜೊತೆ ಮೊನಾಲಿಸಾ ಮದುವೆ ಆಗಬೇಕು ಎಂದು ಡಿಸೈಡ್ ಆಗಿದ್ದರು.
ಮೊನಾಲಿಸಾ ಈಗ ಗರ್ಭಿಣಿ
ಅಂದಹಾಗೆ ಮೊನಾಲಿಸಾಗೆ ಇನ್ನೂ 18 ವರ್ಷ ಆಗಿಲ್ಲ ಎಂದು ಫರ್ಮಾನ್ ಖಾನ್ ವಿರುದ್ಧ ಫೋಕ್ಸೊ ಕಾಯಿದೆ ಜಾರಿ ಆಗಿತ್ತು. ಈಗ ಮೊನಾಲಿಸಾ ಅವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ಕೊಡಬೇಕಿದೆ. ಮೊನಾಲಿಸಾ ಅವರು ಪ್ರಗ್ನೆಂಟ್, ಹೀಗಾಗಿ ಟ್ರಾವೆಲ್ ಮಾಡೋಕೆ ಆಗೋದಿಲ್ಲ ಎಂದು ಅವರ ಪತಿ ಹೇಳಿದ್ದಾರೆ. ಈಗ ಮೊನಾಲಿಸಾ ಅವರು ಪ್ರಗ್ನೆಂಟ್ ಇಲ್ಲವೋ ಹೌದೋ ಎನ್ನೋದನ್ನು ಚೆಕ್ ಮಾಡಬೇಕಿದೆ.ಈ ಬಗ್ಗೆ ಮೆಡಿಕಲ್ ತನಿಖೆ ಆಗಬೇಕಿದೆ.
ಮೊನಾಲಿಸಾ ವಯಸ್ಸು ಎಷ್ಟು?
ಮನೆಯಲ್ಲಿ ಇನ್ನೊಬ್ಬನನ್ನು ಮದುವೆ ಆಗು ಎಂದು ಈಗಲೂ ಒತ್ತಾಯ ಮಾಡ್ತಿದ್ದಾರೆ, ನಾನು ಫರ್ಮಾನ್ ಖಾನ್ ಜೊತೆ ಬಾಳ್ತೀನಿ ಎಂದು ಮೊನಾಲಿಸಾ ಹೇಳಿದ್ದಾರೆ. ಮೊನಾಲಿಸಾಗೆ ಈಗ 16 ವರ್ಷ, 2 ತಿಂಗಳು, 12 ದಿನ ಆಗಿದೆ ಎನ್ನಲಾಗಿದೆ.
ಜೀವನವೇ ಬದಲಾಯ್ತು
ಇದಕ್ಕೂ ಮುನ್ನ ನನ್ನ ಹೆಂಡ್ತಿ ಕಾಣಿಸ್ತಿಲ್ಲ ಎಂದು ಫರ್ಮಾನ್ ಖಾನ್ ಹೇಳಿದ್ದರು. ಒಟ್ಟಿನಲ್ಲಿ ಮೊನಾಲಿಸಾ ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಕುಂಭಮೇಳದಲ್ಲಿ ಮಣಿಸರ ಮಾರುತ್ತಿದ್ದ ಸುಂದರ ಕಣ್ಣಿನ ಹುಡುಗಿ, ಸಿನಿಮಾಕ್ಕೆ ಎಂಟ್ರಿ ಕೊಟ್ಟರು, ಜೀವನ ಬದಲಾಯ್ತು ಎಂದುಕೊಳ್ಳುತ್ತಿರುವಾಗಲೇ ವಿವಾದ ಎದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

