ರಾಮಾಯಣಕ್ಕೆ ಎಂಟ್ರಿ ಕೊಟ್ಟ ಸೌತ್ ನಟಿ: ಯಶ್‌ಗೆ ಜೋಡಿಯಾದ ಮಗಧೀರ ಬ್ಯೂಟಿ!
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರಧಾರಿ ಯಶ್‌ಗೆ ಖ್ಯಾತ ದಕ್ಷಿಣ ಭಾರತೀಯ ನಟಿ ಕಾಜಲ್ ಅಗರ್ವಾಲ್ ಜೋಡಿ. ಮಂಡೋದರಿ ಪಾತ್ರದಲ್ಲಿ ನಟನೆ. ಈಗ ರಾವಣನ ಲಂಕೆಯ ಭಾಗದ ಚಿತ್ರೀಕರಣ ಪ್ರಗತಿಯಲ್ಲಿ. ಶೀಘ್ರ ಮಂಡೋದರಿ ಭಾಗದ ಚಿತ್ರೀಕರಣ ನಡೆವ ಸಾಧ್ಯತೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದು, ಅವರ ಜೋಡಿಯಾಗಿ ಖ್ಯಾತ ದಕ್ಷಿಣ ಭಾರತೀಯ ನಟಿ ಕಾಜಲ್ ಅಗರ್ವಾಲ್ ಜೊತೆಯಾಗಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾದಲ್ಲಿ ಮಂಡೋದರಿ ಪಾತ್ರದಲ್ಲಿ ಮಿಂಚಲಿದ್ದಾರೆ.
ಕೆಲವು ದಿನಗಳ ಹಿಂದೆ ಕಾಜಲ್ ‘ರಾಮಾಯಣ’ ತಂಡಕ್ಕೆ ಲುಕ್ ಟೆಸ್ಟ್ ನೀಡಿದ್ದರು. ಬಳಿಕ ಚಿಕ್ಕ ಸನ್ನಿವೇಶವೊಂದರಲ್ಲಿ ನಟಿಸಿದ್ದರು. ಇದೀಗ ಚಿತ್ರತಂಡ ರಾವಣನ ಲಂಕೆಯ ಭಾಗದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರ ಮಂಡೋದರಿ ಭಾಗದ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ.
ರಾಮಾಯಣ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿದೆ. ಹಾಗಾಗಿ ಎಲ್ಲ ಭಾಷೆಗಳಲ್ಲೂ ಪರಿಚಿತವಾಗಿರುವ ನಟಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಚಿತ್ರತಂಡದ ಉದ್ದೇಶ. ಆದ್ದರಿಂದ ಕಾಜಲ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ವಿಜೃಂಭಿಸುತ್ತಿದ್ದಾರೆ.
ಸದ್ಯ ‘ರಾಮಾಯಣ’ದ ಮೊದಲ ಭಾಗದ ಫಸ್ಟ್‌ಲುಕ್‌ಗಾಗಿ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷ 2026ರ ದೀಪಾವಳಿ ವೇಳೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

