ಸಾಯಿ ಪಲ್ಲವಿ ದೇವರ ಮಗುನಾ? ಅವರಮ್ಮ ಹೇಳಿದ ಸತ್ಯ ಕೇಳಿದ್ರೆ ಶಾಕ್ ಆಗೋದ್ ಗ್ಯಾರಂಟಿ!
ನಟಿ ಸಾಯಿ ಪಲ್ಲವಿ ಅವರದೊಮದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ತಾಯಿ ಹೇಳಿದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಅಗುತ್ತಿದೆ.

ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ (Sai Pallavi) ಅವರು ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಮಾತ್ರವಲ್ಲ, ಬಾಲಿವುಡ್ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಮಾಲಿವುಡ್‌ನ 'ವರ್ಷಂ' ಸಿನಿಮಾ ಮೂಲಕ ಸಿನಿದುನಿಯಾಗೆ ಕಾಲಿಟ್ಟ ಸಾಯಿ ಪಲ್ಲವಿ ಆಮೇಲೆ ಹಂತಹಂತವಾಗಿ ಸ್ಟಾರ್ ನಟಿಯಾಗಿ ಬೆಳೆದುನಿಂತವರು.
ಸದ್ಯ ಅವರು ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ರಾಮಾಯಣ ಚಿತ್ರದಲ್ಲಿ ನಟ ಯಶ್ 'ರಾವಣ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಸಾಯಿ ಪಲ್ಲವಿ ಅವರದೊಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ತಾಯಿ ಹೇಳಿದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
'ಚಿಕ್ಕವಳಿದ್ದಾಗ ನಾನು ನನ್ನನ್ನು 'ದೇವರ ಮಗು' ಎಂದೇ ಭಾವಿಸಿದ್ದೆ. ಕಾರಣ ನನ್ನಮ್ಮ ನನಗೆ ಹಾಗೆ ಹೇಳಿದ್ದರು. ಅಷ್ಟೇ ಅಲ್ಲ, ಅದೇ ಭಾವನೆ ಬರುವಂತೆ, ಇರುವಂತೆ ನನ್ನನ್ನು ಬೆಳೆಸಿದ್ದರು. ಹೀಗಾಗಿ ನಾನು ಯಾರಾದರೂ ನೀನ್ಯಾರು ಅಂತ ಕೇಳಿದ್ರೆ ದೇವರ ಮಗು ಅಂತ ಹೇಳ್ತಿದ್ದೆ.
ಆದರೆ, ದೊಡ್ಡವಳಾದ ಮೇಲೆ ನನಗೆ ಹಲವಾರು ಸಂಗತಿಗಳು ಅರ್ಥವಾಯ್ತು. ಇಲ್ಲಿ ಎಲ್ಲರೂ ದೇವರ ಮಕ್ಕಳೇ ಆಗಿದ್ದಾರೆ. ಜೊತೆಗೆ, ನಾವು ಜೀವನದಲ್ಲಿ ಬಹಳಷ್ಟು ಬಾರಿ ಗುಂಪಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗುತ್ತದೆ.
ಸಿನಿಮಾ, ಸಂಗೀತ ಯಾವುದೇ ಇರಲಿ, ಇವೆಲ್ಲಾ ಒಂದು ತಂಡವಾಗಿ ನಾವು ಕೆಲಸ ಮಾಡಬೇಕು. ಆಗಲೇ ಆ ಕೆಲಸ ಪೂರ್ಣವಾಗುವುದರ ಜೊತೆಗೆ ಅದಕ್ಕೊಂದು ಅರ್ಥ, ಪ್ರಶಂಸೆ, ಬಹುಮಾನ, ಹಣ ಎಲ್ಲವೂ ಬರಲು ಸಾಧ್ಯ. ಎಲ್ಲರೂ ಅವರದೇ ಆದ ರೀತಿಯಲ್ಲಿ ಸ್ಪೆಷಲ್, ಹೀಗಾಗಿ, ನಾನು ಈಗಲೂ ಕೂಡ ನಾನೊಂದು ಸ್ಪೆಷಲ್ ಕಿಡ್ ಎಂಬ ಭಾವನೆಯಿಂದ ಹೊರಬಂದಿಲ್ಲ' ಎಂದಿದ್ದಾರೆ.
ಒಟ್ಟನಲ್ಲಿ, ಸಾಯಿ ಪಲ್ಲವಿ ಹೇಳಿದಂತೆ ಅವರು ತಮ್ಮ ಮಗಳು ಸ್ಪೆಷಲ್ ಆಗುವಂತೆ ಬೆಳೆಸಿದ್ದಾರೆ ಎನ್ನಬಹುದು. ಕಾರಣ, ನಟಿ ಸಾಯಿ ಪಲ್ಲವಿ ಅವರು ಒಂಥರಾ ಸ್ಪೆಷಲ್ ಮಾತ್ರವಲ್ಲ, ಭಾರತದ ಮಹಾನ್ ಸ್ಟಾರ್ ನಟಿ ಹಾಗೂ ಕಲಾವಿದೆ.
ಚಿಕ್ಕಂದಿನಲ್ಲಿ ಅವರೇ ಅಂದುಕೊಂಡಂತೆ ಸಾಯಿ ಪಲ್ಲವಿ ಅವರು 'ಸ್ಪೆಷಲ್ ಕಿಡ್' ಕೂಡ ಹೌದು. ಇಂದು ಅವರು ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದು, ಆ ಪಾತ್ರ ಇಡೀ ಭಾರತ ಸೇರಿದಂತೆ ಜಗತ್ತಿನ ಗಮನ ಸೆಳೆಯುವದು, ಪ್ರಶಂಸೆಗೆ ಯೋಗ್ಯವಾಗುವುದು ಖಂಡಿತ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

