- Home
- Entertainment
- Cine World
- ತಮಿಳಿನಲ್ಲಿ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡುತ್ತಿದ್ದೇನೆ, ಇದಕ್ಕೆ ಕಾರಣ...: ನಟಿ ಚೈತ್ರಾ ಆಚಾರ್
ತಮಿಳಿನಲ್ಲಿ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡುತ್ತಿದ್ದೇನೆ, ಇದಕ್ಕೆ ಕಾರಣ...: ನಟಿ ಚೈತ್ರಾ ಆಚಾರ್
ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಈಗ ಡಬ್ಬಿಂಗ್ ಹಂತದಲ್ಲಿದೆ. ನನ್ನ ಪಾತ್ರಕ್ಕೆ ನಾನೇ ತಮಿಳಿನಲ್ಲೇ ಡಬ್ಬಿಂಗ್ ಮಾಡುತ್ತಿದ್ದೇನೆ. ಇದಕ್ಕೆ ಕಾರಣ ಚಿತ್ರದ ನಾಯಕ ಸಸಿಕುಮಾರ್ ಅವರು. ಅವರ ಸಪೋರ್ಟ್‌ನಿಂದಲೇ ಇದು ಸಾಧ್ಯವಾಗಿದೆ ಎಂದಿದ್ದಾರೆ.

ನಟಿ ಚೈತ್ರಾ ಆಚಾರ್ ಅವರು ತಮಿಳಿನ ಖ್ಯಾತ ಸಶಿಕುಮಾರ್ ಅಭಿನಯದ ‘ಮೈ ಲಾರ್ಡ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಮೆಚ್ಚುಗೆ ಗಳಿಸಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿ ಚೈತ್ರಾ ಆಚಾರ್ ಅವರ ಲುಕ್ ನೋಡಿದರೆ ಪಕ್ಕಾ ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೂಚನೆ ಕೊಟ್ಟಿದ್ದಾರೆ. ಇದು ರಾಜು ಮುರುಗನ್ ನಿರ್ದೇಶನದ ಚಿತ್ರ.
ತಮ್ಮ ಮೊದಲ ತಮಿಳು ಚಿತ್ರದ ಕುರಿತು ಮಾತನಾಡಿದ ಚೈತ್ರಾ ಆಚಾರ್, ‘ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಈಗ ಡಬ್ಬಿಂಗ್ ಹಂತದಲ್ಲಿದೆ. ನನ್ನ ಪಾತ್ರಕ್ಕೆ ನಾನೇ ತಮಿಳಿನಲ್ಲೇ ಡಬ್ಬಿಂಗ್ ಮಾಡುತ್ತಿದ್ದೇನೆ. ಇದಕ್ಕೆ ಕಾರಣ ಚಿತ್ರದ ನಾಯಕ ಸಸಿಕುಮಾರ್ ಅವರು. ಅವರ ಸಪೋರ್ಟ್‌ನಿಂದಲೇ ಇದು ಸಾಧ್ಯವಾಗಿದೆ.
ಕನ್ನಡ ಚಿತ್ರಗಳ ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಇದೆ. ನಿರ್ದೇಶಕ ರಾಜು ಮುರುಗನ್ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ರೂಪಿಸಿದ್ದಾರೆ. ತಮಿಳುನಾಡಿನ ಕೋವಿಲ್ಪಟ್ಟಿ ಎಂಬ ಊರಿನಲ್ಲಿ ನಡೆಯುವ ಕತೆ ಇದು. ತುಂಬಾ ರಿಯಲಿಸ್ಟಿಕ್ ಹಾಗೂ ಸಹಜವಾಗಿ ನನ್ನ ಪಾತ್ರ ಮೂಡಿ ಬಂದಿದೆ’ ಎನ್ನುತ್ತಾರೆ.
ತಮಿಳು ಕಲಿತಿರುವ ನಟಿ ಚೈತ್ರಾ ಆಚಾರ್ ‘ಬೊಮ್ಮರಿಲ್ಲು’ ಖ್ಯಾತಿಯ ಸಿದ್ದಾರ್ಥ್ ನಾಯಕನಾಗಿ ನಟಿಸುತ್ತಿರುವ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಮುಗಿಯುತ್ತಿದ್ದು, ಟೈಟಲ್ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಇದರ ಜತೆಗೆ ಮತ್ತೆರಡು ತಮಿಳು ಚಿತ್ರಗಳಿಗೆ ನಾಯಕಿಯಾಗಿದ್ದಾರೆ.
ನನಗೆ ಸಾಕಷ್ಟು ಪ್ರತಿಭೆ ಇದೆ. ಆ ಪ್ರತಿಭೆಯ ಬಲದಿಂದ ಒಳ್ಳೊಳ್ಳೆ ಅವಕಾಶ ಪಡೆಯುವ ಆತ್ಮವಿಶ್ವಾಸ ಇದೆ. ಹೀಗಿರುವಾಗ ಅವಕಾಶಕ್ಕಾಗಿ ಲೈಂಗಿಕತೆಯಂಥಾ ಕೀಳುಮಟ್ಟಕ್ಕೆ ಇಳಿಯುವ ಪ್ರಶ್ನೆಯೇ ಬರೋದಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.