- Home
- Entertainment
- Cine World
- Ramayana Movie Cast: ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ದಲ್ಲಿ ಯಾರೆಲ್ಲಾ ನಟಿಸ್ತಿದ್ದಾರೆ… ಇಲ್ಲಿದೆ ಫುಲ್ ಡಿಟೈಲ್ಸ್
Ramayana Movie Cast: ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ದಲ್ಲಿ ಯಾರೆಲ್ಲಾ ನಟಿಸ್ತಿದ್ದಾರೆ… ಇಲ್ಲಿದೆ ಫುಲ್ ಡಿಟೈಲ್ಸ್
ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಲ್ಲದೇ ಬೇರೆ ಯಾವೆಲ್ಲಾ ನಟರು ನಟಿಸುತ್ತಿದ್ದಾರೆ.

ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾ ರಾಮಾಯಣ. ನಿತೇಶ್ ತಿವಾರಿ (Nitesh Tiwari) ನಿರ್ದೇಶದಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಈ ಸಿನಿಮಾದಲ್ಲಿ ಯಶ್, ರಣಬೀರ್, ಸಾಯಿ ಪಲ್ಲವಿ ಅಲ್ಲದೇ ಮತ್ಯಾವ ಘಟಾನುಘಟಿ ನಟ -ನಟಿಯರು ನಟಿಸುತ್ತಿದ್ದಾರೆ ನೋಡೋಣ.
ರಾಮ ಮತ್ತು ರಾವಣ
ರಾಮಾಯಣದಲ್ಲಿ ಮುಖ್ಯ ಪಾತ್ರವರ್ಗಗಳಾದ ರಾಮ ನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ (Yash) ನಟಿಸುತ್ತಿದ್ದಾರೆ.
ಸೀತೆ ಮತ್ತು ಕೈಕೇಯಿ
ರಾಮಾಯಣ ನಾಯಕಿಯಾಗಿ, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಸಾಯಿ ಪಲ್ಲವಿ ಹಾಗೂ ರಾಣಿ ಕೈಕೇಯಿಯಾಗಿ ನಟಿ ಲಾರಾ ದತ್ತಾ ನಟಿಸಲಿದ್ದಾರೆ.
ಶೂರ್ಪನಕಾ -ಮಂಡೋದರಿ
ದಕ್ಷಿಣ ಭಾರತದಲ್ಲಿ ಮಿಂಚಿ, ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿಯರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್ (Kajal Agarwal) ಕ್ರಮವಾಗಿ ಶೂರ್ಪಣಕಾ ಮತ್ತು ರಾಣಿ ಮಂಡೋದರಿಯಾಗಿ ನಟಿಸುತ್ತಿದ್ದಾರೆ.
ಜನಕ - ಜಟಾಯು
ಹಿರಿಯ ನಟರಾದ ಅನಿಲ್ ಕಪೂರ್ (Anil Kapoor) ಜನಕ ಮಹಾರಾಜರಾಗಿ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಅಮಿತಾಬ್ ಬಚ್ಚನ್ ಜಟಾಯು ಪಾತ್ರದಲ್ಲಿ ಮಿಂಚಲಿದ್ದಾರೆ.
ಹನುಮಾನ್ -ಲಕ್ಷಣ
ಇನ್ನು ಕಟ್ಟು ಮಸ್ತು ದೇಹಸಿರಿ ಹೊಂದಿರುವ ನಟ ಸನ್ನಿ ಡಿಯೋಲ್ ಹನುಮಂತನಾಗಿ ನಟಿಸಿದ್ರೆ, ಲಕ್ಷಣನಾಗಿ ನಟ, ನಿರೂಪಕ, ನಿರ್ಮಾಪಕ ರವಿ ದುಬೆ ನಟಿಸಲಿದ್ದಾರೆ.
ಮೇಘನಾದ್ -ಶಿವ
ರಾವಣನ ಮಗ ಮೇಘನಾದನಾಗಿ 12th ಫೈಲ್ ನಟ ವಿಕ್ರಾಂತ್ ಮೆಸ್ಸಿ (Vikrant Massey), ಭಗವಂತನ ಶಿವನ ಪಾತ್ರದಲ್ಲಿ ಹಲವು ಬಾರಿ ಧಾರಾವಾಹಿಗಳಲ್ಲಿ ಶಿವನ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ಮೋಹಿತ್ ರೈನಾ ನಟಿಸಲಿದ್ದಾರೆ.
ಇಂದ್ರ ದೇವ -ವಿದ್ಯುದ್ವಿಜ
ಕುನಾಲ್ ಕಪೂರ್ ಇಂದ್ರ ದೇವನಾಗಿ ನಟಿಸಲಿದ್ದಾರೆ ಹಾಗೂ ನಟ ವಿವೇಕ್ ಒಬೆರಾಯ್ ವಿದ್ಯುದ್ವಿಜ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾಹಿತಿ ಇದೆ.
ದಶರಥ - ಭರತ
ರಾಮಾಯಣ ಸೀರಿಯಲ್ ನಲ್ಲಿ ರಾಮನಾಗಿ ಖ್ಯಾತಿ ಪಡೆದಿದ್ದ ನಟ ಅರುಣ್ ಗೋವಿಲ್ (Arun Govil) ರಾಮಾಯಣ ಸಿನಿಮಾದಲ್ಲಿ ದಶರಥನಾಗಿ ನಟಿಸಿದ್ರೆ, ರಾಮನ ಸಹೋದರ ಭರತನಾಗಿ ಆದಿನಾಥ್ ಕೊಠಾರೆ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

